ಅಮೆಜಾನ್ ನಲ್ಲಿ 64GB ಸ್ಟೋರೇಜ್ ಹೊಂದಿರುವ ಐಫೋನ್ 12 ಮೇಲೆ 12,000ರೂ. ಫ್ಲ್ಯಾಟ್ ಡಿಸ್ಕೌಂಟ್ ಇದೆ. ಈ ವಿಶೇಷ ಆಫರ್ ನಿಂದ 65,900ರೂ. ಬೆಲೆಯ ಐ ಫೋನ್ 12 ನಿಮಗೆ 53,900ರೂ.ಗೆ ಸಿಗಲಿದೆ.ಫ್ಲಿಪ್ ಕಾರ್ಟ್ ನಲ್ಲೂ ಐಫೋನ್ 12 ಖರೀದಿಯ ಮೇಲೆ 10,910ರೂ. ಡಿಸ್ಕೌಂಟ್ ಸಿಗಲಿದೆ.
ನವದೆಹಲಿ (ಮೇ10): ಐಫೋನ್ (iPhone) ಖರೀದಿಸಲು ದೀರ್ಘ ಸಮಯದಿಂದ ಪ್ಲ್ಯಾನ್ (Plan) ಮಾಡುತ್ತಿರೋರಿಗೆ ಇಲ್ಲಿದೆ ಗುಡ್ ನ್ಯೂಸ್. ಅಮೆಜಾನ್ ನಲ್ಲಿ (Amazon) ಈಗ 64GB ಸ್ಟೋರೇಜ್ ಹೊಂದಿರುವ ಐಫೋನ್ 12 (iPhone 12) ಮೇಲೆ 12,000ರೂ. ಫ್ಲ್ಯಾಟ್ ಡಿಸ್ಕೌಂಟ್ (Discount) ನೀಡಲಾಗುತ್ತಿದೆ. ಇದ್ರಿಂದ ಐ ಫೋನ್ 12 ನಿಮಗೆ 53,900ರೂ.ಗೆ ಸಿಗಲಿದೆ. ಆ್ಯಪಲ್ ಆನ್ ಲೈನ್ ಸ್ಟೋರ್ ನಲ್ಲಿ(Apple’s online store) ಈ ಮೊಬೈಲ್ ಬೆಲೆ 65,900ರೂ. ಇದೆ.
ಭಾರತದಲ್ಲಿ ಐಫೋನ್ 13 (iPhone 13) ಅನ್ನು ಡಿಸ್ಕೌಂಟ್ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಈಗ ಐಫೋನ್ 12 ಸೇರಿದಂತೆ ಆ್ಯಪಲ್ ಕಂಪನಿಯ ಇತರ ಅನೇಕ ಐಫೋನ್ ಮಾಡೆಲ್ ಗಳನ್ನು ಕೂಡ ಭಾರತದಲ್ಲಿ ಉತ್ತಮ ಡಿಸ್ಕೌಂಟ್ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದ್ರೆ ಈ ಡಿಸ್ಕೌಂಟ್ ಆಯ್ದ ಬಣ್ಣಗಳ ಸೆಟ್ ಗಳಿಗೆ ಮಾತ್ರ ಅನ್ವಯಿಸಲಿದೆ. ಕೇವಲ ನೀಲಿ ಹಾಗೂ ಕೆಂಪು ಬಣ್ಣದ ಐಫೋನ್ 13 ಖರೀದಿಗೆ ಮಾತ್ರ 12,000ರೂ. ಡಿಸ್ಕೌಂಟ್ ಅನ್ವಯಿಸಲಿದೆ. ಇನ್ನು 64 ಜಿಬಿ ಐಫೋನ್ 12 ಮಾಡೆಲ್ ನಲ್ಲಿ ನೇರಳೆ ಹಾಗೂ ಬಿಳಿ ಬಣ್ಣದ ಸೆಟ್ ಗಳಿಗೆ ಕ್ರಮವಾಗಿ 5,000ರೂ. ಹಾಗೂ 10,000ರೂ. ಫ್ಲ್ಯಾಟ್ ಡಿಸ್ಕೌಂಟ್ ಸಿಗಲಿದೆ.128GB ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 13 ನೀಲಿ (Blue) ಹಾಗೂ ಕೆಂಪು (Red) ಬಣ್ಣದ ಆಯ್ಕೆಗಳ ಮೇಲೆ 11,000ರೂ. ಡಿಸ್ಕೌಂಟ್ ಲಭ್ಯವಿದೆ. 128GB ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 13 (iPhone 13) ಮಾರುಕಟ್ಟೆ ಬೆಲೆ 70,900ರೂ. ಆಗಿದ್ದು ಡಿಸ್ಕೌಂಟ್ ಬಳಿಕ 59,900ರೂ.ಗೆ ಸಿಗಲಿದೆ.
undefined
iPhone 4s ಬಳಕೆದಾರರಿಗೆ ಆಪಲ್ ಪರಿಹಾರ ಕೊಡ್ತಿರೋದ್ಯಾಕೆ?
ಎಕ್ಸ್ ಚೇಂಜ್ ಗೂ ಡಿಸ್ಕೌಂಟ್ ಆಫರ್
ಅಮೆಜಾನ್ ನಲ್ಲಿ (Amazon) ಹೊಸ ಐಫೋನ್ ಖರೀದಿಗೆ ಈ ಡಿಸ್ಕೌಂಟ್ ನೀಡಿರುವ ಜೊತೆಗೆ ಮೊಬೈಲ್ ಎಕ್ಸ್ ಚೇಂಜ್ (Exchange) ಮೇಲೂ ಡಿಸ್ಕೌಂಟ್ ಆಫರ್ ನೀಡಲಾಗಿದೆ. 11,650 ರೂ. ತನಕ ಎಕ್ಸ್ ಚೇಂಜ್ ಡಿಸ್ಕೌಂಟ್ ಹಾಗೂ ಪಾವತಿಗೆ ಬ್ಯಾಂಕ್ ಆಫ್ ಬರೋಡಾ (Bank of Baroda) ಕ್ರೆಡಿಟ್ ಕಾರ್ಡ್ಸ್ (Credit card) ಬಳಸಿದ್ರೆ 2,000ರೂ. ತನಕ ಡಿಸ್ಕೌಂಟ್ ಸಿಗಲಿದೆ. ಆದ್ರೆ ಒಂದು ವಿಷಯ ನೆನಪಿರಲಿ, ಅಂತಿಮ ಎಕ್ಸ್ ಚೇಂಜ್ (Exchange) ಬೆಲೆ ನೀವು ಐಫೋನ್ 12ಗೆ (iPhone 12) ಎಕ್ಸ್ ಚೇಂಜ್ ಮಾಡಬಯಸುವ ನಿಮ್ಮ ಹಳೆಯ ಫೋನ್ ನ ಸದ್ಯದ ಸ್ಥಿತಿ ಹೇಗಿದೆ ಎಂಬುದರ ಮೇಲೆ ಆಧಾರಿತವಾಗಿದೆ. ನಿಮಗೆ ಗರಿಷ್ಠ ಎಕ್ಸ್ ಚೇಂಜ್ ಮೌಲ್ಯ ಸಿಗಬೇಕೆಂದ್ರೆ ನೀವು ಐಪೋನ್ 12ಗೆ (iPhone 12) ಐಪೋನ್ 11 ಎಕ್ಸ್ ಚೇಂಜ್ ಮಾಡ್ಬೇಕು.
ಝೊಮ್ಯಾಟೋ ಡೆಲಿವರಿ ಬಾಯ್‌ಗಳ ಮಕ್ಕಳ ಶಿಕ್ಷಣಕ್ಕೆ 700 ಕೋಟಿ ದಾನ, ಸಿಇಒ ದೀಪಿಂದರ್ ಘೋಷಣೆ
ನೀವು ದೀರ್ಘಾವಧಿಯಿಂದ ಐಫೋನ್ 12 (iPhone 12) ಖರೀದಿಸಲು ಯೋಚಿಸುತ್ತಿದ್ರೆ ಈ ಅವಕಾಶವನ್ನು ಮಿಸ್ ಮಾಡ್ಕೋಬೇಡಿ. ಆದ್ರೆ ನೆನಪಿರಲಿ, ಐಫೋನ್ 12 (iPhone 12) 64ಜಿಬಿ ಹಾಗೂ 128ಜಿಬಿ ಸ್ಟೋರೇಜ್ ಮೇಲೆ ಮಾತ್ರ ಈ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ 256ಜಿಬಿ ಸ್ಟೋರೇಜ್ ಹೊಂದಿರುವ ಐಫೋನ್ 12ಗೆ ಈ ಡಿಸ್ಕೌಂಟ್ ಅನ್ವಯಿಸೋದಿಲ್ಲ. ಇನ್ನು ಫ್ಲಿಪ್ ಕಾರ್ಟ್ ನಲ್ಲಿ (Flipkart) ಕೂಡ ಐಫೋನ್ 12 ಖರೀದಿಯ ಮೇಲೆ 10,910ರೂ. ಡಿಸ್ಕೌಂಟ್ ಸಿಗಲಿದೆ. ಆದ್ರೆ ಈ ಆಫರ್ 64GB ಸ್ಟೋರೇಜ್ ಮಾಡೆಲ್ ಮೇಲೆ ಮಾತ್ರ ಅನ್ವಯಿಸಲಿದೆ. ಇನ್ನು ಫ್ಲಿಪ್ ಕಾರ್ಟ್ ನಲ್ಲಿ 13,000ರೂ. ಎಕ್ಸ್ ಚೇಂಜ್ ಆಫರ್ ಹಾಗೂ ಎಸ್ ಬಿಐ (SBI) ಕಾರ್ಡ್ ಬಳಸಿ ಮಾಡಿದ ವಹಿವಾಟಿನ ಮೇಲೆ ಶೇ.10ರಷ್ಟು ಡಿಸ್ಕೌಂಟ್ ಕೂಡ ಸಿಗಲಿದೆ.