ಎಲ್ಐಸಿಯ ಈ ಎರಡು ಪಾಲಿಸಿಗಳು ನಾಳೆಯಿಂದ ಲಭ್ಯವಿಲ್ಲ, ಏಕೆ? ಇಲ್ಲಿದೆ ಮಾಹಿತಿ

By Suvarna NewsFirst Published Mar 31, 2023, 3:24 PM IST
Highlights

ಹೊಸ ಆರ್ಥಿಕ ವರ್ಷಕ್ಕೆ ಕಾಲಿಡುವ ಸಂದರ್ಭದಲ್ಲಿ ಉಳಿತಾಯ, ಹೂಡಿಕೆಗೆ ಸಂಬಂಧಿಸಿದ ಕೆಲವು ಯೋಜನೆಗಳು ಅಂತ್ಯವಾಗುತ್ತಿವೆ. ಅವುಗಳಲ್ಲಿ ಎಲ್ಐಸಿ ಧನ್ ವರ್ಷ ಪಾಲಿಸಿ ಹಾಗೂ ಎಲ್ಐಸಿ ಪ್ರಧಾನ ಮಂತ್ರಿ ವಯೋ ವಂದನ ಯೋಜನೆ ಕೂಡ ಸೇರಿವೆ. ಈ ಎರಡೂ ಯೋಜನೆಗಳು ಮಾ.31ಕ್ಕೆ ಅಂತ್ಯಗೊಳ್ಳುತ್ತಿವೆ. ಈ ಯೋಜನೆಗಳು ಏ.1ರಿಂದ ಲಭ್ಯವಿಲ್ಲ. 
 

ನವದೆಹಲಿ (ಮಾ.31): ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಎಲ್ಲ ವರ್ಗದ ಜನರಿಗೂ ಹೊಂದಿಕೆಯಾಗುವಂತಹ ಪಾಲಿಸಿಗಳನ್ನು ಆಗಾಗ ಪರಿಚಯಿಸುತ್ತಲೇ ಇರುತ್ತದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲ ವಯೋಮಾನದವರಿಗೂ ಎಲ್ಐಸಿ ಪಾಲಿಸಿಗಳನ್ನು ರೂಪಿಸಿದೆ. ಇದೇ ಕಾರಣಕ್ಕೆ ಇಂದಿಗೂ ಅನೇಕರು ಎಲ್ಐಸಿ ಪಾಲಿಸಿಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಾರೆ. ಎಲ್ ಐಸಿ ಸರ್ಕಾರಿ ಬೆಂಬಲಿತ ಸಂಸ್ಥೆಯಾಗಿರುವ ಕಾರಣ ಇದರಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಕೂಡ ಹೂಡಿಕೆದಾರರಲ್ಲಿ ಇರುತ್ತದೆ. ಇನ್ನು ಎಲ್ಐಸಿಯ ಕೆಲವು ಪಾಲಿಸಿಗಳಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ರಿಟರ್ನ್ಸ್ ಕೂಡ ಸಿಗುತ್ತದೆ. ಹೀಗಿರುವಾಗ ಇಂದು ಅಂದ್ರೆ ಮಾ.31ರಂದು ಎಲ್ಐಸಿ ಎರಡು ಹೂಡಿಕೆ ಯೋಜನೆಗಳನ್ನು ಕ್ಲೋಸ್ ಮಾಡುತ್ತಿದೆ. ಅವೇ ಎಲ್ಐಸಿ ಪ್ರಧಾನ ಮಂತ್ರಿ ವಂದನ ವಯಾ ಯೋಜನ ಹಾಗೂ ಎಲ್ಐಸಿ ಧನ ವರ್ಷ ಪ್ಲ್ಯಾನ್. ಇಂದಿನಿಂದ ಈ ಎರಡು ಯೋಜನೆಗಳು ಖರೀದಿಗೆ ಲಭ್ಯವಿಲ್ಲ. ನೀವು ಈ ಎರಡು ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದ್ದರೂ ಲಭಿಸೋದಿಲ್ಲ. ಹಾಗಾದ್ರೆ ಈ ಎರಡು ಯೋಜನೆಗಳ ವಿಶೇಷತೆಗಳೇನು? ಇಲ್ಲಿದೆ ಮಾಹಿತಿ.

ಎಲ್ಐಸಿ ಧನ್ ವರ್ಷ ಪಾಲಿಸಿ
ಎಲ್ಐಸಿ ಧನ್ ವರ್ಷ ಪಾಲಿಸಿ ಷೇರುಪೇಟೆಗೆ ಜೋಡಣೆಯಾಗದ, ವೈಯಕ್ತಿಕ, ಉಳಿತಾಯ ಹಾಗೂ ಸಿಂಗಲ್ ಪ್ರೀಮಿಯಂ ವಿಮಾ ಯೋಜನೆಯಾಗಿದೆ. ಇದು ಉಳಿತಾಯ ಹಾಗೂ ಭದ್ರತೆ ಎರಡನ್ನೂ ಒದಗಿಸುತ್ತದೆ. ಇನ್ನು ಪಾಲಿಸಿದಾರರು ಮರಣ ಹೊಂದಿದ ಸಂದರ್ಭದಲ್ಲಿ ಡೆತ್ ಬೆನಿಫಿಟ್ ಸೌಲಭ್ಯವನ್ನು ಕೂಡ ಈ ಯೋಜನೆ ಒದಗಿಸುತ್ತದೆ. ಹಾಗೆಯೇ ಈ ಪ್ಲ್ಯಾನ್ ನಲ್ಲಿ ಪ್ರೀಮಿಯಂಗಳನ್ನು ಆಗಾಗ ಭರ್ತಿ ಮಾಡಬೇಕಾದ ಅಗತ್ಯವೂ ಇಲ್ಲ. ಇನ್ನು ಈ ಯೋಜನೆಯಲ್ಲಿ ಎರಡು ಹೂಡಿಕೆ ಆಯ್ಕೆಗಳು ಲಭ್ಯವಿವೆ. ಒಂದು ಆಯ್ಕೆಯು ವಿಮಾ ಮೊತ್ತದ 10 ಪಟ್ಟು ಮತ್ತು ಇನ್ನೊಂದು ಆಯ್ಕೆಯು ವಿಮಾ ಮೊತ್ತದ 1.25 ಪಟ್ಟು ಹಣವನ್ನು ಮೆಚ್ಯುರಿಟಿ ಬಳಿಕ ಒದಗಿಸುತ್ತವೆ. ಪಾಲಿಸಿದಾರ 10 ಅಥವಾ 15 ವರ್ಷಗಳ ಅವಧಿಗೆ ಪಾಲಿಸಿಯನ್ನು ಆಯ್ಕೆ ಮಾಡಬಹುದು. 

ಯುಪಿಐ ಬಳಕೆದಾರರಿಗೆ ಉಚಿತ ನಿಜ, ಆದರೆ ಈ 9 ವಿಷಯಗಳು ನಿಮಗೆ ತಿಳಿದಿರಲಿ!

10 ವರ್ಷಗಳ ಅವಧಿಯ ಈ ಪಾಲಿಸಿಗೆ ಚಂದಾದಾರರಾಗಲು ಕನಿಷ್ಠ ವಯೋಮಿತಿ 8 ವರ್ಷಗಳು. ಹಾಗೆಯೇ 15 ವರ್ಷಗಳ ಅವಧಿಯ ಪಾಲಿಸಿಗೆ ಚಂದಾದಾರರಾಗಲು ಕನಿಷ್ಠ ವಯಸ್ಸು 3ವರ್ಷ. ಇನ್ನು ಈ ಪಾಲಿಸಿ ಆಯ್ಕೆ ಮಾಡಿಕೊಳ್ಳಲು ವಯಸ್ಸಿನ ಗರಿಷ್ಠ ಮಿತಿ ಅವಧಿ ಹಾಗೂ ಡೆತ್ ಕ್ಲೈಮ್ ಆಧರಿಸಿ 35ರಿಂದ 60 ವರ್ಷಗಳ ತನಕ ನಿಗದಿಪಡಿಸಲಾಗಿದೆ. ಅಂದರೆ ಗರಿಷ್ಠ ವಯೋಮಿತಿ 60 ವರ್ಷಗಳು.
ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೂಲ ಮೊತ್ತ 1,25,000 ರೂ. ಗರಿಷ್ಠ ಮೂಲ ಮೊತ್ತಕ್ಕೆ ಯಾವುದೇ ಮಿತಿ ವಿಧಿಸಿಲ್ಲ. ಪಾಲಿಸಿ ಕನಿಷ್ಠ ಮೆಚ್ಯೂರಿಟಿ ವಯಸ್ಸು 18 ವರ್ಷಗಳು.

ಏ.1ರಿಂದ ಯಾವೆಲ್ಲ ನಿಯಮಗಳಲ್ಲಿ ಬದಲಾವಣೆ ?ಇಲ್ಲಿದೆ ಮಾಹಿತಿ

ಎಲ್ಐಸಿ ಪ್ರಧಾನ ಮಂತ್ರಿ ವಯೋ ವಂದನ ಯೋಜನೆ (PMVVY)
ಈ ಯೋಜನೆಯನ್ನು ಎಲ್ಐಸಿ 2017ರಲ್ಲಿ ಪ್ರಾರಂಭಿಸಿತು. ಇದು ವಿಮೆ ಹಾಗೂ ಪಿಂಚಣಿ ಎರಡನ್ನೂ ಒಳಗೊಂಡಿರುವ ಯೋಜನೆಯಾಗಿದ್ದು, ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸುತ್ತದೆ. ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಈ ಪಿಂಚಣಿ ಯೋಜನೆಯನ್ನು ಒದಗಿಸುತ್ತಿದೆ. ಹಿರಿಯ ನಾಗರಿಕರು ಇದರಲ್ಲಿ 15ಲಕ್ಷ ರೂ. ತನಕ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು 2023ರ ಮಾ.31ರ ತನಕ ಅವಕಾಶವಿದೆ. 10 ವರ್ಷಗಳ ಅವಧಿಗೆ ಪಿಎಂವಿವಿವೈ ಶೇ.7.4ರಷ್ಟು ಬಡ್ಡಿದರ ನೀಡುತ್ತದೆ. ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಡೆಯಲು ಅವಕಾಶವಿದೆ. ಅಂದ್ರೆ ನಿಮ್ಮ ಹೂಡಿಕೆಯನ್ನು(Investment) ಆಧರಿಸಿ ಮಾಸಿಕ  10,000ರೂ.ನಿಂದ  9,250 ರೂ. ಪಿಂಚಣಿ (Pension) ಪಡೆಯಬಹುದು. ಈ ಯೋಜನೆಯಲ್ಲಿ 10 ವರ್ಷಗಳ ಅವಧಿಗೆ ಗರಿಷ್ಠ 15 ಲಕ್ಷ ರೂ. ಹೂಡಿಕೆ ಮಾಡಬಹುದು.

click me!