SBI ಗ್ರಾಹಕರೇ ಗಮನಿಸಿ; ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಹೀಗೆ ಮಾಡಿ

Published : Mar 31, 2023, 06:40 PM IST
SBI ಗ್ರಾಹಕರೇ ಗಮನಿಸಿ; ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಹೀಗೆ ಮಾಡಿ

ಸಾರಾಂಶ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್, ಎಟಿಎಂ ಮೂಲಕ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಸುಲಭವಾಗಿ ಲಿಂಕ್ ಮಾಡಬಹುದು. ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡೋದ್ರಿಂದ ಖಾತೆದಾರರಿಗೆ ತಮ್ಮ ಖಾತೆಯಿಂದ ನಡೆಯುವ ಎಲ್ಲ ವಹಿವಾಟುಗಳ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಗ್ರಾಹಕನ ಬ್ಯಾಂಕ್ ಖಾತೆಯಿಂದ ಯಾವುದಾದ್ರೂ ಅನಧಿಕೃತ ಹಣದ ವಹಿವಾಟು ನಡೆದಿದ್ದರೂ ತಕ್ಷಣ ಮಾಹಿತಿ ಸಿಗುತ್ತದೆ.   

Business Desk:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ ಬಿಐ) ಗ್ರಾಹಕರು ತಮ್ಮ ಎಲ್ಲ ವಹಿವಾಟುಗಳ ಬಗ್ಗೆ ಮಾಹಿತಿ ಹೊಂದಿರಲು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಉಳಿತಾಯ ಖಾತೆಯೊಂದಿಗೆ ನೋಂದಣಿ ಮಾಡೋದು ಅಗತ್ಯ. ಇದರಿಂದ ಖಾತೆದಾರರಿಗೆ ತಮ್ಮ ಖಾತೆಯಿಂದ ನಡೆಯುವ ಎಲ್ಲ ವಹಿವಾಟುಗಳ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಅಲ್ಲದೆ, ಗ್ರಾಹಕನ ಬ್ಯಾಂಕ್ ಖಾತೆಯಿಂದ ಯಾವುದಾದ್ರೂ ಅನಧಿಕೃತ ಹಣದ ವಹಿವಾಟು ನಡೆದಿದ್ದರೂ ತಕ್ಷಣ ಮಾಹಿತಿ ಸಿಗುತ್ತದೆ. ಈ ಎಲ್ಲ ಕಾರಣಗಳಿಂದ ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಎಸ್ ಬಿಐ ಉಳಿತಾಯ ಖಾತೆಯೊಂದಿಗೆ ಲಿಂಕ್ ಆಗಿರೋದು ಮುಖ್ಯ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿವೆ. ಇಂಥ ಸಮಯದಲ್ಲಿ ನಮ್ಮ ಬ್ಯಾಂಕ್ ಖಾತೆಯ ಸುರಕ್ಷತೆ ದೃಷ್ಟಿಯಿಂದ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡೋದು ಅಗತ್ಯ. ಆದರೆ, ಕೆಲವರು ಇನ್ನೂ ಬ್ಯಾಂಕ್ ಖಾತೆಗೆ ತಮ್ಮ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರೋದಿಲ್ಲ. ಒಂದು ವೇಳೆ ನೀವು ಎಸ್ ಬಿಐ ಗ್ರಾಹಕರಾಗಿದ್ದು, ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಉಳಿತಾಯ ಖಾತೆಗೆ ಜೋಡಣೆ ಮಾಡದಿದ್ರೆ ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ಲಿಂಕ್ ಮಾಡಿ.

ಎಸ್ ಬಿಐ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಹೇಗೆ?
- www.onlinesbi.com ಗೆ ಲಾಗಿನ್ ಆಗಿ.
-ಆ ಬಳಿಕ ಪ್ರೊಫೈಲ್ ಗೆ ಹೋಗಿ ವೈಯಕ್ತಿಕ ಮಾಹಿತಿ ವಿಭಾಗಕ್ಕೆ ಭೇಟಿ ನೀಡಿ. 
-ಈಗ 'My Accounts'ಅಡಿಯಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸಿ ಆಯ್ಕೆ ಮಾಡಿ.
-ಮುಂದಿನ ಪುಟದಲ್ಲಿ ಖಾತೆ ಸಂಖ್ಯೆ ಆಯ್ಕೆ ಮಾಡಿ. ಮೊಬೈಲ್ ಸಂಖ್ಯೆ ನಮೂದಿಸಿ ಹಾಗೂ Submit ಮೇಲೆ ಕ್ಲಿಕ್ ಮಾಡಿ.
-ಈಗ ನೋಂದಾಯಿತ ಮೊಬೈಲ್ ಸಂಖ್ಯೆಯ ಕೊನೆಯ ಎರಡು ಅಂಕೆಗಳು ನಿಮಗೆ ಕಾಣಿಸುತ್ತವೆ.

ಯುಪಿಐ ಬಳಕೆದಾರರಿಗೆ ಉಚಿತ ನಿಜ, ಆದರೆ ಈ 9 ವಿಷಯಗಳು ನಿಮಗೆ ತಿಳಿದಿರಲಿ!

ಎಸ್ ಬಿಐ ಶಾಖೆಯಲ್ಲಿ ಅಪ್ಡೇಟ್ ಮಾಡೋದು ಹೇಗೆ?
ನಿಮ್ಮ ಸಮೀಪದ ಎಸ್ ಬಿಐ (SBI) ಶಾಖೆಗೆ ಭೇಟಿ ನೀಡಿ. ಮನವಿ ಪತ್ರ ಭರ್ತಿ ಮಾಡಿ. ಆ ಬಳಿಕ ಅದನ್ನು ಸಲ್ಲಿಕೆ ಮಾಡಿ. ಅಗತ್ಯ ಪರಿಶೀಲನೆಗಳ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆಯನ್ನು ಲಿಂಕ್ (link) ಮಾಡುತ್ತಾರೆ. ಅಪ್ಡೇಟ್ ಸ್ಟೇಟಸ್ ಬಗ್ಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ ಎಂಎಸ್ (SMS) ಬರುತ್ತದೆ.

ಏ.1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ?ಇಲ್ಲಿದೆ ಮಾಹಿತಿ

ಎಸ್ ಬಿಐ ಎಟಿಎಂ ಮೂಲಕ ಅಪ್ಡೇಟ್
ಎಟಿಎಂ ಮೂಲಕ ಕೂಡ ಮೊಬೈಲ್ ಸಂಖ್ಯೆ ಅಪ್ಡೇಟ್ (udate) ಮಾಡಬಹುದು. ನಿಮ್ಮ ಸಮೀಪದ ಎಟಿಎಂ (ATM) ಕೇಂದ್ರಕ್ಕೆ ಭೇಟಿ ನೀಡಿ. ಆ ಬಳಿಕ ನೋಂದಣಿ ಆಯ್ಕೆ (Registration option) ಆರಿಸಿ. ನಿಮ್ಮ ಎಟಿಎಂ ಪಿನ್ ನಮೂದಿಸಿ. ಆ ಬಳಿಕ ಸ್ಕ್ರೀನ್ ನಲ್ಲಿ ಕಾಣಿಸುವ ಆಯ್ಕೆಗಳಿಂದ ಮೊಬೈಲ್ ಸಂಖ್ಯೆ ನೋಂದಣಿ ಆಯ್ಕೆಯನ್ನು ಆರಿಸಿ. ಸ್ಕ್ರೀನ್ ನಲ್ಲಿ ಕಾಣಿಸುವ ಆಯ್ಕೆಗಳಿಂದ ಮೊಬೈಲ್ ಸಂಖ್ಯೆ ಬದಲಾವಣೆ ಆಯ್ಕೆ ಆರಿಸಿ. ಆ ಬಳಿಕ ನಿಮ್ಮ ಹಳೆಯ ಮೊಬೈಲ್ ಸಂಖ್ಯೆ (Mobile number) ನಮೂದಿಸಿ. ಆ ಬಳಿಕ ಅದನ್ನು ದೃಢೀಕರಿಸಿ. ಆ ಬಳಿಕ ನಿಮ್ಮ ಹೊಸ ಮೊಬೈಲ್ ಸಂಖ್ಯೆ ನಮೂದಿಸುವಂತೆ ಕೇಳಲಾಗುತ್ತದೆ. ಅದನ್ನು ನಮೂದಿಸಿ ದೃಢೀಕರಿಸಿ. ಬೇರೆ ಬೇರೆ ಒಟಿಪಿಗಳನ್ನು  ನಿಮ್ಮ ಹೊಸ ಹಾಗೂ ಹಳೆಯ ಮೊಬೈಲ್ ಸಂಖ್ಯೆಗಳಿಗೆ ಕಳುಹಿಸಲಾಗುತ್ತದೆ. ಈ ಒಟಿಪಿ (OTP) ನಮೂದಿಸಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ಅಪ್ಡೇಟ್ (Update) ಆಗುತ್ತದೆ. 


 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌