ATM Withdrawal Rule:ಎಟಿಎಂನಲ್ಲಿ ತಿಂಗಳಿಗೆ 4 ವಿತ್ ಡ್ರಾ ಬಳಿಕ ಪ್ರತಿ ವಹಿವಾಟಿಗೆ 173ರೂ. ಪಾವತಿಸಬೇಕಾ?

Published : Jul 14, 2022, 10:30 AM IST
ATM Withdrawal Rule:ಎಟಿಎಂನಲ್ಲಿ ತಿಂಗಳಿಗೆ 4 ವಿತ್ ಡ್ರಾ ಬಳಿಕ ಪ್ರತಿ ವಹಿವಾಟಿಗೆ 173ರೂ. ಪಾವತಿಸಬೇಕಾ?

ಸಾರಾಂಶ

*ಕೆಲವು ದಿನಗಳಿಂದ ಎಟಿಎಂ ವಿತ್ ಡ್ರಾ ಮಿತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಟ *ಈ ಸುದ್ದಿ ಸುಳ್ಳು ಎಂದು ದೃಢೀಕರಿಸಿರುವ ಸರ್ಕಾರ *ಆರ್ ಬಿಐ ಮಾರ್ಗಸೂಚಿ ಅನ್ವಯ ಉಚಿತ ವಿತ್ ಡ್ರಾ ಮಿತಿ ಮೀರಿದ ಪ್ರತಿ ವಹಿವಾಟಿಗೆ ಗರಿಷ್ಠ  21ರೂ.  ಶುಲ್ಕ

ನವದೆಹಲಿ (ಜು.14): ಎಟಿಎಂನಿಂದ ತಿಂಗಳಲ್ಲಿ ನಾಲ್ಕಕ್ಕಿಂತ ಹೆಚ್ಚಿನ ವಿತ್ ಡ್ರಾಗಳ ಮೇಲೆ 173 ರೂ. ಕಡಿತಗೊಳಿಸಲಾಗೋದು ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಹಾಗಾದ್ರೆ ಈ ಸಂದೇಶದಲ್ಲಿರೋದು ನಿಜಾನಾ? ಎಟಿಎಂಗಳಿಂದ ನಗದು ವಿತ್ ಡ್ರಾ ಅಥವಾ ಹಣಕಾಸೇತರ ವ್ಯವಹಾರಗಳಿಗೆ ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಮಾರ್ಗಸೂಚಿಗಳನ್ನು ಹೊರಡಿಸಿದೆ.  ಎಲ್ಲ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡುದಾರರಿಗೆ ತಿಂಗಳಲ್ಲಿ ಎಟಿಎಂ ಉಚಿತ ವಹಿವಾಟುಗಳಿಗೆ  ನಿಗದಿತ ಮಿತಿ ವಿಧಿಸಲಾಗಿದ್ದು, ಅದಕ್ಕೂ ಮೀರಿದ ವಹಿವಾಟಿಗೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು. ಈ ಮಾರ್ಗಸೂಚಿಗಳನ್ನು ಕೊನೆಯದಾಗಿ ಈ ವರ್ಷದ ಜನವರಿ ತಿಂಗಳಲ್ಲಿ ಪರಿಷ್ಕರಿಸಲಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಎಟಿಎಂ ವಹಿವಾಟಿನ ಶುಲ್ಕಕ್ಕೆ ಸಂಬಂಧಿಸಿ ಗೊಂದಲ ಮೂಡಿಸುವ ಸುದ್ದಿ ಹರಿದಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಎಟಿಎಂಗಳಿಂದ 4ಕ್ಕಿಂತ ಹೆಚ್ಚಿನ ವಿತ್ ಡ್ರಾಗಳ ಮೇಲೆ 173ರೂ. ಶುಲ್ಕ ಕಡಿತಗೊಳಿಸಲಾಗೋದು ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಸಂದೇಶದ ಪ್ರಕಾರ ನೀವು ಎಟಿಎಂನಿಂದ ನಾಲ್ಕಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ರೆ  23ರೂ. ಸೇವಾ ಶುಲ್ಕದ ಜೊತೆಗೆ 150ರೂ. ತೆರಿಗೆ ಪಾವತಿಸಬೇಕು. ಅಲ್ಲದೆ, ಜೂನ್ 1ರಿಂದ ನೀವು ಬ್ಯಾಂಕುಗಳಲ್ಲಿನ ಪ್ರತಿ ವಹಿವಾಟಿನ ಮೇಲೆ 150ರೂ. ಪಾವತಿಸಬೇಕು.

ವಾಸ್ತವ ಏನು?
ಈ ಸುದ್ದಿಯ ಬಗ್ಗೆ ಪ್ರೆಸ್ ಇನ್ಫರ್ಮೇಷನ್ ಬ್ಯುರೋ (PIB) ಪ್ಯಾಕ್ಟ್ ಚೆಕ್ (Fact Check) ನಡೆಸಿದ್ದು, ಸುಳ್ಳು ಎಂಬುದು ತಿಳಿದು ಬಂದಿದೆ. ನಿಮ್ಮ ಬ್ಯಾಂಕಿನ ಎಟಿಎಂನಿಂದ (ATM) ಪ್ರತಿ ತಿಂಗಳು 5 ಉಚಿತ ವಹಿವಾಟು ನಡೆಸಬಹುದು. ಅದರ ಬಳಿಕ ಪ್ರತಿ ವಹಿವಾಟಿನ ಮೇಲೆ ಗರಿಷ್ಠ  21ರೂ. ಅಥವಾ ಯಾವುದೇ ತೆರಿಗೆಯನ್ನು (Tax) ನೀವು ಪ್ರತ್ಯೇಕವಾಗಿ ಪಾವತಿಸಬೇಕು ಎಂದು ಪಿಐಬಿ ಟ್ವೀಟ್ ನಲ್ಲಿ ತಿಳಿಸಿದೆ. 

ಎಸ್‌ಬಿಐ ಬಿಟ್ಟು ಉಳಿದೆಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿ: NCAER

ಎಟಿಎಂ ವಿತ್ ಡ್ರಾ ನಿಯಮದಲ್ಲಿ ಏನಿದೆ?
ಎಟಿಎಂ ಶುಲ್ಕಗಳು (Fees) ಹಾಗೂ ಚಾರ್ಜ್ ಗಳ  (Charges) ಪರಿಷ್ಕರಣೆಗೆ ಸಂಬಂಧಿಸಿ ಆರ್ ಬಿಐ (RBI) 2019ರ ಜೂನ್ ನಲ್ಲಿ ಸಮಿತಿಯೊಂದನ್ನು ರಚಿಸಿತ್ತು. 2021ರ ಜೂನ್ ನಲ್ಲಿ ಎಟಿಎಂ ವಹಿವಾಟಿನ ಶುಲ್ಕಗಳನ್ನು ಆರ್ ಬಿಐ ಪರಿಷ್ಕರಿಸಿತ್ತು. ಅದರ ಅನ್ವಯ ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿಯಮದ ಪ್ರಕಾರ ನೀವು ಖಾತೆ ಹೊಂದಿರುವ ಬ್ಯಾಂಕ್  ಎಟಿಎಂನಲ್ಲಿ ಆರಂಭಿಕ 5 ಟ್ರಾನ್ಸಾಕ್ಷನ್ (Transaction) ಉಚಿತವಾಗಿದೆ. ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ ಬೇರೆ ಬ್ಯಾಂಕ್ ಎಟಿಎಂಗಳಲ್ಲಿ ಮೆಟ್ರೋ ನಗರಗಳಲ್ಲಿ (Metro cities) ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು. ಇದ್ರಲ್ಲಿ ಹಣಕಾಸು ಹಾಗೂ ಹಣಕಾಸೇತರ ವ್ಯವಹಾರ ಎರಡೂ ಸೇರಿದೆ. ಈ ಮಿತಿಗಳನ್ನು ಮೀರಿದ್ರೆ ಪ್ರತಿ ಹೆಚ್ಚುವರಿ ಟ್ರಾನ್ಸಾಕ್ಷನ್  ಮೇಲೆ ಪ್ರಸ್ತುತ 21ರೂ. ಶುಲ್ಕ ವಿಧಿಸಲಾಗುತ್ತಿದೆ. ಈ ಹಿಂದೆ ಈ ಶುಲ್ಕ 20ರೂ. ಇತ್ತು. ಆದ್ರೆ 2022ರ ಜನವರಿ 1ರಿಂದ ನಗದು ಹಾಗೂ ನಗದುರಹಿತ ಎಟಿಎಂ ವ್ಯವಹಾರಗಳು ನಿಗದಿತ ಮಾಸಿಕ ಮಿತಿಯನ್ನು (limit) ಮೀರಿದ್ರೆ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕುಗಳಿಗೆ ಆರ್ ಬಿಐ ಅವಕಾಶ ನೀಡಿತ್ತು. 

ಬ್ಯುಸಿನೆಸ್ ಮಾಡ್ಬೇಕಾ? ಸ್ಟೇಷನರಿ ಅಂಗಡಿ ಹೇಗೆ ತೆರೆಯೋದು?

ಕಾರ್ಡ್ ರಹಿತ ಹಣ ಹಿಂಪಡೆಯಲು ಅವಕಾಶ
ಕೆಲವೇ ಬ್ಯಾಂಕುಗಳಿಗೆ ಸೀಮಿತವಾಗಿದ್ದ ಎಟಿಎಂಗಳಲ್ಲಿ ಕಾರ್ಡ್‌ರಹಿತ ಹಣ ಹಿಂಪಡೆಯುವ ವ್ಯವಸ್ಥೆಯನ್ನು ಎಲ್ಲ ಬ್ಯಾಂಕುಗಳ, ಎಲ್ಲ ಎಟಿಎಂಗಳಿಗೂ ವಿಸ್ತರಿಸಲು ಆರ್‌ಬಿಐ ನಿರ್ಧರಿಸಿದೆ. ಪ್ರಸ್ತುತ ಕೆಲವೇ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ತಮ್ಮ ಎಟಿಎಂಗಳ ಮೂಲಕ ಮಾತ್ರವೇ  ಕಾರ್ಡ್‌ ಬಳಸದೇ ಹಣ ಹಿಂಪಡೆಯುವ ಅವಕಾಶ ಕಲ್ಪಿಸಿವೆ. ಈಗ ಇದನ್ನು ಎಲ್ಲ ಬ್ಯಾಂಕುಗಳಿಗೆ ವಿಸ್ತರಿಸಲು ಆರ್ ಬಿಐ ಮುಂದಾಗಿದೆ. ಯುಪಿಐ (ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌) ಬಳಸಿ ಎಟಿಎಂಗಳ ಮೂಲಕ ಹಣ ಹಿಂಪಡೆಯುವ ವ್ಯವಸ್ಥೆ ಜಾರಿಯಿಂದಾಗಿ ಕಾರ್ಡ್‌ ಸ್ಕಿಮ್ಮಿಂಗ್‌, ಕಾರ್ಡ್‌ ಕ್ಲೋನಿಂಗ್‌ ಮೊದಲಾದ ಅಕ್ರಮಗಳಿಗೆ ತಡೆ ಹಾಕಬಹುದು ಎಂದು ಆರ್‌ಬಿಐ ಹೇಳಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?
ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ