SBI ಗ್ರಾಹಕರೇ ಗಮನಿಸಿ: ಜೂನ್ 20ಕ್ಕೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ!

By Suvarna NewsFirst Published Jun 19, 2021, 5:10 PM IST
Highlights

* ಜೂನ್ 20ರಂದು SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ

* ಇಂಟರ್ನೆಟ್ ಬ್ಯಾಂಕಿಂಗ್, YONO ಹಾಗೂ UPI ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದ ಬ್ಯಾಂಕ್

* ಟ್ವೀಟ್ ಮಾಡಿ ಮಾಹಿತಿ ಕೊಟ್ಟ ಎಸ್‌ಬಿಐ

ನವದೆಹಲಿ(ಜೂ.19): ತಮ್ಮ ಆನ್ ಲೈನ್ ಬ್ಯಾಂಕಿಂಗ್ ಸೇರಿ ಇನ್ನಿತರ ಸೇವೆಯಲ್ಲಿ ಭಾನುವಾರ(ಜೂನ್ 19, 2021) ವ್ಯತ್ಯಯವಾಗಲಿದೆ. ಗ್ರಾಹಕರು ದಯವಿಟ್ಟು ಹೊಂದಿಕೊಂಡು ಹೋಗಬೇಕೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ. 

ಹೌದು ನಿರ್ವಹಣಾ ಚಟುವಟಿಕೆ ನಡೆಯಲಿರುವುದರಿಂದ ಎಸ್‌ಬಿಐನ ಇಂಟರ್ನೆಟ್ ಬ್ಯಾಂಕಿಂಗ್, YONO ಹಾಗೂ UPI ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಜೂನ್ 20ರಂದು ಸುಮಾರು ನಲ್ವತ್ತು ನಿಮಿಷ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಎದುರಾಗಬಹುದೆಂದು ಬ್ಯಾಂಕ್ ಹೇಳಿದೆ.

ಸಮಯದ ಮಾಹಿತಿಯನ್ನೂ ನೀಡಿರುವ ಎಸ್‌ಬಿಐ 20.06.2021 ರಂದು ರಾತ್ರಿ 01:00 ಗಂಟೆಯಿಂದ 01:40 ಗಂಟೆವರೆಗೆ ನಿರ್ವಹಣಾ ಚಟುವಟಿಕೆಗಳನ್ನು ಕೈಗೊಳ್ಳುವುದರಿಂದ ಸೇವೆಗಳು ಅಲಭ್ಯವಾಗಲಿದೆ. ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ ಎಂದು ಟ್ವೀಟ್ ಮಾಡಿದೆ.  ಬ್ಯಾಂಕ್ ಹೇಳಿದೆ.

We request our esteemed customers to bear with us as we strive to provide a better banking experience. pic.twitter.com/vW41S6HhxW

— State Bank of India (@TheOfficialSBI)

ಇನ್ನು ಇದಕ್ಕೂ ಮುನ್ನ ಜೂನ್ 17ರಂದು ಕೆಲ ತಾಸು ಬ್ಯಾಂಕ್‌ನ ಇಂಟರ್ನೆಟ್‌ ಬ್ಯಾಂಕಿಂಗ್ ಸೇರಿ ಅನೇಕ ಸೇವೆಗಳು ವ್ಯತ್ಯಯವಾಗೊಂಡಿದ್ದವು. 

click me!