ಕೇಂದ್ರ ಬಜೆಟ್: ನರೇಗಾ ಸೇರಿ ಗ್ರಾಮೀಣಾಭಿವೃದ್ಧಿ ಅನುದಾನಕ್ಕೆ ಕತ್ತರಿ

Kannadaprabha News   | Asianet News
Published : Feb 02, 2020, 07:57 AM IST
ಕೇಂದ್ರ ಬಜೆಟ್: ನರೇಗಾ ಸೇರಿ ಗ್ರಾಮೀಣಾಭಿವೃದ್ಧಿ ಅನುದಾನಕ್ಕೆ ಕತ್ತರಿ

ಸಾರಾಂಶ

ನರೇಗಾ ಸೇರಿ ಗ್ರಾಮೀಣಾಭಿವೃದ್ಧಿ ಅನುದಾನ ಕಡಿತ| 2019-20ನೇ ಸಾಲಿನಲ್ಲಿ ನೀಡಿದ್ದು 1.22 ಲಕ್ಷ ಕೋಟಿ ರು.|2020-21ನೇ ಸಾಲಿಗಾಗಿ ನೀಡಿದ್ದು 1.20 ಲಕ್ಷ ಕೋಟಿ ರು.| ನರೇಗಾ ಯೋಜನೆ ಅನುದಾನಕ್ಕೆ ಶೇ.13ರಷ್ಟು ಕತ್ತರಿ|  

ನವದೆಹಲಿ(ಫೆ.02): ನರೇಗಾ ಯೋಜನೆ ಸೇರಿದಂತೆ ಗ್ರಾಮೀಣ ಭಾರತದ ಅಭಿವೃದ್ಧಿ ಯೋಜನೆಗಳಿಗೆ ನೀಡಲಾಗುತ್ತಿದ್ದ ಅನುದಾನಗಳನ್ನು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಲಾಗಿದೆ.

ಕಳೆದ ಬಜೆಟ್‌ಗೆ ಹೋಲಿಸಿದರೆ ನರೇಗಾ ಯೋಜನೆ ಅನುದಾನ ಶೇ.13ರಷ್ಟು ಕಡಿತಗೊಂಡಿದೆ. 2019-20ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಅಡಿಯಲ್ಲಿರುವ ಯೋಜನೆಗಳಿಗಾಗಿ 1.22 ಲಕ್ಷ ಕೋಟಿ ರು. ನೀಡಲಾಗಿತ್ತು. ಆದರೆ ಈ ಬಾರಿ ಈ ಮೊತ್ತ 1.20 ಲಕ್ಷ ಕೋಟಿ ರು.ಗೆ ಇಳಿದಿದೆ. ಪರಿಣಾಮ ನರೇಗಾ ಯೋಜನೆಗೆ ನೀಡಲಾಗುವ ಅನುದಾನ ಹೆಚ್ಚು ಕಡಿಮೆ 9,500 ಕೋಟಿ ರು.ನಷ್ಟು ಇಳಿಕೆಯಾಗಿದ್ದು, ಈ ಬಾರಿ 61,500 ಕೋಟಿ ನೀಡಲಾಗಿದೆ. ಹಿಂದಿನ ವಿತ್ತೀಯ ವರ್ಷದ ಬಜೆಟ್‌ನಲ್ಲಿ 71,001.81 ಕೋಟಿ ರು. ನೀಡಲಾಗಿತ್ತು.

ಕೇಂದ್ರ ಬಜೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಮೂಲಗಳ ಪ್ರಕಾರ, 2020-21ನೇ ಸಾಲಿನ ಅಂದಾಜು ಆಯವ್ಯಯದ ಪ್ರಕಾರ ಹೆಚ್ಚಿನ ಅನುದಾನವನ್ನು ಗ್ರಾಮೀಣಾಭಿವೃದ್ಧಿಗೆ ನೀಡಬೇಕಿತ್ತು. ಕಡೇ ಪಕ್ಷ ಸರಿದೂಗಿಸಿಕೊಂಡು ಹೋಗಬಹುದಾದ ಅನುದಾನ ನೀಡಬೇಕಿತ್ತು. ಹಿರಿಯ ಅಧಿಕಾರಿಯೊಬ್ಬರು ಹೇಳುವಂತೆ, 2008-14ರ ಅವಧಿಯಲ್ಲಿ ಅಂದಿನ ಯುಪಿಎ ಸರ್ಕಾರ 1.91 ಲಕ್ಷ ಕೋಟಿ ನೀಡಿತ್ತು. ಬಳಿಕ 2014ರಲ್ಲಿ ಇದು 2.95 ಲಕ್ಷ ರು.ಗೆ ಏರಿಕೆಯಾಯಿತು. ಆದರೆ ಈಗ ಮತ್ತೆ ಕಡಿತಗೊಳಿಸಲಾಗಿದೆ.
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!