ಖಾತೆದಾರರಿಗೆ 'ಹುಷಾರ್' ಸಂದೇಶ ಕಳುಹಿಸಿದ ಎಸ್‌ಬಿಐ!

By Web DeskFirst Published Mar 15, 2019, 4:20 PM IST
Highlights

ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ ಎಸ್‌ಬಿಐ| ಸಾಮಾಜಿಕ ಜಾಲತಾಣಗಳ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಹೊಸ ಜಾಲ| ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ನವೀಕರಣಗೊಳಿಸುವುದಾಗಿ ಕರೆ| ಒ.ಟಿ.ಪಿ ಮೂಲಕ ಖಾತೆಯಲ್ಲಿನ ಹಣ ದೋಚುತ್ತಿರುವ ಖದೀಮರು| ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಬ್ಯಾಂಕಿನ ಗಮನಕ್ಕೆ ತರುವಂತೆ ಮನವಿ|

ನವದೆಹಲಿ(ಮಾ.15): ತನ್ನ ಗ್ರಾಹಕರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಖಾತೆಗೆ ಕನ್ನ ಹಾಕುತ್ತಿರುವ ಹೊಸ ಜಾಲದ ಬಗ್ಗೆ ಎಚ್ಚರದಿಂದ ಇರುವಂತೆ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಹೇಳಿದೆ. 

ಕ್ರೆಡಿಟ್‌, ಡೆಬಿಟ್ ಕಾರ್ಡ್‌ಗಳನ್ನು ನವೀಕರಣಗೊಳಿಸುವುದಾಗಿ ಕರೆ ಮಾಡಿ, ಸಾಮಾಜಿಕ ಜಾಲತಾಣದ ಮೂಲಕ ಒ.ಟಿ.ಪಿ. ಕಳುಹಿಸಿ ಖಾತೆಯಲ್ಲಿನ ಹಣ ದೋಚಲಾಗುತ್ತಿದೆ ಎಂದು ಎಸ್‌ಬಿಐ ಎಚ್ಚರಿಕೆ ನೀಡಿದೆ.

Stay alert to stay safe! Fake offers on messages via WhatsApp and social media could lead you astray. Report any untoward incident by calling at 1-800-111109. pic.twitter.com/vGGdXZlCVJ

— State Bank of India (@TheOfficialSBI)

ಅನುಮಾನಾಸ್ಪದ ಕರೆ ಅಥವಾ ಸಂದೇಶಗಳು ಬಂದಲ್ಲಿ ತಕ್ಷಣ 1 800 111109 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಬ್ಯಾಂಕಿನ ಗಮನಕ್ಕೆ ತರುವಂತೆ ಎಸ್‌ಬಿಐ ಮನವಿ ಮಾಡಿದೆ.

click me!