SBI Interest Rate:ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಿಸಿದ ಎಸ್ ಬಿಐ; ಹೊಸ ದರ ಎಷ್ಟಿದೆ? ಚೆಕ್ ಮಾಡಿ

By Suvarna News  |  First Published May 10, 2022, 7:07 PM IST

*ಎರಡು ಕೋಟಿ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಠೇವಣಿಗಳ ಮೇಲಿನ ಬಡ್ಡಿದರ ಹೆಚ್ಚಳ
*ಹೊಸ ಬಡ್ಡಿದರ ಮೇ 10ರಿಂದಲೇ ಜಾರಿಗೆ
*7 ರಿಂದ 45 ದಿನಗಳ ತನಕದ ಅಲ್ಪಾವಧಿ ಸ್ಥಿರ ಠೇವಣಿ ಬಡ್ಡಿದರದಲ್ಲಿ ಹೆಚ್ಚಳವಿಲ್ಲ


ನವದೆಹಲಿ (ಮೇ 10): ಭಾರತೀಯ ರಿಸರ್ವ್ ಬ್ಯಾಂಕ್ (RBI) ರೆಪೋ ದರ  (Repo rate) ಏರಿಕೆ ಮಾಡಿದ ಬೆನ್ನಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಹಲವು ಸ್ಥಿರ ಠೇವಣಿಗಳ (FD) ಬಡ್ಡಿದರವನ್ನು (Interest rate) ಹೆಚ್ಚಿಸಿದೆ. ಬಡ್ಡಿದರ ಪರಿಷ್ಕರಣೆ ಬಗ್ಗೆ ಎಸ್ ಬಿಐ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಿದ್ದು, 2 ಕೋಟಿ ರೂ. ಹಾಗೂ ಅದಕ್ಕಿಂತ ಮೇಲ್ಪಟ್ಟ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಹೊಸ ಬಡ್ಡಿದರವು ಇಂದಿನಿಂದಲೇ (ಮೇ 10) ಜಾರಿಗೆ ಬರಲಿದೆ. ಆದರೆ,  7 ರಿಂದ 45 ದಿನಗಳ ತನಕದ ಅಲ್ಪಾವಧಿ ಸ್ಥಿರ ಠೇವಣಿ (FD) ಮೇಲಿನ  ಬಡ್ಡಿಯನ್ನು ಎಸ್ ಬಿಐ ಹೆಚ್ಚಿಸಿಲ್ಲ.

ವಿವಿಧ ಅವಧಿಯ ಸ್ಥಿರ ಠೇವಣಿ ಬಡ್ಡಿದರ ಹೀಗಿವೆ
ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಎಸ್ ಬಿಐ ಬಡ್ಡಿದರ ಏರಿಕೆ ಮಾಡಿರುವುದರಿಂದ 46 ದಿನಗಳಿಂದ 149 ದಿನಗಳ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿಗಳು ಇನ್ನು ಮುಂದೆ  50 ಬೇಸಿಸ್ ಪಾಯಿಂಟ್ ಹೆಚ್ಚಿನ ಆದಾಯ ನೀಡಲಿವೆ. ಇನ್ನು 180 ರಿಂದ  210 ದಿನಗಳ ಮೆಚ್ಯುರಿಟಿ ಅವಧಿ ಹೊಂದಿರುವ ಟರ್ಮ್ ಡೆಫಾಸಿಟ್ ಗಳ ಬಡ್ಡಿದರ ಶೇ.3.50ಕ್ಕೆ ಏರಿಕೆಯಾಗಿದೆ. 211  ದಿನಗಳಿಂದ ಒಂದು ವರ್ಷದೊಳಗಿನ ಹಾಗೂ ಒಂದು ವರ್ಷದಿಂದ 2 ವರ್ಷದೊಳಗಿನ ಮೆಚ್ಯುರಿಟಿ ಅವಧಿ ಹೊಂದಿರುವ ಎಫ್ ಡಿಗಳ ಬಡ್ಡಿದರಗಳು ಕ್ರಮವಾಗಿ ಶೇ.3.75 ಹಾಗೂ ಶೇ.4 ಆಗಿದೆ. 

Tap to resize

Latest Videos

SBI Interest Rate: ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ; ಎಷ್ಟು ಮೊತ್ತದ FDಗೆ ಅನ್ವಯ?

ಒಂದು ವರ್ಷದಿಂದ ಎರಡು ವರ್ಷದೊಳಗೆ ಮೆಚ್ಯುರಿಟಿ ಅವಧಿ ಹೊಂದಿರುವ ಠೇವಣಿಗಳ ಮೇಲೆ ಬಡ್ಡಿದರವನ್ನು40 ಬೇಸಿಸ್ ಪಾಯಿಂಟ್ ಗಳಷ್ಟು ಅಂದ್ರೆ  ಶೇ.3.6ರಿಂದ ಶೇ.4ಕ್ಕೆ ಹೆಚ್ಚಿಸಲಾಗಿದೆ. ಎರಡು ವರ್ಷದಿಂದ 3 ವರ್ಷದೊಳಗಿನ ಠೇವಣಿಗಳ ಮೇಲಿನ ಬಡ್ಡಿದರವನ್ನು ಈ ಹಿಂದಿನ ಬಡ್ಡಿದರ ಶೇ.3.6 ಆಗಿದ್ದು, ಈಗ ಶೇ.4.25ಕ್ಕೆ ಏರಿಕೆಯಾಗಿದೆ. 3 ವರ್ಷಗಳಿಂದ 5 ವರ್ಷಗಳಿಗಿಂತ ಕೆಳಗಿನ ಹಾಗೂ 5 ವರ್ಷಗಳಿಂದ 10 ವರ್ಷಗಳ ತನಕದ ಬಡ್ಡಿದರವನ್ನು ಶೇ.3.6ರಿಂದ ಶೇ.4.5ಕ್ಕೆ ಹೆಚ್ಚಿಸಲಾಗಿದೆ. 

ಎಸ್ ಬಿಐನ ಈ ಪರಿಷ್ಕೃತ ಬಡ್ಡಿದರ ಹೊಸ ಠೇವಣಿಗಳು ಹಾಗೂ ಮೆಚ್ಯುರಿಟಿ ಹೊಂದಿದ ಠೇವಣಿಗಳ ನವೀಕರಣಕ್ಕೂ ಅನ್ವಯಿಸಲಿವೆ. NRO ಅವಧಿ ಠೇವಣಿಗಳ ಬಡ್ಡಿದರಗಳನ್ನು ಡೊಮೆಸ್ಟಿಕ್ ಅವಧಿ ಠೇವಣಿಗಳ ದರಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ಬಡ್ಡಿದರಗಳು ಸಹಕಾರಿ ಬ್ಯಾಂಕುಗಳ ಡೊಮೆಸ್ಟಿಕ್ ಅವಧಿ ಠೇವಣಿಗಳಿಗೂ ಅನ್ವಯಿಸುತ್ತವೆ ಎಂದು ಎಸ್ ಬಿಐ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.

Fixed Deposits:ವಿವಿಧ ಬ್ಯಾಂಕುಗಳಲ್ಲಿ ಸ್ಥಿರ ಠೇವಣಿ ಬಡ್ಡಿದರ ಎಷ್ಟಿದೆ? ಯಾವ ಬ್ಯಾಂಕಿನಲ್ಲಿ FD ಖಾತೆ ತೆರೆಯೋದು ಬೆಸ್ಟ್?

ಈ ಮೇಲೆ ತಿಳಿಸಿದ ಬಡ್ಡಿದರಗಳು ಸಾಮಾನ್ಯ ಜನರಿಗೆ ಅನ್ವಯಿಸಲಿದೆ.ಇನ್ನು ಹಿರಿಯ ನಾಗರಿಕರು ಈ ಮೇಲೆ ತಿಳಿಸಲಾದ ಸಾಮಾನ್ಯ ಜನರಿಗೆ ಅನ್ವಯಿಸುವ ಬಡ್ಡಿದರಗಳ ಮೇಲೆ ಹೆಚ್ಚುವರಿ 50 ಬಿಪಿಎಸ್ ಬಡ್ಡಿದರಗಳನ್ನು ಪಡೆಯಲು ಅರ್ಹರಾಗಿದ್ದಾರೆ. ಈ ಹಿಂದೆ ಮಾರ್ಚ್ 10ರಿಂದ ಜಾರಿಗೆ ಬರುವಂತೆ ಎಸ್ ಬಿಐ, ಎರಡು ಕೋಟಿಗಿಂತಲೂ ಅಧಿಕ ಮೊತ್ತದ ಸ್ಥಿರ ಠೇವಣಿ  ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿತ್ತು. ಇನ್ನು ಆರ್ ಡಿ (RD) ಮೇಲಿನ ಬಡ್ಡಿದರವನ್ನು  ಫೆಬ್ರವರಿ 15ರಿಂದಲೇ ಜಾರಿಗೆ ಬರುವಂತೆ ಹೆಚ್ಚಳ ಮಾಡಿತ್ತು. ಆರ್ ಡಿ ಮೇಲಿನ ಬಡ್ಡಿದರ ಶೇ.5.1ರಿಂದ ಶೇ.5.5 ಇದೆ. ಹಿರಿಯ ನಾಗರಿಕರಿಗೆ ಮಾತ್ರ  50 ಬೇಸಿಸ್ ಪಾಯಿಂಟ್ ಗಳ ಹೆಚ್ಚುವರಿ ಏರಿಕೆ ಮಾಡಲಾಗಿದೆ. ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಬಂಧನ್ ಬ್ಯಾಂಕ್  ಕೂಡ ಇತ್ತೀಚೆಗೆ  2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಠೇವಣಿಗಳ ಮೇಲಿನ ಬಡ್ಡಿದರವನ್ನು ಏರಿಕೆ ಮಾಡಿವೆ.  

click me!