ಮಹಿಳೆಯರ ಕೈನಲ್ಲಿ ಸ್ವಲ್ಪವಾದ್ರೂ ಹಣವಿರಬೇಕು. ಹಾಗಂತ ಹೊಟ್ಟೆ ಕಟ್ಟಿ ಹಣ ಉಳಿಸಬೇಕು ಅಂತಾ ನಾವು ಹೇಳ್ತಿಲ್ಲ. ಮನೆ ಖರ್ಚಿಗೆ ಅಂತ ತೆಗೆದಿಟ್ಟ ಹಣದಲ್ಲಿಯೇ ನೀವು ಉಳಿತಾಯ ಮಾಡಬಹುದು. ಖರ್ಚು ಕಡಿಮೆ ಮಾಡೋ ವಿಧಾನ ತಿಳಿಯೋದು ಮುಖ್ಯ.
ಈಗಿನ ದಿನಮಾನದಲ್ಲಿ ಉಳಿತಾಯ ಮಾಡುವುದು ಅಗತ್ಯವಾಗಿದೆ. ತುರ್ತು ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸುವ ಬದಲು ಸ್ವಲ್ಪ ಮಟ್ಟಿಗೆ ಉಳಿತಾಯ ಮಾಡಿದ್ರೆ ಅದು ನೆರವಿಗೆ ಬರುತ್ತದೆ ಎಂಬ ಸತ್ಯ ಜನರಿಗೆ ತಿಳಿದಿದೆ. ಹಾಗಂತ ಉಳಿತಾಯ ಮಾಡೋದು ಹೇಳಿದಷ್ಟು ಸುಲಭವಲ್ಲ. ದುಬಾರಿ ದುನಿಯಾದಲ್ಲಿ ಬರುವ ಆದಾಯದಲ್ಲಿ ಮನೆ ಖರ್ಚು ನೋಡಿಕೊಳ್ಳೋದೇ ಕಷ್ಟ. ಹಾಗಿರುವಾಗ ಎಲ್ಲಿ ಉಳಿತಾಯದ ಮಾತು ಎನ್ನುವವರಿದ್ದಾರೆ. ಮಕ್ಕಳ ಶಾಲೆಗೆ, ಅಡುಗೆ, ಆಹಾರಕ್ಕೆ, ಮನೆಗೆ ಸಂಬಂಧಿಸಿದ ಸಣ್ಣಪುಟ್ಟ ವಸ್ತುಗಳನ್ನು ಖರೀದಿಸಲು ಸಾಕಷ್ಟು ಖರ್ಚು ಮಾಡಬೇಕಾಗುತ್ತದೆ. ತಿಂಗಳಿಗೆ ಸ್ವಲ್ಪ ಹಣ ಉಳಿಸೋದು ಕಷ್ಟ ಎನ್ನುವವರು ಕೆಲ ಟ್ರಿಕ್ಸ್ ಫಾಲೋ ಮಾಡ್ಲೇಬೇಕು. ಮಹಿಳೆಯಾದವಳು ಬುದ್ಧಿ ಉಪಯೋಗಿಸಿ ಉಳಿತಾಯ ಮಾಡುವುದು ಬಹಳ ಮುಖ್ಯ.
ನೀವು ಬಂದ ಹಣ (Money) ವನ್ನು ನಿಮ್ಮ ಬ್ಯಾಂಕ್ (Bank) ಖಾತೆಗೆ ಹಾಕ್ಬೇಕು ಇಲ್ಲವೆ ಮನೆಯಲ್ಲಿ ನಗದು ಹಣವನ್ನು ಕೂಡಿಡಬೇಕು ಅಂತಾ ನಾವು ಹೇಳ್ತಿಲ್ಲ. ಮನೆ (House ) ನಡೆಸುವಾಗ ಅಲ್ಲಿಯೇ ನೀವು ಸಣ್ಣ ಉಳಿತಾಯ (Saving) ಮಾಡಬಹುದು. ಅದು ಹೇಗೆ ಎಂಬುದನ್ನು ನಾವು ಹೇಳ್ತೇವೆ.
ನಿಮ್ಮ ಎಟಿಎಂ ಕಾರ್ಡ್ ಕಳುವಾಗಿದೆಯಾ? ತಕ್ಷಣ ಬ್ಲಾಕ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ
ಅಡುಗೆ (Kitchen) ಮನೆಯಲ್ಲಿದೆ ಉಳಿತಾಯದ ಗುಟ್ಟು : ಮಹಿಳೆಯರು ದಿನದ ಬಹುತೇಕ ಗಂಟೆಯನ್ನು ಅಡುಗೆ ಮನೆಯಲ್ಲಿ ಕಳೆಯುತ್ತಾರೆ. ಈಗಾಗಲೇ ಅಡುಗೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಮಹಿಳೆಯರಿಗೆ ಎಷ್ಟು ಮಂದಿಗೆ ಎಷ್ಟು ಆಹಾರ ತಯಾರಿಸಬೇಕು ಎಂಬುದು ತಿಳಿದಿರುತ್ತದೆ. ಗೊತ್ತಿಲ್ಲವೆಂದ್ರೆ ಅದನ್ನು ಗೊತ್ತು ಮಾಡ್ಕೊಳ್ಳಿ. ಅಗತ್ಯಕ್ಕಿಂತ ಹೆಚ್ಚು ಅಡುಗೆ ತಯಾರಿಸಬೇಡಿ. ಅನೇಕ ಬಾರಿ ನಾವು ಸೇವಿಸುವ ಆಹಾರಕ್ಕಿಂತ ಎಸೆಯುವ ಆಹಾರವೇ ಹೆಚ್ಚಿರುತ್ತದೆ. ಹಾಗಾಗಿ ಸ್ವಲ್ಪ ಆಹಾರ ತಯಾರಿಸಿ. ಒಂದ್ವೇಳೆ ಆಹಾರ ಮಿಕ್ಕಿದ್ರೆ ಅದನ್ನು ಬೇರೆ ರೀತಿಯಲ್ಲಿ ಉಪಯೋಗಿಸಿ. ದಾಲ್ ಮಾಡಿರೋದು ಹೆಚ್ಚಾಗಿದೆ ಎಂದಾದ್ರೆ ನೀವು ಅದನ್ನು ಪರೋಟಾ ಮಾಡಲು ಬಳಸಬಹುದು. ಮನೆಗೆ ಒಂದಿಷ್ಟು ತರಕಾರಿ, ಮಸಾಲೆ ಪದಾರ್ಥಗಳನ್ನು ತಂದಿರುತ್ತೇವೆ. ಆದ್ರೆ ಅದನ್ನು ಬಳಸುವುದಿಲ್ಲ. ಹಾಗಾಗಿ ಅವೆಲ್ಲ ಹಾಳಾಗುತ್ತದೆ. ಅದ್ರ ಬದಲು ಮನೆಯಲ್ಲಿರುವ ವಸ್ತುಗಳನ್ನು ಅಚ್ಚುಕಟ್ಟಾಗಿ ಬಳಸಲು ಪ್ರಯತ್ನಿಸಬೇಕು. ಇದ್ರಿಂದ ನಿಮಗೆ ತಿಳಿಯದೆ ನಿಮ್ಮ ಅಡುಗೆ ಮನೆ ಖರ್ಚು ಕಡಿಮೆಯಾಗಿರುತ್ತದೆ.
ಶಾಪಿಂಗ್ ಮಾಡುವಾಗ ಗಮನವಿರಲಿ : ಶಾಪಿಂಗ್ ನಲ್ಲಿ ನಾವು ವಿನಃ ಖರ್ಚು ಮಾಡುವುದು ಹೆಚ್ಚು. ಹಾಗೆಯೇ ಒಂದೊಂದೇ ವಸ್ತುವನ್ನು ಖರೀದಿ ಮಾಡಿದಾಗ ಖರ್ಚು ಹೆಚ್ಚಾಗುತ್ತದೆ. ಉದಾಹರಣೆಗೆ ನೀವು ಹೆಚ್ಚೆಚ್ಚು ತರಕಾರಿ ಬಳಸ್ತೀರಿ ಎಂದಾದ್ರೆ ಕಡಿಮೆ ಬೆಲೆಗೆ ಸಿಗುವ ಮಾರುಕಟ್ಟೆಗೆ ಹೋಗಿ ತರಕಾರಿ ಖರೀದಿ ಮಾಡಿ. ಶಾಪಿಂಗ್ ಮಾಲ್ ಗಳಲ್ಲಿ ಕೂಡ ನೀವು ಖರೀದಿ ಮಾಡಬಹುದು. ಅಲ್ಲಿ ಒಂದಕ್ಕೆ ಒಂದು ಫ್ರೀ ಅಥವಾ ಇಷ್ಟು ಪ್ರಮಾಣದ ಖರೀದಿಗೆ ರಿಯಾಯಿತಿ ಸೇರಿದಂತೆ ಕೆಲ ಆಫರ್ ಇರುತ್ತದೆ. ಅಲ್ಲಿ ಖರೀದಿ ಮಾಡಿದ್ರೆ ನಿಮ್ಮ ಹಣ ಸ್ವಲ್ಪ ಮಟ್ಟಿಗೆ ಉಳಿಯುತ್ತದೆ. ಒಮ್ಮೆ ಮಾರುಕಟ್ಟೆಗೆ ಹೋದಾಗ್ಲೇ ಅಗತ್ಯವಿರುವ ವಸ್ತುವನ್ನು ಖರೀದಿಸಿ. ಪದೇ ಪದೇ ಹೋಗ್ತಿದ್ದರೆ, ಸಾರಿಗೆ ಖರ್ಚಿನ ಜೊತೆ ಅಗತ್ಯದ ಜೊತೆ ಅನಗತ್ಯ ವಸ್ತುಗಳ ಮೇಲೆ ಕಣ್ಣು ಹೋಗುತ್ತದೆ.
ಮನೆಯ ಸಣ್ಣ ಪುಟ್ಟ ವಿಷ್ಯದ ಬಗ್ಗೆ ಇರಲಿ ಗಮನ : ಮನೆಯಲ್ಲಿ ನಮಗೆ ಗೊತ್ತಿಲ್ಲದೆ ನಾವು ಒಂದಿಷ್ಟು ಖರ್ಚುಗಳನ್ನು ಮಾಡಿರ್ತೇವೆ. ಅನವಶ್ಯಕ ಬಟ್ಟೆ ಖರೀದಿಯಿಂದ ಹಿಡಿದು ಇಡೀ ದಿನ ಮನೆಯಲ್ಲಿ ಕರೆಂಟ್ ಉರಿಸುವವರೆಗೆ ಅನೇಕ ಖರ್ಚುಗಳು ನಮಗೆ ತಿಳಿಯೋದಿಲ್ಲ. ಅವುಗಳನ್ನು ಗಮನಿಸಿ ಅದ್ರ ಮೇಲೆ ನಿಯಂತ್ರಣ ಹೇರಿದ್ರೆ ನಾವು ತಿಂಗಳಿಗೆ ಸಣ್ಣ ಉಳಿತಾಯ ಮಾಡಬಹುದು.
50 ವರ್ಷ ದಾಟಿದ್ದರೂ, ಹೊಸ ವೃತ್ತಿ ಜೀವನ ಆರಂಭಿಸಲು ಇಲ್ಲಿವೆ ಆಯ್ಕೆಗಳು
ಸಣ್ಣ ಉಳಿತಾಯ (Small Savings) ಶುರು ಮಾಡಿ : ಮಹಿಳೆಯರು ಉಳಿತಾಯ ಮಾಡ್ಲೇಬೇಕು. ಹಾಗಾಗಿ ಅವರು ಬ್ಯಾಂಕ್ ಅಥವ ಅಂಚೆ ಕಚೇರಿಯಲ್ಲಿ (Post Office) ಖಾತೆ ತೆರೆದು ತಿಂಗಳಿಗೆ ಸಣ್ಣ ಮೊತ್ತವನ್ನು ಠೇವಣಿ ಮಾಡ್ಬೇಕು. ಮನೆ ಖರ್ಚನ್ನು ಕಡಿಮೆ ಮಾಡಿದ್ರೆ ನಿಮ್ಮ ಕೈನಲ್ಲಿ ಹಣವಿರುತ್ತದೆ ಎಂಬುದು ನೆನಪಿರಲಿ.