5 ವರ್ಷದಲ್ಲಿ ಹೂಡಿಕೆದಾರರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದ 10 ಪೈಸೆ ಷೇರು

By Mahmad Rafik  |  First Published Nov 7, 2024, 9:45 AM IST

ಒಂದು ಪೆನ್ನಿ ಸ್ಟಾಕ್ ೫ ವರ್ಷಗಳಲ್ಲಿ ಹೂಡಿಕೆದಾರರ ಭವಿಷ್ಯವನ್ನೇ ಬದಲಾಯಿಸಿದೆ. ೧೦ ಪೈಸೆಯ ಈ ಶೇರಿನಲ್ಲಿ ೧ ಲಕ್ಷ ರೂಪಾಯಿ ಹೂಡಿಕೆ ಮಾಡಿದವರ ಬಳಿ ಇಂದು ಸುಮಾರು ೪.೫ ಕೋಟಿ ರೂಪಾಯಿಗಳಷ್ಟು ಹಣವಿದೆ. ಈ ಶೇರು ಬಹು-ಬಾರಿ ಲಾಭ ನೀಡಿದೆ.


ಮುಂಬೈ: ಷೇರು ಮಾರುಕಟ್ಟೆಯಲ್ಲಿನ ಹಲವು ಪೆನ್ನಿ ಸ್ಟಾಕ್‌ಗಳು ಹೂಡಿಕೆದಾರರನ್ನು ಅಲ್ಪಾವಧಿಯಲ್ಲಿಯೇ ಕೋಟ್ಯಧಿಪತಿಗಳನ್ನಾಗಿ ಮಾಡಿವೆ. ಇಂತಹ ಪೆನ್ನಿ ಸ್ಟಾಕ್‌ಗಳು ಷೇರು ಮಾರುಕಟ್ಟೆಯಲ್ಲಿವೆ. ಇಂದು ನಾವು ನಿಮಗೆ 10 ಪೈಸೆಯ ಒಂದು ಷೇರು ಹೂಡಿಕೆದಾರರ ಭವಿಷ್ಯವನ್ನೇ ಬದಲಾಯಿಸಿದೆ. ಅತ್ಯಂತ ಕಡಿಮೆ ಬೆಲೆಯ ಈ ಷೇರು, ಯಾರೂ ಊಹಿಸದ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ರಿಟರ್ನ್ ನೀಡಿದೆ. ಈ ಷೇರುಗಳಲ್ಲಿ 5 ವರ್ಷಗಳ ಹಿಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಇಂದು ಅವರು ಕೋಟ್ಯಧಿಪತಿಗಳಾಗಿರುತ್ತಾರೆ. ಪ್ರತಿವರ್ಷವೂ ಷೇರುಗಳು ಹೂಡಿಕೆದಾರರಿಗೆ ಲಾಭ ನೀಡುತ್ತಲೇ ಬಂದಿವೆ. ಹಾಗಾದ್ರೆ ಈ ಷೇರು ಯಾವುದು ಅಂತ ನೋಡೋಣ ಬನ್ನಿ. 

ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿಯ ಷೇರುಗಳ ಕೇವಲ 5 ವರ್ಷದಲ್ಲಿ ಹೂಡಿಕೆದಾರರ ಖಾತೆಗೆ ಕೋಟಿ ಕೋಟಿ ಹಣ ಜಮೆಯಾಗುವಂತೆ ಮಾಡಿವೆ. 3ನೇ ಮೇ 2019ರಂದು ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿಯ ಒಂದು ಷೇರಿನ ಬೆಲೆ ಕೇವಲ 10 ಪೈಸೆಯಾಗಿತ್ತು. ನಂತರ ಷೇರು ಮಾರುಕಟ್ಟೆಯಲ್ಲಿ ಭಾರೀ ನೆಗೆತ ಕಂಡ ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿ, ಹಿಂದಿರುಗಿ ನೋಡಿಯೇ ಇಲ್ಲ. ಕಳೆದ 5 ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇ.44,640ರಷ್ಟು ಲಾಭ ನೀಡಿದೆ. 6ನೇ ಅಕ್ಟೋಬರ್‌ 2024ರಂದು ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿಯ ಒಂದು ಷೇರಿನ ಬೆಲೆ 24.05 ರೂಪಾಯಿಗೆ ಮುಕ್ತಾಯಗೊಂಡಿದೆ. ಸದ್ಯ ಕಂಪನಿ ಮೌಲ್ಯ 1,240 ಕೋಟಿ ರೂಪಾಯಿ ಆಗಿದೆ. 

Tap to resize

Latest Videos

undefined

1 ಲಕ್ಷ ಹೂಡಿಕೆ ಕೋಟಿ ಆಗಿದ್ದೇಗೆ?
23 ಆಗಸ್ಟ್ 2019ರ ಲೆಕ್ಕಾಚಾರದ ಪ್ರಕಾರ ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿಯ ಷೇರುಗಳ ಲಾಭ ಗಮನಿಸಿದರೆ, ಅಂದು ಹೂಡಿಕೆದಾರರು 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಇಂದು ಆ ಹಣ 4.50 ಕೋಟಿ ರೂಪಾಯಿಗೂ ಅಧಿಕವಾಗಿರುತ್ತಿತ್ತು. ಒಂದು ವರ್ಷದಲ್ಲಿಯೇ ಕೋಟ್ಯಧಿಪತಿಗಳಾಗುವ ಸಾಧ್ಯತೆಯನ್ನು ಈ ಷೇರು ಹೊಂದಿದೆ. ಹೆಚ್ಚು ಹೂಡಿಕೆ ಮಾತ್ರ ದೊಡ್ಡ ಪ್ರಮಾಣದ ಲಾಭಕ್ಕೆ ಕಾರಣವಾಗುತ್ತದೆ ಎಂಬುವುದು ನೆನಪಿನಲ್ಲಿರಲಿ.

ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿ 5 ವರ್ಷದ ಬೆಳವಣಿಗೆ
ಹೂಡಿಕೆದಾರರಿಗೆ ದೊಡ್ಡ ಪ್ರಮಾಣದಲ್ಲಿ ಲಾಭ ನೀಡುತ್ತಿರುವ ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿಯ ಬೆಳವಣಿಗೆ ಹಂತ ಹಂತವಾಗಿ ಏರಿಕೆಯಾಗುತ್ತಲೇ ಕಂಡು ಬಂದಿದೆ. 2019ರಲ್ಲಿ ಕೇವಲ 10 ಪೈಸೆಯಾಗಿತ್ತು. 3 ವರ್ಷಗಳಲ್ಲಿ 10 ಪೈಸೆಯಿಂದ 50 ಪೈಸೆಗೆ ಮಾತ್ರ ಏರಿಕೆಯಾಗಿತ್ತು. 2022ರಲ್ಲಿ ಷೇರಿನ ಬೆಲೆ 1 ರೂಪಾಯಿಗೆ ಹೆಚ್ಚಾಯ್ತು. 2023ರ ಮಾರ್ಚ್‌ 10ರಂದು ದಿಢೀರ್ ಅಂತ ಒಂದು ಷೇರಿನ ಬೆಲೆ 84.55 ರೂ.ಗೆ ತಲುಪಿತು. ನಂತರ ಕುಸಿತ ಕಾಣಲು ಆರಂಭಿಸಿದ 2024ರ ಜನವರಿ 5ರಂದು 17 ರೂ.ಗೆ ಇಳಿಕೆಯಾಯ್ತು. ಇದೀಗ ಮತ್ತೆ ಷೇರು ಬೆಲೆ ಏರಿಕೆ ಕಾರಣಲಾರಂಭಿಸಿದ್ದು, ಸದ್ಯ 24 ರೂಪಾಯಿಯು ಆಸುಪಾಸಿನಲ್ಲಿದೆ.

ಇದನ್ನೂ ಓದಿ: ಜಸ್ಟ್ 1 ಷೇರು, ಡೈರೆಕ್ಟ್ ಕೋಟ್ಯಧಿಪತಿ; ಖರೀದಿಗೆ ಜೀವಮಾನವೆಲ್ಲಾ ದುಡಿಬೇಕು!

ರಾಜ್ ರೇಯಾನ್ ಇಂಡಸ್ಟ್ರೀಸ್ ಏನು ಮಾಡುತ್ತದೆ
ಹೂಡಿಕೆದಾರರನ್ನು ಶ್ರೀಮಂತರನ್ನಾಗಿಸುತ್ತಿರುವ ರಾಜ್ ರೇಯಾನ್ ಇಂಡಸ್ಟ್ರೀಸ್‌ ಕಂಪನಿ, 1993ರ ಆಗಸ್ಟ್ 17ರಂದು ಸ್ಪಾಪನೆಯಾಗಿ ತನ್ನ ಕೆಲಸ ಆರಂಭಿಸಿತು. ಇದೊಂದು ಸಾರ್ವಜನಿಕ ಲಿಮಿಟೆಡ್ ಕಂಪನಿಯಾಗಿದ್ದು, ಚಿಪ್ಸ್, ಪಾಲಿಯೆಸ್ಟರ್ ನೂಲು ತಯಾರಿಸುತ್ತದೆ. ಕಂಪನಿಯ ಮಾರುಕಟ್ಟೆ ಬಂಡವಾಳ ಕೂಡ ವೇಗವಾಗಿ ಬೆಳೆಯುತ್ತಿದೆ ಮತ್ತು ಅದರಲ್ಲಿ ನಿರಂತರ ಏರಿಕೆ ಕಂಡುಬರುತ್ತಿದೆ.

ಗಮನಿಸಿ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಹೂಡಿಕೆ ಮಾಡುವ ಮೊದಲು ನಿಮ್ಮ ಮಾರುಕಟ್ಟೆ ತಜ್ಞರ ಸಲಹೆಯನ್ನು ಪಡೆಯಿರಿ.

ಇದನ್ನೂ ಓದಿ: 71 ಪೈಸೆಯ ಷೇರು ₹174, 1 ಲಕ್ಷ ಈಗ 2.5 ಕೋಟಿ ರೂಪಾಯಿ ಆಯ್ತು; ಝಣ ಝಣ ಕಾಂಚಾಣ

click me!