SBI Customers Alert:ಮಾರ್ಚ್ 31ರೊಳಗೆ ನೀವು ಈ ಕೆಲ್ಸ ಮಾಡದಿದ್ರೆ ಬ್ಯಾಂಕಿಂಗ್ ಸೇವೆ ಸ್ಥಗಿತ!

By Suvarna News  |  First Published Mar 16, 2022, 6:21 PM IST

*ಆಧಾರ್-ಪ್ಯಾನ್ ಜೋಡಣೆಗೆ ಮಾ.31 ಗಡುವು
*ಗ್ರಾಹಕರಿಗೆ ಈ ಬಗ್ಗೆ ಟ್ವೀಟ್ ಮೂಲಕ ಎಸ್ ಬಿಐ ಅಲರ್ಟ್
*ಆಧಾರ್ ಲಿಂಕ್ ಆಗದಿದ್ರೆ ಪ್ಯಾನ್ ನಿಷ್ಕ್ರಿಯ


ನವದೆಹಲಿ (ಮಾ.16): ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ (Customers) ಮಹತ್ವದ ಸೂಚನೆ ನೀಡಿದೆ. ಅಡಚಣೆರಹಿತ ಬ್ಯಾಂಕಿಂಗ್ ಸೇವೆಗಳನ್ನು (Banking services) ಪಡೆಯಲು ಮಾರ್ಚ್ 31ರೊಳಗೆ ಆಧಾರ್ ಕಾರ್ಡ್ಗೆ (Aadhaar Card) ಪ್ಯಾನ್ (PAN) ಜೋಡಣೆ ಮಾಡುವಂತೆ ಗ್ರಾಹಕರನ್ನು ಕೋರಿದೆ. ಆಧಾರ್ ಕಾರ್ಡ್ಗೆ ಪ್ಯಾನ್ ಲಿಂಕ್ ಮಾಡಲು ಮಾ.31 ಅಂತಿಮ ಗಡುವಾಗಿದೆ.

ಈ ಬಗ್ಗೆ ಟ್ವೀಟ್ ಮಾಡಿರೋ ಎಸ್ ಬಿಐ, ಪ್ಯಾನ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಮಾಡೋದು ಅಗತ್ಯ ಎಂದು ಹೇಳಿದೆ. ಒಂದು ವೇಳೆ ಅಂತಿಮ ಗಡುವಿನೊಳಗೆ ಪ್ಯಾನ್ ಗೆ ಆಧಾರ್ ಲಿಂಕ್ ಮಾಡಲು ಸಾಧ್ಯವಾಗದಿದ್ರೆ ಆಗ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ. ದೊಡ್ಡ ಮೊತ್ತದ ಹಣಕಾಸಿನ ವಹಿವಾಟಿಗೆ ಪ್ಯಾನ್ ಅಗತ್ಯ. ಹೀಗಾಗಿ ಪ್ಯಾನ್ ನಿಷ್ಕ್ರಿಯಗೊಂಡ್ರೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ತೊಂದರೆಯಾಗುತ್ತದೆ ಎಂದು ಎಸ್ ಬಿಐ ತನ್ನ ಗ್ರಾಹಕರಿಗೆ ಸೂಚನೆ ನೀಡಿದೆ.

Tap to resize

Latest Videos

ಡಾಲರ್ ಗೆ ಯುವಾನ್ ಟಕ್ಕರ್; ಚೀನಾಕ್ಕೆ ಕಚ್ಚಾ ತೈಲ ಡಾಲರ್ ಬದಲು ಯುವಾನ್ ನಲ್ಲಿ ಮಾರಾಟಕ್ಕೆ ಸೌದಿ ಸಿದ್ಧತೆ!

ಕಾಯಂ ಖಾತಾ ಸಂಖ್ಯೆಯನ್ನು (PAN) ಆದಾಯ ತೆರಿಗೆ ಇಲಾಖೆ ವಿತರಿಸುತ್ತದೆ. 10 ವಿಶಿಷ್ಟ ಅಂಕೆಗಳನ್ನು ಹೊಂದಿರೋ ಈ ಕಾರ್ಡ್ ಹಣಕಾಸಿನ ವ್ಯವಹಾರಗಳಿಗೆ ಅತೀಮುಖ್ಯವಾದ ದಾಖಲೆ. ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಇನ್ನು ಬ್ಯಾಂಕ್ ಖಾತೆ (Bank account),ಡಿಮ್ಯಾಟ್ ಖಾತೆ (Demat accunt) ತೆರೆಯೋವಾಗ ಕೂಡ ಪ್ಯಾನ್ ಕಾರ್ಡ್ ಕೇಳುತ್ತಾರೆ. ಇನ್ನು 50 ಸಾವಿರ ರೂ.ಗಿಂತ ಅಧಿಕ ಮೊತ್ತದ ಬ್ಯಾಂಕಿಂಗ್ ವ್ಯವಹಾರಗಳಿಗೆ ಪ್ಯಾನ್ ಕಾರ್ಡ್ ಅತ್ಯಗತ್ಯ. ಕೋವಿಡ್ -19  ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ಗೆ ಪ್ಯಾನ್ ಜೋಡಣೆ ಮಾಡೋ ಗಡುವನ್ನು 2021ರ ಸೆಪ್ಟೆಂಬರ್ 30ರಿಂದ 2022ರ ಮಾರ್ಚ್ 31ರ ತನಕ ವಿಸ್ತರಿಸಿತ್ತು.

ಆನ್ ಲೈನ್ ನಲ್ಲಿ ಆಧಾರ್-ಪ್ಯಾನ್ ಜೋಡಣೆ ಹೇಗೆ?
ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಜೋಡಣೆಯನ್ನು ಆನ್ ಲೈನ್ ನಲ್ಲೇ ಮಾಡಬಹುದು. ಅದು ಹೇಗೆ ಎಂಬ ಮಾಹಿತಿಯನ್ನು ಇಲ್ಲಿ ಹಂತ ಹಂತವಾಗಿ ವಿವರಿಸಲಾಗಿದೆ.
-ಮೊದಲು https://www.incometaxindiaefiling.gov.in/home ಭೇಟಿ ನೀಡಿ.
-'Our Services'ಪುಟಕ್ಕೆ ಹೋಗಿ.
-'Link Aadhaar'ಆಯ್ಕೆ ಮೇಲೆ ಕ್ಲಿಕ್ ಮಾಡಿ.
-ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. 
-ಇಲ್ಲಿ ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ, ಆಧಾರ್ ನಲ್ಲಿರುವಂತೆ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ.
- "I agree to validate my Aadhaar details'ಎಂಬ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
-ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ 6 ಅಂಕೆಗಳ OTP ಬರುತ್ತದೆ.
-ಈಗ ಪರಿಶೀಲನೆ ಪುಟದಲ್ಲಿ ನಿಮ್ಮ OTP ನಮೂದಿಸಿ ಆ ಬಳಿಕ "Validate" ಬಟನ್ ಮೇಲೆ ಕ್ಲಿಕ್ ಮಾಡಿ.
-ಈಗ ನಿಮ್ಮ ಮೊಬೈಲ್ಗೆ ಆಧಾರ್ ಗೆ ಪ್ಯಾನ್ ಲಿಂಕ್ ಆಗಿದೆ ಎಂಬ ಮೆಸೇಜ್ ಬರುತ್ತದೆ. 
ನೆನಪಿಡಿ, ಮಾಹಿತಿಗಳನ್ನು ದಾಖಲಿಸುವಾಗ ಆಧಾರ್ ಸಂಖ್ಯೆ ಹಾಗೂ ಹೆಸರು ಆಧಾರ್ ಕಾರ್ಡ್ನಲ್ಲಿ ಹೇಗೆ ನಮೂದಿಸಲ್ಪಟ್ಟಿದೆಯೋ ಹಾಗೆಯೇ ಇರಬೇಕು. ಇಲ್ಲವಾದ್ರೆ ತೊಂದರೆ ಎದುರಾಗಬಹುದು. 

ಕಚ್ಚಾತೈಲ ದರ 140 ಡಾಲರ್‌ನಿಂದ 99.84 ಡಾಲರ್‌ಗೆ ಭಾರೀ ಇಳಿಕೆ!

SMS ಮೂಲಕ ಮಾಹಿತಿ ಪಡೆಯಬಹುದು
ನಿಮ್ಮ ಆಧಾರ್ ಹಾಗೂ ಪಾನ್‌ ಕಾರ್ಡ್‌ ಈ ಮೊದಲೇ ಲಿಂಕ್ ಆಗಿದೆಯೋ ಇಲ್ಲವೋ ಎಂದು SMS ಮೂಲಕವೂ ತಿಳಿಯಬಹುದಾಗಿದೆ. ಇದಕ್ಕಾಗಿ ನೀವು 567678 ಅಥವಾ 56161 ನಂಬರ್‌ಗೆ ಸಂದೇಶ ಕಳುಹಿಸಬೇಕು. UIDPAN< 12 ಸಂಖ್ಯೆಯ ಆಧಾರ್ ನಂಬರ್> <10 ಸಂಖ್ಯೆಯ ಪರ್ಮನೆಂಟ್‌ ಅಕೌಂಟ್‌ ನಂಬರ್> ಟೈಪ್‌ ಮಾಡಿ ಕಳುಹಿಸಬೇಕು. ಒಂದು ವೇಳೆ ನಿಮ್ಮ ಆಧಾರ್ ಹಾಗೂ ಪಾನ್‌ ಕಾರ್ಡ್‌ ಈ ಮೊದಲೇ ಲಿಂಕ್ ಆಗಿದ್ದರೆ ಈ ಬಗ್ಗೆ ನಿಮಗೆ ಮರಳಿ ಮೆಸೇಜ್  ಬರುತ್ತದೆ.   


 

click me!