*ಬಡ್ಡಿದರ ಹೆಚ್ಚಳದ ಬಗ್ಗೆ ವೆಬ್ ಸೈಟ್ ನಲ್ಲಿ ಮಾಹಿತಿ ಹಂಚಿಕೊಂಡ ಎಸ್ ಬಿಐ
* 2 ಕೋಟಿ ರೂ.ಮೇಲ್ಪಟ್ಟ ಸ್ಥಿರ ಠೇವಣಿ ಮೇಲಿನ ಬಡ್ಡಿ ದರ ಹೆಚ್ಚಳ
*ಹೊಸ ಬಡ್ಡಿದರ ಮಾರ್ಚ್ 10ರಿಂದಲೇ ಜಾರಿಗೆ
ನವದೆಹಲಿ (ಮಾ.11): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI) ಗ್ರಾಹಕರಿಗೆ (Customers) ಸಂತಸದ ಸುದ್ದಿಯಿದೆ. ಎರಡು ಕೋಟಿಗಿಂತಲೂ ಅಧಿಕ ಮೊತ್ತದ ಸ್ಥಿರ ಠೇವಣಿ (FD) ಮೇಲಿನ ಬಡ್ಡಿದರವನ್ನು(Interest rate) ಎಸ್ ಬಿಐ (SBI) ಏರಿಕೆ ಮಾಡಿದ್ದು, ಮಾರ್ಚ್ 10ರಿಂದಲೇ ಜಾರಿಗೆ ಬಂದಿದೆ.
ಎಸ್ ಬಿಐ (SBI) ತನ್ನ ವೆಬ್ಸೈಟ್ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 211 ದಿನಗಳಿಂದ ಹಿಡಿದು ಇನ್ನೂ ಒಂದು ವರ್ಷ ಪೂರ್ಣಗೊಳ್ಳದ 2 ಕೋಟಿ ರೂ. ಮೇಲ್ಪಟ್ಟ ಸ್ಥಿರ ಠೇವಣಿ ಮೇಲಿನ ಬಡ್ಡಿಯನ್ನು ಬ್ಯಾಂಕ್ ಹೆಚ್ಚಿಸಿದೆ. ಇದ್ರಿಂದ ಎಫ್ ಡಿ ಮೇಲಿನ ಬಡ್ಡಿ ಪ್ರಸ್ತುತ ಶೇ.3.10ರಿಂದ ಶೇ.3.30ಕ್ಕೆ ಏರಿಕೆಯಾಗಲಿದೆ. ಹಿರಿಯ ನಾಗರಿಕರಿಗೆ (Senior Citizens) ಎಫ್ ಡಿ ಮೇಲಿನ ಬಡ್ಡಿ ಶೇ. 3.60ರಿಂದ ಶೇ.4.10ಕ್ಕೆ ಹೆಚ್ಚಾಗಲಿದೆ.
ಪರಿಷ್ಕೃತ ಬಡ್ಡಿ ದರಗಳು ಹೊಸ ಹಾಗೂ ಅವಧಿ ಪೂರ್ಣಗೊಳ್ಳುತ್ತಿರೋ ಠೇವಣಿಗಳ ನವೀಕರಣಕ್ಕೂ ಅನ್ವಯಿಸಲಿದೆ. ಎನ್ ಆರ್ ಒ ಟರ್ಮ್ ಠೇವಣಿ ಬಡ್ಡಿದರಗಳು ಡೊಮ್ಯಾಸ್ಟಿಕ್ ಟರ್ಮ್ ಬಡ್ಡಿದರಗಳಿಗೂ ಹೊಂದಿಕೆಯಾಗಲಿವೆ. ಅಷ್ಟೇ ಅಲ್ಲ, ಈ ಹೊಸ ಬಡ್ಡಿದರಗಳು ಸಹಕಾರಿ ಬ್ಯಾಂಕುಗಳಲ್ಲಿನ ಡೊಮ್ಯಾಸ್ಟಿಕ್ ಟರ್ಮ್ ಠೇವಣಿಗಳಿಗೂ ಅನ್ವಯವಾಗಲಿವೆ.
ಡ್ರೈವರ್ ಆಗಿ ಬಂದ ಊಬರ್ ಸಿಇಒ :ಕ್ಯಾಬ್ ಬುಕ್ ಮಾಡಿದಾಕೆಗೆ ಅಚ್ಚರಿ
2 ಕೋಟಿಗಿಂತ ಕಡಿಮೆ ಮೊತ್ತದ ಎಫ್ ಡಿ ಬಡ್ಡಿದರ
ಎಸ್ ಬಿಐ ವೆಬ್ ಸೈಟ್ ಪ್ರಕಾರ ಎರಡು ವರ್ಷದಿಂದ ಹಿಡಿದು ಮೂರು ವರ್ಷದೊಳಗಿನ ಎಫ್ ಡಿ ಮೇಲಿನ ಬಡ್ಡಿದರವನ್ನು 10 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿ ಶೇ.5.20 ಕ್ಕೆ ನಿಗದಿಪಡಿಸಲಾಗಿದೆ. ಮೂರು ವರ್ಷದಿಂದ ಹಿಡಿದು ಐದು ವರ್ಷಗಳೊಳಗಿನ ಎಫ್ ಡಿ ಬಡ್ಡಿದರವನ್ನು 15 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಿ ಶೇ.5.45 ನಿಗದಿಪಡಿಸಲಾಗಿದೆ. 5 ವರ್ಷ ಹಾಗೂ 10 ವರ್ಷದ ತನಕದ ಎಫ್ ಡಿ ಮೇಲಿನ ಬಡ್ಡಿ 10 ಬೇಸಿಸ್ ಪಾಯಿಂಟ್ ಗಳಷ್ಟು ಹೆಚ್ಚಿಸಲಾಗಿದ್ದು, ಶೇ.5.50 ಆಗಿದೆ. ಈ ಬಡ್ಡಿದರ ಫೆಬ್ರವರಿ 15ರಿಂದಲೇ ಜಾರಿಗೆ ಬಂದಿದೆ.
ನಿಗದಿತ ಅವಧಿ ಠೇವಣಿ
ದೊಡ್ಡ ಮೊತ್ತದ ನಿಗದಿತ ಅವಧಿ ಠೇವಣಿಯನ್ನು ಅವಧಿಗೂ ಮುನ್ನ ವಿತ್ ಡ್ರಾ ಮಾಡಿದ್ರೆ ಶೇ.1ರಷ್ಟು ದಂಡ ವಿಧಿಸಲಾಗುವುದು. ಇದು ಎಲ್ಲ ಹೊಸ ಠೇವಣಿದಾರರು ಹಾಗೂ ನವೀಕರಿಸೋರಿಗೆ ಅನ್ವಯಿಸುತ್ತದೆ.
ಹಿರಿಯ ನಾಗರಿಕರ ಎಫ್ ಡಿ ಬಡ್ಡಿದರ
ಹಿರಿಯ ನಾಗರಿಕರು ಎಫ್ ಡಿ ಮೇಲೆ ಪ್ರಸ್ತುತವಿರೋದಕ್ಕಿಂತ ಶೇ.0.5 ಹೆಚ್ಚುವರಿ ಬಡ್ಡಿದರ ಪಡೆಯಲಿದ್ದಾರೆ. 7 ದಿನಗಳಿಂದ 10 ವರ್ಷಗಳ ಅವಧಿ ಹೊಂದಿರೋ ಠೇವಣಿಗಳ ಮೇಲೆ ಅವರು ಶೇ.3.5ದಿಂದ ಶೇ.4.10 ಬಡ್ಡಿ ಪಡೆಯಲಿದ್ದಾರೆ.
ಇನ್ಮುಂದೆ ಮೊಬೈಲ್ ಆ್ಯಪಲ್ಲೇ BMTC ಬಸ್ ಪಾಸ್..!
ಭಾರತೀಯ ರಿಸರ್ವ್ ಬ್ಯಾಂಕ್ (RBI) ಫೆಬ್ರವರಿಯಲ್ಲಿ ನಡೆದ ದ್ವಿಮಾಸಿಕ ಸಭೆಯಲ್ಲಿ ಹಣಕಾಸು ನೀತಿ ಸಮಿತಿ ರೆಪೋ ಹಾಗೂ ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಕಾರಣದಿಂದ ಅನೇಕ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಈಗಾಗಲೇ ಹೆಚ್ಚಿಸಿವೆ. ಫೆಬ್ರವರಿಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಎಚ್ ಡಿಎಫ್ ಸಿ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಯುಕೋ ಬ್ಯಾಂಕ್ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕರಿಸಿವೆ.
ಎಸ್ ಬಿಐ ಆರ್ ಡಿ (RD) ಮೇಲಿನ ಬಡ್ಡಿದರವನ್ನು ಕೂಡ ಹೆಚ್ಚಿಸಿವೆ. ಫೆಬ್ರವರಿ 15ರಿಂದಲೇ ಜಾರಿಗೆ ಬರುವಂತೆ ಈ ದರವನ್ನು ಎಸ್ ಬಿಐ ಈಗಾಗಲೇ ಹೆಚ್ಚಿಸಿದೆ. ಆರ್ ಡಿ ಮೇಲಿನ ಬಡ್ಡಿದರ ಶೇ.5.1ರಿಂದ ಶೇ.5.5 ಇದೆ. ಹಿರಿಯ ನಾಗರಿಕರಿಗೆ ಮಾತ್ರ 50 ಬೇಸಿಸ್ ಪಾಯಿಂಟ್ ಗಳ ಹೆಚ್ಚುವರಿ ಏರಿಕೆ ಮಾಡಲಾಗಿದೆ.