
ಮುಂಬೈ(ಫೆ.01): ಹಾಲಿ ಎನ್‌ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆ ಆರಂಭವಾಗುತ್ತಿದ್ದಂತೆಯೇ, ಇತ್ತ ಭಾರತೀಯ ಷೇರುಮಾರುಕಟ್ಟೆ ಮೇಲೆ ಬಜೆಟ್ ಸಕಾರಾತ್ಮಕ ಪರಿಣಾಮ ಬೀರಿದೆ. ಸೆನ್ಸೆಕ್ಸ್ 160 ಅಂಕಗಳ ಏರಿಕೆ ಕಂಡಿದೆ.
ಇಂದು ಷೇರುಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಭಾರತೀಯ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಪರಿಣಾಮ ಸೆನ್ಸೆಕ್ಸ್ 160 ಅಂಕಗಳ ಏರಿಕೆಯೊಂದಿಗೆ 36,448.30 ಗಳಿಗೆ ಏರಿಕೆಯಾಗಿದೆ.
ಅಂತೆಯೇ ನಿಫ್ಟಿ ಕೂಡ 57 ಅಂಕಗಳ ಏರಿಕೆ ಕಂಡಿದ್ದು, 10,869 ಅಂಕಗಳಿಗೆ ಏರಿಕೆಯಾಗಿದೆ. ಇನ್ನು ಇಂದಿನ ವಹಿವಾಟಿನಲ್ಲಿ ದೇಶೀಯ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಪರಿಣಾಮ ಭಾರತೀಯ ಷೇರುಗಳ ಮೌಲ್ಯ ಕೂಡ ಹೆಚ್ಚಾಗಿದೆ.
ಇನ್ನು ಮಾರುಕಟ್ಟೆ ಚೇತರಿಕೆ ಕಾಣುವ ಮೂಲಕ ಕಳೆದ ನಾಲ್ಕು ತಿಂಗಳಲ್ಲೇ ಸೂಚ್ಯಂಕ ಗರಿಷ್ಠ ಮಟ್ಟಕ್ಕೆ ತಲುಪಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.