ಕ್ಯಾಬ್ ಬುಕ್ ಮಾಡಿ ರಸ್ತೆ ಬದಿ ಕಾಯುತ್ತಾ ನಿಂತಿರುತ್ತೀರಾ. ಕ್ಯಾಬ್ ಬರುತ್ತದೆ. ಆದರೆ ಚಾಲಕನ ಬದಲು ಅಲ್ಲಿ ಪ್ರತಿಷ್ಠಿತ ವ್ಯಕ್ತಿ ಇದ್ದರೆ ನಿಮ್ಮ ಪ್ರತಿಕ್ರಿಯೆ ಹೇಗಿರುತ್ತದೆ. ಖಂಡಿತ ಅಚ್ಚರಿಯಾಗುತ್ತೆ ಅಲ್ವೇ? ಇಲ್ಲೂ ಹಾಗೆ ಆಗಿದೆ. ಕ್ಯಾಬ್ ಬುಕ್ ಮಾಡಿ ಕಾಯುತ್ತಾ ನಿಂತಿದ್ದ ಯುವತಿಗೆ ಅಚ್ಚರಿಯೊಂದು ಕಾದಿತ್ತು. ಸಾಮಾನ್ಯ ಕ್ಯಾಬ್ ಚಾಲಕನ ಬದಲು ಅಲ್ಲಿ ಊಬರ್ ಕಂಪನಿಯ ಸಿಇಒ ಪ್ರಭ್ಜೀತ್ ಸಿಂಗ್ (Prabhjeet Singh) ಅವರೇ ಚಾಲಕನ ಸ್ಥಾನದಲ್ಲಿ ಕುಳಿತಿದ್ದರು. ಇದನ್ನು ಸ್ವತಃ ಯುವತಿಯೇ ಸಾಮಾಜಿಕ ಜಾಲತಾಣವಾದ ಲಿಂಕ್ಡಿನ್‌ನಲ್ಲಿ ಹಂಚಿಕೊಂಡಿದ್ದಾರೆ.
ಊಬರ್ ಇಂಡಿಯಾ ಸಿಇಒ ಅವರೊಂದಿಗಿನ ತಮ್ಮ ಮೊದಲ ಪ್ರಯಾಣದ ಬಗ್ಗೆ ಕೇವಲ ಓರ್ವ ಯುವತಿಯಲ್ಲದೇ ಅನೇಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಲಿಂಕ್ಡ್‌ಇನ್ ಬಳಕೆದಾರ ಅನನ್ಯಾ ದ್ವಿವೇದಿ (Ananya Dwivedi), ಪ್ರಭ್‌ಜೀತ್ ಸಿಂಗ್ ಅವರ ಜೊತೆ ವಿಶೇಷ ಊಬರ್ ರೈಡ್‌ನಲ್ಲಿ ಪ್ರಯಾಣಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಬಹಳ ಸಮಯದ ನಂತರ ಕಛೇರಿಯಿಂದ ಕೆಲಸ ಮಾಡಲು ಅಕ್ಷರಶಃ ಹೊರಬಂದೆ ಹಾಗೂ ಕಾರನ್ನು ಯಾರೂ ಚಲಾಯಿಸಿರಬಹುದು ಎಂಬುದನ್ನು ಊಹಿಸಿ, ಬೇರೆ ಯಾರೂ ಅಲ್ಲ ಸ್ವತಃ ಉಬರ್ ಇಂಡಿಯಾ ಸಿಇಒ ಪ್ರಭಜೀತ್ ಸಿಂಗ್. ಹೌದು ಇದು ಅವರ ಸಂಶೋಧನೆಯ ಭಾಗವಾಗಿತ್ತು.
ಆರಂಭದಲ್ಲೇ ನನಗೆ ಏನೋ ಒಂಥರ ಬದಲಾವಣೆ ಎನಿಸಿತ್ತು. ನಂತರ ನಾನು ಅವರ ಹೆಸರನ್ನು ಗೂಗಲ್ ಮಾಡಿ ಆ ಮೂಲಕ ಅಲ್ಲಿದ್ದ ಫೋಟೋ ಹಾಗೂ ಕಾರಿನ ಚಾಲಕನ ಸ್ಥಾನದಲ್ಲಿದ್ದ ಅವರ ಮುಖವನ್ನು ಗಮನಿಸಿದೆ. ನಂತರ ಕೊನೆಯದಾಗಿ ನಾನು ಇದು ಅವರೇ ಎಂಬುದನ್ನು ನಂಬಿದೆ ಎಂದು ಅವರು ಬರೆದುಕೊಂಡಿದ್ದಾರೆ. ಆದರೆ ಸಮಸ್ಯೆಯನ್ನು ತಿಳಿಯಲು ಮೂಲದಿಂದಲೇ ಪ್ರಯತ್ನಿಸಲು ಒಂದು ನಮ್ರತೆ ಹಾಗೂ ಸಂಕಲ್ಪ ಬೇಕಾಗುತ್ತದೆ. ಅವರಿಗೆ ನನ್ನ ಪೂರ್ಣ ಗೌರವ ಎಂದಿ ಅನನ್ಯಾ ದ್ವಿವೇದಿ ಎಂಬವರು ಬರೆದುಕೊಂಡಿದ್ದಾರೆ. ಇನ್ನೊಬ್ಬ ಲಿಂಕ್ಡ್‌ಇನ್ ( LinkedIn) ಬಳಕೆದಾರರಾದ ಸೌರಭ್ ಕುಮಾರ್ ವರ್ಮಾ (Sourabh Kumar Verma) ಅವರು ಕಂಪನಿಯ ಸೇವೆಗಳನ್ನು ಸುಧಾರಿಸಲು ಸ್ವತಃ ರಸ್ತೆಗಿಳಿದ ಉಬರ್ ಇಂಡಿಯಾ ಸಿಇಒ ಅವರ ಸಮಗ್ರತೆಯನ್ನು ಪ್ರಶಂಸಿಸಿದ್ದಾರೆ. ಹೀಗೆ ಲಿಂಕ್ಡಿನ್‌ನಲ್ಲಿ ಮಧುವಂತಿ ಸುಂದರರಾಜನ್(Madhuvanti Sundararajan), ಸೇರಿದಂತೆ ಅನೇಕರು ಉಬೆರ್ ಕ್ಯಾಬ್ ಸಿಇಒ ಜೊತೆಗಿನ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.
ತಡರಾತ್ರಿ Uberನಲ್ಲಿ ಪ್ರಯಾಣಿಸುತ್ತಿದ್ದಾಕೆ, ಬೆಳಗಾಗುತ್ತಿದ್ದಂತೆಯೇ ಶವವಾದಳು!
ಎಲ್ಲಾ ಕಷ್ಟಗಳು ಎದುರಿಸಿ ಯಶಸ್ಸಿನ ಶಿಖರ ಹತ್ತಿದಾಗ ಮನಸ್ಸಿಗೆ ಸಿಗುವ ಖುಷಿಯೇ ವಿವರಿಸಲು ಸಾಧ್ಯವಾಗದೇ ಇರುವಂಥದ್ದು. ಬಡ ಮಧ್ಯಮ ವರ್ಗ ಕುಟುಂಬದ ವಿದ್ಯಾರ್ಥಿಗಳ ಪಾಲಿಗೆ ಐಐಟಿಯಂಥ ಸಂಸ್ಥೆಗಳಲ್ಲಿ ಓದುವುದೇ ಮಹತ್ತರ ಸಾಧನೆ. ಇಲ್ಲಿನ ಓದಿಗೆ ತಕ್ಕಂತೆ ಸೂಕ್ತ ಕೆಲಸ ಸಿಕ್ಕರೆ ಅದಕ್ಕಿಂತ ಸಮಾಧಾನ ಇನ್ನೊಂದಿರುವುದಿಲ್ಲ. ಉತ್ತರಾಖಂಡದ (Uttarakhand) ಪುಟ್ಟ ಹಳ್ಳಿ ಕೋಟದ್ವಾರ್ ನ (Kotdwar) ಹುಡುಗ ರೋಹಿತ್ ನೇಗಿಗೆ (Rohit Negi ) ಸಿಕ್ಕಿರುವ ಅವಕಾಶವೇ ಹಾಗಿದೆ. ಐಐಟಿ ಗುವಾಹಟಿಯಲ್ಲಿ(IIT Guwahati) 2ನೇ ವರ್ಷದ ಎಂಟೆಕ್ (MTech) ಓದುತ್ತಿರುವ ರೈತನ ಮಗ ರೋಹಿತ್ ನೇಗಿಗೆ ಉಬರ್ ಇಂಟರ್ ನ್ಯಾಷನಲ್ (Uber International) ಜಾಬ್ ಆಫರ್ ನೀಡಿದೆ. ಉಬರ್ (Uber ) ಸಂಸ್ಥೆಯು ಈ ಹುಡಗನಿಗೆ ನೀಡಲಿರುವ ವೇತನ ಎಷ್ಟು ಗೊತ್ತೇ 2.05 ಕೋಟಿ ರೂಪಾಯಿ!