
ಬೆಂಗಳೂರು(ಜೂ.21): ಗಗನಮುಖಿಯಾಗಿರುವ ಪೆಟ್ರೋಲ್ ದರ ಭಾನುವಾರದಂದು ಕಲಬುರಗಿ ಮತ್ತು ಮೈಸೂರು ಜಿಲ್ಲೆಗಳಲ್ಲೂ ಶತಕದ ಗಡಿ ದಾಟಿದೆ.
ಇದರೊಂದಿಗೆ ಉಡುಪಿ ಮತ್ತು ಕೋಲಾರಗಳನ್ನು ಹೊರತುಪಡಿಸಿ ಉಳಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪೆಟ್ರೋಲ್ ದರ 100 ರುಪಾಯಿ ಗಡಿ ದಾಟಿದಂತಾಗಿದೆ.
ಕೇಂದ್ರ ಸರ್ಕಾರದಿಂದ ದೇಶ ಲೂಟಿ: ಶಿವರಾಜ್ ತಂಗಡಗಿ
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಭಾನುವಾರ ಪೆಟ್ರೋಲ್ ದರವನ್ನು ಲೀಟರ್‌ಗೆ 29 ಪೈಸೆ ಮತ್ತು ಡೀಸೆಲ್ ದರ 28 ಪೈಸೆಯಷ್ಟು ಏರಿಕೆ ಮಾಡಿತು. ಹೀಗಾಗಿ ಕಲಬುರಗಿಯಲ್ಲಿ 100.28 ಮತ್ತು ಮೈಸೂರಲ್ಲಿ 100.3 ರು.ಗೇರಿತು. ಕೋಲಾರದಲ್ಲಿ 99.88 ಮತ್ತು ಉಡುಪಿಯಲ್ಲಿ 99.96 ಪೆಟ್ರೋಲ್ ದರವಿದ್ದು, ಸೋಮವಾರ ಅಥವಾ ಮಂಗಳವಾರದೊಳಗೆ 100 ಆಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಜೂ.6ರಂದು ರಾಜ್ಯದಲ್ಲಿ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಬಳ್ಳಾರಿಯಲ್ಲಿ ಪೆಟ್ರೋಲ್ ದರ 100 ರು. ದಾಟಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.