ಚೀನಾಗೆ ಶಾಕ್: ಸ್ಯಾಮ್‌ಸಂಗ್‌ ಡಿಸ್‌ಪ್ಲೇ ಉತ್ಪಾದನಾ ಘಟಕ ಯುಪಿಗೆ ಶಿಫ್ಟ್!

By Kannadaprabha NewsFirst Published Jun 22, 2021, 7:58 AM IST
Highlights

* ಜಗತ್ತಿನ ಪ್ರಮುಖ ಎಲೆಕ್ಟ್ರಾನಿಕ್‌ ಉತ್ಪಾದನಾ ಸಂಸ್ಥೆಗಳ ಪೈಕಿ ಒಂದಾದ ಸ್ಯಾಮ್‌ಸಂಗ್

* ಸ್ಯಾಮ್‌ಸಂಗ್‌ ಡಿಸ್‌ಪ್ಲೇ ಉತ್ಪಾದನಾ ಘಟಕ ಚೀನಾದಿಂದ ಯುಪಿಗೆ

* ನೋಯ್ಡಾದಲ್ಲಿ ಘಟಕದ ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೆ

ನೋಯ್ಡಾ(ಜೂ.22): ಜಗತ್ತಿನ ಪ್ರಮುಖ ಎಲೆಕ್ಟ್ರಾನಿಕ್‌ ಉತ್ಪಾದನಾ ಸಂಸ್ಥೆಗಳ ಪೈಕಿ ಒಂದಾದ ಸ್ಯಾಮ್‌ಸಂಗ್‌ ಚೀನಾದಲ್ಲಿದ್ದ ತನ್ನ ಡಿಸ್‌್ಪಪ್ಲೇ ತಯಾರಿಕಾ ಘಟಕವನ್ನು ಉತ್ತರ ಪ್ರದೇಶದ ನೋಯ್ಡಾಗೆ ಸ್ಥಳಾಂತರಿಸುವ ಕೆಲಸವನ್ನು ಪೂರ್ಣಗೊಳಿಸಿದೆ. ನೋಯ್ಡಾದಲ್ಲಿ ಘಟಕದ ಕಾಮಗಾರಿ ಈಗಾಗಲೇ ಮುಕ್ತಾಯವಾಗಿದೆ ಎಂದು ಕಂಪನಿ ಭಾನುವಾರ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರೊಂದಿಗೆ ಮಾತುಕತೆ ನಡೆಸಿದ ಸ್ಯಾಮ್‌ಸಂಗ್‌ ಸಿಇಒ ಕೆನ್‌ ಕಾಂಗ್‌ ನೇತೃತ್ವದ ನಿಯೋಗ,‘ಉತ್ತಮ ಕೈಗಾರಿಕಾ ವಾತಾವರಣ ಮತ್ತು ಹೂಡಿಕೆದಾರ ಸ್ನೇಹಿ ನೀತಿಗಳಿಂದಾಗಿ ಚೀನಾದ ಡಿಸ್‌ಪ್ಲೇ ಘಟಕವನ್ನು ನೋಯ್ಡಾಗೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದೆ.

ಮೇಕ್‌ ಇನ್‌ ಇಂಡಿಯಾ ಯೋಜನೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ ವಿವಿಧ ವಲಯಗಳ ಕಂಪನಿಗಳಿಗೆ ಉತ್ಪಾದನೆ ಆಧರಿತ ಪ್ರೋತ್ಸಾಹಧನ ನೀಡುವ ಯೋಜನೆ ಘೋಷಿಸಿತ್ತು. ಅದರನ್ವಯ ಸ್ಯಾಮ್‌ಸಂಗ್‌ ಕಂಪನಿ ಚೀನಾದಲ್ಲಿದ್ದ ತನ್ನ ಘಟಕವನ್ನು ಭಾರತಕ್ಕೆ ಸ್ಥಳಾಂತರ ಮಾಡುವ ಯೋಜನೆ ಪ್ರಕಟಿಸಿತ್ತು.

click me!