ಇನ್ಮುಂದೆ ಮೊಬೈಲ್‌ ಆ್ಯಪಲ್ಲೇ BMTC ಬಸ್‌ ಪಾಸ್‌..!

By Girish Goudar  |  First Published Mar 11, 2022, 6:09 AM IST

*   ಮೊಬೈಲ್‌ ಫೋನ್‌ನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ 
*  ವಾರದಲ್ಲಿ ಈ ಸೇವೆಗೆ ಚಾಲನೆ 
*  ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್‌ ಆ್ಯಪ್‌ ಪರಿಚಯ 
 


ಬೆಂಗಳೂರು(ಮಾ.11):  ನಗರದ ಪ್ರಯಾಣಿಕರಿಗಾಗಿ ನೂತನ ತಂತ್ರಜ್ಞಾನ ಪರಿಚಯಿಸಿರುವ ಬಿಎಂಟಿಸಿ(BMTC), ಇನ್ನು ಮುಂದೆ ಪಾಸ್‌ ಖರೀದಿಸುವ ಬದಲಾಗಿ ಮೊಬೈಲ್‌ ಫೋನ್‌ನ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸುವುದಕ್ಕೆ ಅವಕಾಶ ಕಲ್ಪಿಸಿದೆ.

ನಗರದ ಖಾಸಗಿ ಸಂಸ್ಥೆ ಟುಮೊಕ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮೊಬೈಲ್‌ ಆ್ಯಪ್‌(Mobile App) ಪರಿಚಯಿಸುತ್ತಿರುವ ಬಿಎಂಟಿಸಿ, ಸ್ಮಾರ್ಟ್‌ಫೋನ್‌ಗಳಲ್ಲೇ(Smartphone) ಟುಮೊಕ್‌ ಸಂಸ್ಥೆಯ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ದಿನದ ಮತ್ತು ವಾರದ ಹಾಗೂ ಮಾಸಿಕ ಪಾಸುಗಳನ್ನು ಪಡೆಯಲು ಅವಕಾಶ ನೀಡಿದೆ. ಅಲ್ಲದೆ, ಮೊಬೈಲ್‌ ಆ್ಯಪ್‌ನನ್ನು ಬಸ್‌ನ ನಿರ್ವಾಹಕರ ಬಳಿಯ ಎಲೆಕ್ಟ್ರಾನಿಕ್‌ ಟಿಕೆಟ್‌ ಮಿಷನ್‌(ETM)ನಲ್ಲಿ ಸ್ಕಾ್ಯನ್‌ ಮಾಡಿ ಪ್ರಯಾಣಿಬಹುದಾಗಿದೆ. ಇದರಿಂದ ಬಸ್‌ ನಿಲ್ದಾಣಗಳಿಗೆ ಭೇಟಿ ನೀಡಿ ಪಾಸ್‌ ಖರೀದಿಸುವ ಅಗತ್ಯವಿಲ್ಲವಾಗಲಿದೆ.

Tap to resize

Latest Videos

ವಿದ್ಯಾರ್ಥಿಗಳಿಗೆ ಬಿಎಂಟಿಸಿ ಪಾಸ್‌ ವಿತರಣೆ : ಇಲ್ಲಿದೆ ಮಾಹಿತಿ

ವೊಲ್ವೋ ಬಸ್‌ಗಳ ನಿರ್ವಾಹಕರಿಗೆ ಇಟಿಎಂ ಮಿಷನ್‌ಗಳಿರಲಿದ್ದು, ಅದರಲ್ಲಿ ಮೊಬೈಲ್‌ನಲ್ಲಿನ ಕ್ಯೂಆರ್‌ಕೋಡ್‌ ಸ್ಕ್ಯಾನ್‌(QRCode Scan) ಮಾಡಬಹುದಾಗಿದೆ. ಆದರೆ, ಸಾಮಾನ್ಯ ಬಸ್‌ಗಳಲ್ಲಿ ನಿರ್ವಾಹಕರ ಬಳಿ ಇರುವ ಕ್ಯುಆರ್‌ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿ ಪ್ರಯಾಣಿಸಬಹುದಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆರಂಭದಲ್ಲಿ ಎಲ್ಲ ವೋಲ್ವೋ ಬಸ್‌ಗಳು ಹಾಗೂ ಸುಮಾರು 200 ಸಾಮಾನ್ಯ ಬಸ್‌ಗಳಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ ಎಂದು ಎಂದು ಬಿಎಂಟಿಸಿ ನಿರ್ದೇಶಕ(ಐಟಿ) ಸೂರ್ಯಸೇನ್‌ ಮಾಹಿತಿ ನೀಡಿದರು.

ಈ ವ್ಯವಸ್ಥೆಯಿಂದ ಮುಖ್ಯವಾಗಿ ಪ್ರಯಾಣಿಕರಿಗೆ ಸಾಕಷ್ಟುಸಮಯ ಉಳಿತಾಯ ಆಗಲಿದೆ. ಪ್ರತಿ ತಿಂಗಳು ಸರದಿಯಲ್ಲಿ ನಿಂತು ಪಾಸು ಪಡೆಯುವ ಗೋಜು ತಪ್ಪಲಿದೆ. ನಗದು ವಹಿವಾಟು ಇರುವುದಿಲ್ಲ. ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಭವಿಷ್ಯದಲ್ಲಿ ಟಿಕೆಟ್‌ ವಿತರಣಾ ವ್ಯವಸ್ಥೆಗೂ ಇದು ವಿಸ್ತರಣೆಯಾದರೆ, ಆದಾಯ ಸೋರಿಕೆಗೆ ಬ್ರೇಕ್‌ ಬೀಳಲಿದೆ ಎಂದು ಬಿಎಂಟಿಸಿ ನಿರ್ದೇಶಕ(ಐಟಿ) ಸೂರ್ಯಸೇನ್‌ ಮಾಹಿತಿ ನೀಡಿದರು.

ಸಾಮಾನ್ಯ ಬಸ್‌ಗಳಲ್ಲಿ ನಿರ್ವಾಹಕರಿಗೇ ಕ್ಯುಆರ್‌ ಕೋಡ್‌ ನೀಡಲಾಗಿರುತ್ತದೆ. ಪಾಸುಗಳನ್ನು(Bus Pass)s ಹೊಂದಿದ ಪ್ರಯಾಣಿಕರು ಸ್ಕ್ಯಾನ್‌ ಮಾಡಬೇಕಾಗುತ್ತದೆ. ವಾರದಲ್ಲಿ ಈ ಸೇವೆಗೆ ಚಾಲನೆ ದೊರೆಯಲಿದೆ. ಸಾರ್ವಜನಿಕ ಸಾರಿಗೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಪರಿಚಯಿಸುತ್ತಿರುವುದು ದೇಶದಲ್ಲಿ ಬಹುಶಃ ಇದೇ ಮೊದಲು ಎಂದು ಅವರು ತಿಳಿಸಿದರು.

ಪ್ರಯಾಣಿಕರಿಗೆ ಗುಡ್‌ನ್ಯೂಸ್, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರ ಇಳಿಕೆ

ಬೆಂಗಳೂರು: ಬಿಎಂಟಿಸಿಯು (Bangalore Metropolitan Transport Corporation) ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾಸಿಕ ಬಸ್ ಪಾಸ್‌ಗಳನ್ನು (Bus Pass) ನೀಡುತ್ತಿದ್ದು, ಸಾರ್ವಜನಿಕರನ್ನು ವೋಲ್ವೋ ಸೇವೆಗಳಲ್ಲಿ ಪ್ರಯಾಣಿಸಲು ಉತ್ತೇಜಿಸುವ ಸಲುವಾಗಿ, ಬಿಎಂಟಿಸಿ ವಜ್ರ ಮಾಸಿಕ ಬಸ್ ಪಾಸ್ ದರವನ್ನು ರೂ.2000 ರಿಂದ ರೂ.1500 ಕ್ಕೆ ಇಳಿಸಿತ್ತು. 

BMTC ಎಸಿ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್!

ಪರಿಷ್ಕೃತ ವಜ್ರ ಮಾಸಿಕ ಪಾಸ್‌ಗಳನ್ನು 28.12.2021 ರಿಂದ ವಜ್ರ ಸೇವೆಗಳಲ್ಲಿ ಕಂಡಕ್ಟರ್‌ಗಳ ಮೂಲಕ ಮತ್ತು ಬಿಎಂಟಿಸಿಯ ಪ್ರಮುಖ ಬಸ್ ನಿಲ್ದಾಣಗಳು ಮತ್ತು ಟಿಟಿಎಂಸಿಗಳಲ್ಲಿ ನೀಡಲಾಗುತ್ತಿದೆ. ಇದಲ್ಲದೆ, ಜನವರಿ 2022 ಸಾಮಾನ್ಯ ಸೇವಾ ಮಾಸಿಕ ಪಾಸ್‌ಗಳನ್ನು 28.12.2021 ರಿಂದ ನೀಡಲಾಗುತ್ತಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆ ಹೊರಡಿಸಿತ್ತು.

ವಿಕಲಚೇತನರ ಬಸ್​ಪಾಸ್​​​ಗೆ ಅರ್ಜಿ ಆಹ್ವಾನಿಸಿದ ಕೆಎಸ್​ಆರ್​ಟಿಸಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಕಲಚೇತನರಿಗೆ 2022ನೇ ಸಾಲಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾಸ್​ನ್ನು ಹೊಂದಲು ಅರ್ಜಿ ಆಹ್ವಾನಿಸಿದೆ. ಜನವರಿ 1ರಿಂದ ವಿಕಲಚೇತನರಿಗೆ ಅನ್ವಯವಾಗುವಂತೆ ಈ ಬಸ್​ ಪಾಸ್​ ಇರಲಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿತ್ತು. 
 

click me!