SBI Interest Rate Hike:ಮತ್ತೆ ಬಡ್ಡಿದರ ಹೆಚ್ಚಳ ಮಾಡಿದ ಎಸ್ ಬಿಐ; ಮುಂದಿನ ತಿಂಗಳಿಂದ ಗೃಹಸಾಲದ ಇಎಂಐ ಏರಿಕೆ

Published : May 23, 2022, 07:33 PM IST
SBI Interest Rate Hike:ಮತ್ತೆ ಬಡ್ಡಿದರ ಹೆಚ್ಚಳ ಮಾಡಿದ ಎಸ್ ಬಿಐ; ಮುಂದಿನ ತಿಂಗಳಿಂದ ಗೃಹಸಾಲದ ಇಎಂಐ ಏರಿಕೆ

ಸಾರಾಂಶ

*EBLR ಶೇ.7.05ರಷ್ಟು ಹೆಚ್ಚಳ  *ರೆಪೋ ಆಧಾರಿತ ಸಾಲ ನೀಡಿಕೆ ದರ ಶೇ. 6.65 ಏರಿಕೆ *ಹೊಸ ಬಡ್ಡಿ ದರ ಜೂನ್ 1ರಿಂದ ಜಾರಿಗೆ  *ಈ ತಿಂಗಳ ಪ್ರಾರಂಭದಲ್ಲಿ ಎಂಸಿಎಲ್ಆರ್ ಹೆಚ್ಚಳ ಮಾಡಿದ್ದ ಎಸ್ ಬಿಐ  

ನವದೆಹಲಿ (ಮೇ 23): ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗೃಹ ಸಾಲಗಳ (Home loans) ಮೇಲಿನ ಬಾಹ್ಯ ಬೆಂಚ್ ಮಾರ್ಕ್ ಸಾಲ ನೀಡಿಕೆ ದರವನ್ನು (EBLR) 50 ಬೇಸಿಸ್ ಪಾಯಿಂಟ್ಸ್ (basis points) ಅಂದ್ರೆ ಶೇ.7.05ರಷ್ಟು ಹೆಚ್ಚಳ ಮಾಡಿದೆ. ಇನ್ನು ರೆಪೋ ಆಧಾರಿತ ಸಾಲ ನೀಡಿಕೆ ದರವನ್ನು (RLLR) ಶೇ. 6.65 ಹಾಗೂ ಸಿಆರ್ ಪಿ ( CRP) ಸೇರಿದಂತೆ ಪರಿಷ್ಕರಿಸಲಾಗಿದೆ. ಎಸ್ ಬಿಐ (SBI) ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಮಾಹಿತಿ ಅನ್ವಯ ಹೊಸ ದರ ಜೂನ್ 1ರಿಂದ ಜಾರಿಗೆ ಬರಲಿದೆ. ಈ ತಿಂಗಳ ಪ್ರಾರಂಭದಲ್ಲಿ ಎಸ್ ಬಿಐ ಎಂಸಿಎಲ್ಆರ್ ಹೆಚ್ಚಳ ಮಾಡಿತ್ತು. 

ಭಾರತೀಯ ರಿಸರ್ವ್ ಬ್ಯಾಂಕ್ (RBI) ಈ ತಿಂಗಳ ಆರಂಭದಲ್ಲಿ ತುರ್ತು ಹಣಕಾಸು ನೀತಿ ಸಮಿತಿ (MPC) ಸಭೆ ನಡೆಸಿ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಎಸ್ ಬಿಐ (SBI) ಈ ನಿರ್ಧಾರ ಕೈಗೊಂಡಿದೆ.  ಎಸ್ ಬಿಐ ವೆಬ್ ಸೈಟ್ ನಲ್ಲಿರುವ ಮಾಹಿತಿ ಅನ್ವಯ ಬಡ್ಡಿದರ ಏರಿಕೆ ಹೀಗಿದೆ:
ಇಬಿಆರ್ (EBR) ಶೇ.7.05 ಹೆಚ್ಚಳ; EBLR = ಶೇ.7.05  + CRP
ಆರ್ ಎಲ್ ಎಲ್ ಆರ್ (RLLR) = ಶೇ.6.65 + CRP
ಈ ಹಿಂದೆ ಎಸ್ ಬಿಐ (SBI) ಇಬಿಎಲ್ ಆರ್ ದರ ( EBLR) ಶೇ.6.65 ಹಾಗೂ ಆರ್ ಎಲ್ ಎಲ್ಆರ್ (RLLR) ಶೇ.6.25 ರಷ್ಟಿತ್ತು. ಗ್ರಾಹಕರಿಗೆ ಗೃಹ ಸಾಲ ಹಾಗೂ ವಾಹನ ಸಾಲ ಸೇರಿದಂತೆ ಯಾವುದೇ ಸಾಲಗಳನ್ನು ನೀಡುವಾಗ ಕ್ರೆಡಿಟ್ ರಿಸ್ಕ್ ಪ್ರೀಮಿಯಂ (CRP) ಅನ್ನು ಇಬಿಎಲ್ ಆರ್ ಹಾಗೂ ಆರ್ ಎಲ್ ಎಲ್ ಆರ್ ಜೊತೆಗೆ ಸೇರಿಸಲಾಗುತ್ತದೆ. 

Steel Stocks Fall: ಷೇರು ಮಾರುಕಟ್ಟೆಯಲ್ಲಿ ನೆಲಕಚ್ಚಿದ ಸ್ಟೀಲ್ ಕಂಪನಿಗಳ ಷೇರುಗಳು; ಶೇ.13.2ರಷ್ಟು ಕುಸಿದ JSW

ಇಬಿಎಲ್ ಆರ್ (EBLR) ಅಂದ್ರೇನು?
ಎಸ್ ಬಿಐ (SBI) ರೆಪೋ ದರವನ್ನು (Repo rate) ಫ್ಲೋಟಿಂಗ್ ರೇಟ್ (Floating rate) ಗೃಹ ಸಾಲಗಳ ಬಾಹ್ಯ ಬೆಂಚ್ ಮಾರ್ಕ್ ಆಗಿ 2019ರ ಅಕ್ಟೋಬರ್ 1ರಿಂದ ಪರಿಗಣಿಸಿದೆ. ಇದನ್ನೇ ಬಾಹ್ಯ ಬೆಂಚ್ ಮಾರ್ಕ್ ಸಾಲ ನೀಡಿಕೆ ದರ (EBLR) ಎಂದು ಕರೆಯಲಾಗುತ್ತದೆ. ರಿಸರ್ವ್ ಬ್ಯಾಂಕಿನ (RBI) ಬಡ್ಡಿದರ (Interest rate) ಬದಲಾದಂತೆ ಇಬಿಎಲ್ ಆರ್ (EBLR) ಕೂಡ ಬದಲಾಗುತ್ತದೆ. ಅದರ ಹೊರತಾಗಿ ಬೇರೆ ಯಾವುದೇ ಸಂದರ್ಭದಲ್ಲೂ ಇಬಿಎಲ್ ಆರ್ ಬದಲಾಸಗುವುದಿಲ್ಲ.

ಆರ್ ಎಲ್ ಎಲ್ ಆರ್ (RLLR) ಅಂದ್ರೇನು?
ರೆಪೋ ಆಧಾರಿತ ಸಾಲ ನೀಡಿಕೆ ದರ ಅಥವಾ ಆರ್ ಎಲ್ ಎಲ್ ಆರ್ ಆರ್ ಬಿಐ ರೆಪೋ ದರದ ಮೇಲೆ ಅವಲಂಬಿತವಾಗಿರುತ್ತದೆ. ರೆಪೋ ದರದಲ್ಲಿ ಹೆಚ್ಚಳ ಅಥವಾ ಇಳಿಕೆಯಾದ ಸಂದರ್ಭದಲ್ಲಿ ಆರ್ ಎಲ್ ಎಲ್ ಆರ್ ಬದಲಾಯಿಸಲಾಗುತ್ತದೆ. ಇದು ಬ್ಯಾಂಕಿನಿಂದ ಬ್ಯಾಂಕಿಗೆ ಬದಲಾಗುತ್ತದೆ. 

LPG Cylinder Subsidy:2 ವರ್ಷದ ಬಳಿಕ ಮತ್ತೆ ಸಬ್ಸಿಡಿ ಭಾಗ್ಯ; ಯಾರಿಗೆಲ್ಲ ಸಿಗಲಿದೆ ಇದರ ಪ್ರಯೋಜನ? ಇಲ್ಲಿದೆ ಮಾಹಿತಿ

ಎಂಸಿಎಲ್ ಆರ್ (MCLR) ಹೆಚ್ಚಳ 
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ತಿಂಗಳ ಪ್ರಾರಂಭದಲ್ಲಿ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ (MCLR) ಅನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಳ ಮಾಡಿದೆ. ಮೇ 15ರಿಂದ ಈ ಹೊಸ ದರ ಜಾರಿಗೆ ಬಂದಿದೆ. ಹೀಗಾಗಿ ಕಳೆದ ಒಂದು ತಿಂಗಳಲ್ಲಿ ಎಸ್ ಬಿಐ (SBI) ಬಡ್ಡಿದರ (Interest rate) ಹೆಚ್ಚಳ ಮಾಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡುವ ಕನಿಷ್ಠ ಬಡ್ಡಿದರವೇ ಎಂಸಿಎಲ್ ಆರ್ ( MCLR). 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ
2026 ರಲ್ಲಿ ಮೇಷ ರಾಶಿಯವರ ಆರ್ಥಿಕ ಸ್ಥಿತಿ ಹೇಗಿರುತ್ತದೆ? AI ಪ್ರಕಾರ ಲಾಭನಾ ಅಥವಾ ನಷ್ಟನಾ?