ಸಾಮಾನ್ಯ ಜನರು ಫ್ಲ್ಯಾಟ್ ಖರೀದಿಸಲು ಸರ್ಕಾರದಿಂದ ಆಫರ್

By Kannadaprabha NewsFirst Published Aug 14, 2021, 7:20 AM IST
Highlights
  •  ರಾಜ್ಯ ಸರ್ಕಾರ ಕೆಳ ಮಧ್ಯಮ ವರ್ಗ ಹಾಗೂ ಬಡವರು ಫ್ಲ್ಯಾಟ್‌ ಖರೀದಿಸುವುದಕ್ಕೆ ಉತ್ತೆಜನ
  • 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಖರೀದಿಗೆ ನಿಗದಿ ಮಾಡಿದ್ದ ಶೇ.5ರಷ್ಟುಮುದ್ರಾಂಕ ಶುಲ್ಕವನ್ನು ಶೇ.3ಕ್ಕೆ ಇಳಿಕೆ

ಬೆಂಗಳೂರು (ಆ.14): ರಾಜ್ಯ ಸರ್ಕಾರ ಕೆಳ ಮಧ್ಯಮ ವರ್ಗ ಹಾಗೂ ಬಡವರು ಫ್ಲ್ಯಾಟ್‌ ಖರೀದಿಸುವುದನ್ನು ಉತ್ತೇಜಿಸಲು ರಾಜ್ಯದಲ್ಲಿ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಖರೀದಿಗೆ ನಿಗದಿ ಮಾಡಿದ್ದ ಶೇ.5ರಷ್ಟುಮುದ್ರಾಂಕ ಶುಲ್ಕವನ್ನು ಶೇ.3ಕ್ಕೆ ಇಳಿಕೆ ಮಾಡಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ. 

ಕಳೆದ ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು 20 ಲಕ್ಷ ರು.ವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ಮೊದಲನೇ ನೋಂದಣಿ ವೇಳೆ ಶೇ.5ರಷ್ಟಿರುವ ಮುದ್ರಾಂಕ ಶುಲ್ಕವನ್ನು ಶೇ.2ಕ್ಕೆ ಹಾಗೂ 20ರಿಂದ 35 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ಮುದ್ರಾಂಕ ಶುಲ್ಕವನ್ನು ಶೇ.5ರಿಂದ 3ಕ್ಕೆ ಇಳಿಕೆ ಮಾಡಿತ್ತು. 

ದುಬೈನಿಂದ ಭಾರತದಲ್ಲಿರೋ ಮನೆ ನಿಯಂತ್ರಣ: ಪಾಲಿಕಾಬ್ HOHM ಅಟೋಮೇಶನ್‌ನಿಂದ ಸಾಕಾರ!

ಕಳೆದ ಮಾರ್ಚಲ್ಲಿ ಮಂಡಿಸಿದ 2021-22ನೇ ಸಾಲಿನ ಬಜೆಟ್‌ ವೇಳೆ 35ರಿಂದ 45 ಲಕ್ಷ ರು. ಮೌಲ್ಯದ ಫ್ಲ್ಯಾಟ್‌ಗಳ ನೋಂದಣಿ ವೇಳೆಯೂ ಮುದ್ರಾಂಕ ಶುಲ್ಕವನ್ನು 5ರಿಂದ ಶೇ.3ಕ್ಕೆ ಇಳಿಕೆ ಮಾಡುವುದಾಗಿ ಘೋಷಿಸಿತ್ತು. ಇದೀಗ ಅನುಷ್ಠಾನಕ್ಕೆ ತಂದಿದೆ.

click me!