
ನವದೆಹಲಿ(ಫೆ.01): ಇಂದು ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾಗಲಿದ್ದು, ಹಂಗಾಮಿ ಹಣಕಾಸು ಸಚಿವ ಪಿಯೂಷ್ ಗೋಯಲ್ ಈಗಾಗಲೇ ಬಜೆಟ್ ಪ್ರತಿಯೊಂದಿಗೆ ಲೋಕಸಭೆ ತಲುಪಿದ್ದಾರೆ.
ಈ ನಡುವೆ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಸೋರಿಕೆಯಾಗಿದೆ ಎಂದು ವಿಪಕ್ಷ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ, ಸರ್ಕಾರ ಬಜೆಟ್ ಮಂಡನೆಗೂ ಮುನ್ನವೇ ತಮ್ಮ ಪರವಾಗಿರುವ ಮಾಧ್ಯಮಗಳಿಗೆ ಬಜೆಟ್ ಅಂಶಗಳನ್ನು ಸೋರಿಕೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರ ಉದ್ದೇಶಪೂವರ್ವಕವಾಗಿ ಕೆಲ ಮಾಧ್ಯಮಗಳಿಗೆ ಬಜೆಟ್ ಅಂಶಗಳನ್ನು ಸೋರಿಕೆ ಮಾಡಿದ್ದು, ಇದು ಸಂವಿಧಾನ ಮತ್ತು ದೇಶದ ಜನತೆಗೆ ಮಾಡಿದ ಅಪಮಾನ ಎಂದು ತಿವಾರಿ ಹರಿಹಾಯ್ದಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.