SBI Charges:ನೀವು ಎಸ್ ಬಿಐ ಗ್ರಾಹಕರೇ? ಹಾಗಿದ್ರೆ ಈ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ

Published : Jul 14, 2022, 02:15 PM IST
SBI Charges:ನೀವು ಎಸ್ ಬಿಐ ಗ್ರಾಹಕರೇ? ಹಾಗಿದ್ರೆ ಈ ಶುಲ್ಕಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ

ಸಾರಾಂಶ

*ಉಳಿತಾಯ ಖಾತೆಯಲ್ಲಿ ಮಾಸಿಕ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೂ ಎಸ್ ಬಿಐ ದಂಡ ವಿಧಿಸೋದಿಲ್ಲ *ಎಸ್ ಬಿಐ ಚೆಕ್ ಪುಸ್ತಕಕ್ಕೂ ಶುಲ್ಕ ವಿಧಿಸುತ್ತದೆ *ಎಸ್ ಬಿಐ ಎಟಿಎಂನಲ್ಲಿ ಮಾತ್ರವಲ್ಲ,ಬ್ಯಾಂಕ್ ಶಾಖೆಗಳಲ್ಲೂ ಉಚಿತ ಮಿತಿ ಮೀರಿದ ವಹಿವಾಟಿಗೆ ಶುಲ್ಕ

Business Desk: ಖಾಸಗಿ ಹಾಗೂ ಸಾರ್ವಜನಿಕ ವಲಯದ ಬ್ಯಾಂಕುಗಳು ವಿವಿಧ ವಹಿವಾಟುಗಳ ಮೇಲೆ ಗ್ರಾಹಕರಿಗೆ ನಿರ್ದಿಷ್ಟ ಶುಲ್ಕ ವಿಧಿಸೋದು ಕಾಮನ್. ಅದರಲ್ಲೂ ಎಟಿಎಂ ವಿತ್ ಡ್ರಾ, ಬ್ಯಾಂಕಿನ ಶಾಖೆಗಳಲ್ಲಿ ನಗದು ವಹಿವಾಟು, ಇಂಟರ್ನೆಟ್ ಬ್ಯಾಂಕಿಂಗ್ ಮತ್ತಿತರ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತದೆ. ಇನ್ನು ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೂ ನಿರ್ದಿಷ್ಟ ಶುಲ್ಕವನ್ನು ವಿಧಿಸಲಾಗುತ್ತದೆ. ಇನ್ನು ಕೆಲವು ಸೇವೆಗಳಿಗೆ ನಿರ್ದಿಷ್ಟ ಉಚಿತ ಮಿತಿ ಹೇರಲಾಗಿದ್ದು, ಅದನ್ನು ಮೀರಿದ್ರೆ ಮಾತ್ರ ಶುಲ್ಕ ವಿಧಿಸಲಾಗುತ್ತಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಇದಕ್ಕೆ ಹೊರತಾಗಿಲ್ಲ. ಆದ್ರೆ, 2020ರಿಂದ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿರೋದಕ್ಕೆ ಶುಲ್ಕ ವಿಧಿಸೋದನ್ನು ಎಸ್ ಬಿಐ ನಿಲ್ಲಿಸಿದೆ.  ವಿವಿಧ ಸೇವೆಗಳಿಗೆ ಎಸ್ ಬಿಐ ವಹಿವಾಟು ಶುಲ್ಕಗಳು ಶಾಖೆಯಿರುವ ಪ್ರದೇಶ ಅಥವಾ ಖಾತೆಯಲ್ಲಿನ ಕನಿಷ್ಠ ಬ್ಯಾಲೆನ್ಸ್ ಸೇರಿದಂತೆ ವಿವಿಧ ಅಂಶಗಳನ್ನು ಅವಲಂಭಿಸಿದೆ. ಹಾಗಾದ್ರೆ ಎಸ್ ಬಿಐ ತನ್ನ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸಲು ಎಷ್ಟು ಶುಲ್ಕ ವಿಧಿಸುತ್ತದೆ? ಆ ಶುಲ್ಕಗಳಲ್ಲಿ ಇತ್ತೀಚೆಗೆ ಬದಲಾವಣೆ ಆಗಿದೆಯಾ? ಇಲ್ಲಿದೆ ಮಾಹಿತಿ.

ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿದ್ರೆ?
ಉಳಿತಾಯ ಖಾತೆಗಳಲ್ಲಿ (Saving Accounts) ಮಾಸಿಕ ಕನಿಷ್ಠ ಬ್ಯಾಲೆನ್ಸ್ (Minimum balance) ನಿರ್ವಹಣೆ ಮಾಡದಿದ್ರೆ ದಂಡ ವಿಧಿಸೋದನ್ನು  2020ರ ಮಾರ್ಚ್ ನಿಂದ ನಿಲ್ಲಿಸಲಾಗಿದೆ ಎಂದು ಎಸ್ ಬಿಐ (SBI) ತನ್ನ ವೆಬ್ ಸೈಟ್ ನಲ್ಲಿ ತಿಳಿಸಿದೆ. ಈ ಹಿಂದೆ ಎಸ್ ಬಿಐ ಶಾಖೆಯ ಪ್ರದೇಶವನ್ನು ಆಧಾರಿಸಿ ಅಂದ್ರೆ ಮೆಟ್ರೋ (Metro), ನಗರ (Urban) ಹಾಗೂ ಗ್ರಾಮೀಣ ಪ್ರದೇಶವನ್ನು (Rural area) ಪರಿಗಣಿಸಿ  5ರೂ.ನಿಂದ 15ರೂ. ತನಕ ದಂಡ ವಿಧಿಸುತ್ತಿತ್ತು. 

ATM Withdrawal Rule:ಎಟಿಎಂನಲ್ಲಿ ತಿಂಗಳಿಗೆ 4 ವಿತ್ ಡ್ರಾ ಬಳಿಕ ಪ್ರತಿ ವಹಿವಾಟಿಗೆ 173ರೂ. ಪಾವತಿಸಬೇಕಾ?

ಎಟಿಎಂ ವಹಿವಾಟು ಉಚಿತ ಮಿತಿ
ಮಾಸಿಕ ಸರಾಸರಿ 1ಲಕ್ಷ ರೂ. ತನಕ ಖಾತೆಯಲ್ಲಿ ಬ್ಯಾಲೆನ್ಸ್ (Balance) ನಿರ್ವಹಣೆ ಮಾಡುವ ಎಸ್ ಬಿಐ ಗ್ರಾಹಕರು (SBI Customers), ಎಸ್ ಬಿಐ ಎಟಿಎಂಗಳಲ್ಲಿ ತಿಂಗಳಿಗೆ  5 ಉಚಿತ ವಹಿವಾಟುಗಳನ್ನು(Transaction) ನಡೆಸಲು ಅವಕಾಶವಿದೆ. ಇನ್ನು ಬೇರೆ ಬ್ಯಾಂಕಿನ ಎಟಿಎಂಗಳಲ್ಲಿ ಉಚಿತ ವಹಿವಾಟಿನ ಮಿತಿಯನ್ನು ದೆಹಲಿ (Delhi), ಮುಂಬೈ (Mumbai), ಕೋಲ್ಕತ್ತ (Kolkata), ಬೆಂಗಳೂರು (Bengaluru), ಚೆನ್ನೈ (Chennai) ಹಾಗೂ ಹೈದರಾಬಾದ್ (Hyderabad) ಸೇರಿದಂತೆ 6 ಮೆಟ್ರೋ ನಗರಗಳಿಗೆ 3ಕ್ಕೆ ಸೀಮಿತಗೊಳಿಸಲಾಗಿದೆ. ಇನ್ನು ಇತರ ಪ್ರದೇಶಗಳಲ್ಲಿ 5 ಉಚಿತ ವಹಿವಾಟುಗಳಿಗೆ ಅವಕಾಶವಿದೆ. ಇನ್ನು ಮಾಸಿಕ 1ಲಕ್ಷ ರೂ.ಗಿಂತ ಅಧಿಕ ಸರಾಸರಿ ಬ್ಯಾಲೆನ್ಸ್ (Balance) ನಿರ್ವಹಣೆ ಮಾಡುವ ಗ್ರಾಹಕರಿಗೆ ಎಟಿಎಂ ಉಚಿತ ವಹಿವಾಟಿನ ಮೇಲೆ ಯಾವುದೇ ಮಿತಿಯಿಲ್ಲ. ಇನ್ನು ಈ ಮಾಸಿಕ ಉಚಿತ ಮಿತಿ ಮೀರಿದ ಹಣಕಾಸು  ವಹಿವಾಟಿಗೆ ಎಸ್ ಬಿಐ 20 ರೂ. ಶುಲ್ಕ ವಿಧಿಸುತ್ತದೆ. ಇನ್ನು ಹಣಕಾಸೇತರ ವಹಿವಾಟುಗಳಿಗೆ ಎಸ್ ಬಿಐ ಎಟಿಎಂಗಳಲ್ಲಿ 5ರೂ. ಹಾಗೂ ಇತರ ಬ್ಯಾಂಕ್ ಎಟಿಎಂಗಳಲ್ಲಿ 8ರೂ. ಸೇವಾ ಶುಲ್ಕ ಹಾಗೂ ತೆರಿಗೆಗಳನ್ನು ವಿಧಿಸಲಾಗುತ್ತದೆ.

ನಗದು ವಿತ್ ಡ್ರಾ ಶುಲ್ಕಗಳು
ಬ್ಯಾಂಕಿನ ಶಾಖೆಗಳು ಹಾಗೂ ಎಟಿಎಂ ಉಭಯ ಕಡೆಗಳಲ್ಲಿ ಉಚಿತ 4 ವಹಿವಾಟುಗಳ ಮಿತಿ ಮೀರಿದ್ರೆ ಎಸ್ ಬಿಐ ಶುಲ್ಕ ವಿಧಿಸುತ್ತದೆ. ಶಾಖೆಯಲ್ಲಿ ನಗದು ವಿತ್ ಡ್ರಾ ವಹಿವಾಟಿನ ಮೇಲೆ 15ರೂ. ಶುಲ್ಕ + ಜಿಎಸ್ ಟಿ (GST) ವಿಧಿಸುತ್ತದೆ. 

ಎಸ್‌ಬಿಐ ಬಿಟ್ಟು ಉಳಿದೆಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿ: NCAER

ಚೆಕ್ ಬುಕ್ ಶುಲ್ಕ
ಒಂದು ಆರ್ಥಿಕ ಸಾಲಿನಲ್ಲಿ ಎಸ್ ಬಿಐ (SBI) ಮೊದಲ 10 ಚೆಕ್ ಹಾಳೆಗಳನ್ನು ಗ್ರಾಹಕರಿಗೆ (Customers) ಉಚಿತವಾಗಿ ನೀಡುತ್ತದೆ. ಆ ಬಳಿಕ 10 ಎಲೆಗಳ ಚೆಕ್ ಪುಸ್ತಕಕ್ಕೆ 40ರೂ.+ಜಿಎಸ್ ಟಿ ಶುಲ್ಕ ವಿಧಿಸುತ್ತದೆ. ಇನ್ನು 25 ಎಲೆಗಳ ಚೆಕ್ ಪುಸ್ತಕಕ್ಕೆ ಎಸ್ ಬಿಐ 75 ರೂ.+ಜಿಎಸ್ ಟಿ ವಿಧಿಸುತ್ತದೆ. ಇನ್ನು ತುರ್ತಾಗಿ ಚೆಕ್ ಪುಸ್ತಕ ಬೇಕಿದ್ದರೆ 50 ರೂ.+ಜಿಎಸ್ ಟಿ ಶುಲ್ಕ ವಿಧಿಸುತ್ತದೆ. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ