
ನವದೆಹಲಿ (ಸೆ.7): ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಹಿರಿಯ ನಾಗರಿಕರಿಗೆ ಅಧಿಕ ಬಡ್ಡಿ ನೀಡುವ ವಿಶೇಷ ಸ್ಥಿರ ಠೇವಣಿ (ಎಫ್ ಡಿ) ಯೋಜನೆಯನ್ನು ಹೊಂದಿದೆ. ಇದನ್ನು 'ಎಸ್ ಬಿಐ ವಿಕೇರ್ ಠೇವಣಿ ಯೋಜನೆ' ಎಂದು ಕರೆಯಲಾಗುತ್ತಿದ್ದು, ಇದು ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಹಿರಿಯ ನಾಗರಿಕರಿಗೆ ಹೆಚ್ಚುವರಿ ಹಣಕಾಸಿನ ಸುರಕ್ಷತೆ ಕು ಎಂಬ ಉದ್ದೇಶದಿಂದ ರೂಪಿಸಿರುವ ಈ ಯೋಜನೆ 6 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಹಿರಿಯರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತಿದೆ. 2020ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಅಂತಿಮ ಗಡುವನ್ನು ಈಗಾಗಲೇ ಅನೇಕ ಬಾರಿ ವಿಸ್ತರಿಸಲಾಗಿದೆ. ಈ ಮೊದಲು 2023ರ ಮಾರ್ಚ್ 31ರಂದು ಕೊನೆಗೊಳ್ಳಲಿದೆ ಎಂದು ಹೇಳಲಾಗಿತ್ತು. ಆ ಬಳಿಕ ಅಂತಿಮ ಗಡುವನ್ನು ಜೂನ್ 30ಕ್ಕೆ ವಿಸ್ತರಿಸಲಾಗಿತ್ತು. ಅದಾದ ಬಳಿಕ ಮತ್ತೊಮ್ಮೆ ಗಡುವು ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 30ರ ತನಕ ಅವಕಾಶ ನೀಡಲಾಗಿದೆ. ಎಸ್ ಬಿಐ ವಿಕೇರ್ ಠೇವಣಿ ಯೋಜನೆಯಲ್ಲಿ ಹಿರಿಯ ನಾಗರಿಕರಿಗೆ 5 ವರ್ಷದಿಂದ 10 ವರ್ಷಗಳವರೆಗೆ ಹೂಡಿಕೆ ಮಾಡಲು ಅವಕಾಶವಿದೆ. ಅಲ್ಲದೆ, ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಬಡ್ಡಿ ಕೂಡ ನೀಡಲಾಗುತ್ತದೆ.
ಅಧಿಕ ಬಡ್ಡಿದರ
ಎಸ್ ಬಿಐ ವಿ ಕೇರ್ ಠೇವಣಿ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರಿಗೆ ಎಫ್ ಡಿ ಮೇಲೆ ಅಧಿಕ ಬಡ್ಡಿ ನೀಡಲಾಗುತ್ತದೆ. 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಎಫ್ ಡಿಗಳಿಗೆ ಸಾಮಾನ್ಯ ಎಫ್ ಡಿಗೆ ನೀಡುವ ಬಡ್ಡಿಗಿಂತ 50 ಬೇಸಿಸ್ ಪಾಯಿಂಟ್ಸ್ ಅಥವಾ ಶೇ.0.5ರಷ್ಟು ಅಧಿಕ ಬಡ್ಡಿ ನೀಡಲಾಗುತ್ತಿದೆ. ಏಳು ದಿನಗಳಿಂದ 10 ವರ್ಷಗಳ ಅವಧಿಯ ಸಾಮಾನ್ಯ ಎಫ್ ಡಿ ಬಡ್ಡಿದರ ಪ್ರಸ್ತುತ ಶೇ.3.50 ಹಾಗೂ ಶೇ.7.50ರ ನಡುವೆ ಇದೆ. 60ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಎಸ್ ಬಿಐ ಅಮೃತ್ ಕಲಶ್ ಎಫ್ ಡಿ ಯೋಜನೆ ಅಂತಿಮ ಗಡುವು ಮತ್ತೊಮ್ಮೆ ವಿಸ್ತರಣೆ; ಡಿ.31ರ ತನಕ ಕಾಲಾವಕಾಶ
ಫ್ಲೆಕ್ಸಿಬಲ್ ಹೂಡಿಕೆ ಅವಧಿ
ಹಿರಿಯ ನಾಗರಿಕರು ಈ ವಿಶೇಷ ಎಫ್ ಡಿ ಯೋಜನೆಯಲ್ಲಿ ಕನಿಷ್ಠ 5 ವರ್ಷ ಅಥವಾ ಗರಿಷ್ಠ 10 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ಹೀಗಾಗಿ ಅವರವರ ಅಗತ್ಯ, ಅನುಕೂಲಕ್ಕೆ ತಕ್ಕಂತೆ ನಿರ್ದಿಷ್ಟ ಅವಧಿಗೆ ಹೂಡಿಕೆ ಮಾಡುವ ಅವಕಾಶ ಈ ಯೋಜನೆಯಲ್ಲಿದೆ.
ತೆರಿಗೆ ಪ್ರಯೋಜನ ಇಲ್ಲ
ಅಂದಹಾಗೇ ಎಸ್ ಬಿಐ ವಿ ಕೇರ್ ಠೇವಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಯಾವುದೇ ತೆರಿಗೆ ಪ್ರಯೋಜನ ಸಿಗೋದಿಲ್ಲ. ಈ ಯೋಜನೆ ಅಧಿಕ ಬಡ್ಡಿದರ ನೀಡುವ ಕಾರಣ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಯಾವುದೇ ತೆರಿಗೆ ಕಡಿತಗಳನ್ನು ಪಡೆಯಲು ಅರ್ಹತೆ ಹೊಂದಿಲ್ಲ.
ಯುಪಿಐಗೆ ಎಸ್ ಬಿಐ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡೋದು ಹೇಗೆ? ಇಲ್ಲಿದೆ ಸರಳ ವಿಧಾನ
ಎಸ್ ಬಿಐ ಅಮೃತ್ ಕಲಶ್ ಎಫ್ ಡಿ
ಇದು ನಿಗದಿತ ಅವಧಿಯ ಸ್ಥಿರ ಠೇವಣಿ ಯೋಜನೆಯಾಗಿದ್ದು, 400 ದಿನಗಳ ಅವಧಿಯನ್ನು ಹೊಂದಿದೆ. ಈ ಯೋಜನೆ ಸಾಮಾನ್ಯ ನಾಗರಿಕರಿಗೆ ಶೇ.7.10 ಬಡ್ಡಿದರ ಒದಗಿಸುತ್ತಿದೆ. ಇನ್ನು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಶೇ.0.50ರಷ್ಟು ಬಡ್ಡಿದರ ನೀಡುತ್ತಿದೆ. ಇದರಿಂದ ಹಿರಿಯ ನಾಗರಿಕರಿಗೆ ಶೇ.7.60ರಷ್ಟು ರಿಟರ್ನ್ ಸಿಗಲಿದೆ. ಈ ಯೋಜನೆ 2023ರ ಡಿಸೆಂಬರ್ ತನಕ ಲಭ್ಯವಿರಲಿದೆ. ಗ್ರಾಹಕರು ಎಸ್ ಬಿಐ ಅಮೃತ್ ಕಲಶ್ ಖಾತೆಯನ್ನು ಬ್ಯಾಂಕಿನ ಶಾಖೆಗೆ ಭೇಟಿ ನೀಡಿ ಅಲ್ಲಿ ತೆರೆಯಬಹುದು ಅಥವಾ ಎಸ್ ಬಿಐ ಯೋನೋ ಆಪ್ ಮೂಲಕ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಅಮೃತ್ ಕಲಶ್ (Amrit Kalash) ಠೇವಣಿ ಮೇಲಿನ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಹಾಗೂ ಅರ್ಧವಾರ್ಷಿಕ ಅವಧಿಯಲ್ಲಿ ಪಾವತಿಸಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.