ರಷ್ಯಾದಿಂದ ಭಾರತ ದಾಖಲೆಯ ಕಚ್ಚಾ ತೈಲ ಆಮದು

By Kannadaprabha News  |  First Published Jun 5, 2023, 7:08 AM IST

ಭಾರತ-ರಷ್ಯಾ ಸಂಬಂಧ ಯುದ್ಧದ ಸಮಯದಲ್ಲಿ ಗಟ್ಟಿಗೊಂಡಿದ್ದು, ಇದಕ್ಕೆ ಪೂರಕವೆಂಬಂತೆ ಭಾರತವು ಮೇ ತಿಂಗಳಿನಲ್ಲಿ ದಾಖಲೆಯ ಅಗ್ಗದ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ.


ನವದೆಹಲಿ: ಭಾರತ-ರಷ್ಯಾ ಸಂಬಂಧ ಯುದ್ಧದ ಸಮಯದಲ್ಲಿ ಗಟ್ಟಿಗೊಂಡಿದ್ದು, ಇದಕ್ಕೆ ಪೂರಕವೆಂಬಂತೆ ಭಾರತವು ಮೇ ತಿಂಗಳಿನಲ್ಲಿ ದಾಖಲೆಯ ಅಗ್ಗದ ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿದೆ. ಈ ಪ್ರಮಾಣವು ಇರಾಕ್‌ ಹಾಗೂ ಸೌದಿ ಅರೇಬಿಯಾ ದೇಶಗಳಿಂದ ಆಮದು ಮಾಡಿಕೊಂಡ ಪ್ರಮಾಣಕ್ಕಿಂತ ಅಧಿಕವಾಗಿದೆ. ಮೇ ತಿಂಗಳಿನಲ್ಲಿ ಭಾರತವು ರಷ್ಯಾದಿಂದ ದಿನಕ್ಕೆ 19.6 ಲಕ್ಷ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಂಡಿದೆ. ಇದು ಏಪ್ರಿಲ್‌ ಆಮದಿಗಿಂತ ಶೇ.15ರಷ್ಟು ಅಧಿಕ. ಈ ಪ್ರಮಾಣವು ಭಾರತದ ಒಟ್ಟು ಕಚ್ಚಾತೈಲ ಆಮದಿನ ಶೇ.42 ರಷ್ಟಾಗಿದೆ.

ರಷ್ಯಾ ತೈಲ ಭಾರಿ ಅಗ್ಗ:

Tap to resize

Latest Videos

ರಷ್ಯಾ-ಉಕ್ರೇನ್‌ ಯುದ್ಧಕ್ಕೂ (Ukraine Russia war) ಮುನ್ನ ಇರಾಕ್‌ನಿಂದ (Iraq) ಪ್ರತಿ ಬ್ಯಾರೆಲ್‌ಗೆ 6408.52 ರು., ಸೌದಿ ಅರೇಬಿಯಾದಿಂದ 7165.81 ರು. ಕೊಟ್ಟು ಭಾರತ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಭಾರತವು ರಷ್ಯಾದಿಂದ ಕಡಿಮೆ ಬೆಲೆ (5620.74 ರು.) ಕೊಟ್ಟು ಆಮದು ಮಾಡಿಕೊಳ್ಳುತ್ತಿದೆ. ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ಹೇರಿರುವ ನಿರ್ಬಂಧದ ಕಾರಣ ರಷ್ಯಾ ಅಗ್ಗದ ದರದಲ್ಲಿ ತೈಲ ಮಾರುತ್ತಿದೆ.

War For Oil: ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!

ಈ ಮೊದಲು ಭಾರತವು ಇರಾಕ್‌ನಿಂದ ದಿನಕ್ಕೆ 8.3 ಲಕ್ಷ ಬ್ಯಾರೆಲ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಇದರ ನಂತರದ ಸ್ಥಾನದಲ್ಲಿ ಸೌದಿ ಅರೇಬಿಯಾ, ಯುಎಇ ಹಾಗೂ ಅಮೆರಿಕ ದೇಶಗಳಿದ್ದವು. ಆದರೆ ಈಗ ರಷ್ಯಾ ಈ ಎಲ್ಲ ದೇಶಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.

ರಷ್ಯಾ-ಉಕ್ರೇನ್‌ ಯುದ್ಧ ನಿಲ್ಲಿಸಲು ಸರ್ವಪ್ರಯತ್ನ: ಮೋದಿ

click me!