ಗ್ರಾಮೀಣ ಉದ್ಯಮ; ನಿಮ್ಮೂರಲ್ಲಿ 200 ಶಾಲಾ ಮಕ್ಕಳಿದ್ದರೆ ₹15 ಲಕ್ಷ ಗಳಿಸೋದು ಭಾರೀ ಸುಲಭ!

Published : Jun 11, 2025, 01:05 PM IST
Business Idea

ಸಾರಾಂಶ

ಕೇವಲ 200 ಶಾಲಾ ಮಕ್ಕಳಿರುವ ಊರಿನಲ್ಲಿ ಈ ಉದ್ಯಮ ಆರಂಭಿಸಿ ತಿಂಗಳಿಗೆ 1.25 ಲಕ್ಷ ಮತ್ತು ವರ್ಷಕ್ಕೆ 15 ಲಕ್ಷ ರೂಪಾಯಿ ಗಳಿಸಬಹುದು. ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬಂಡವಾಳದಲ್ಲಿ ಈ ವ್ಯಾಪಾರ ಆರಂಭಿಸಬಹುದು.

ನಿಮ್ಮ ಊರಲ್ಲಿ 200 ಶಾಲಾ ಮಕ್ಕಳಿದ್ದರೆ ಸಾಕು, ನೀವು ತಿಂಗಳಿಗೆ ಕನಿಷ್ಠ 1.25 ಲಕ್ಷ ಮತ್ತು ವರ್ಷಕ್ಕೆ 15 ಲಕ್ಷ ರೂಪಾಯಿ ಗಳಿಸಬಹುದು. ಅದೂ ಕೂಡ ಒಂದೇ ಒಂದು ವಸ್ತುವಿನಿಂದ. ಇದಕ್ಕೆ ಹೆಚ್ಚು ಹಣ ಹೂಡಿಕೆ ಮಾಡಬೇಕಾಗಿಲ್ಲ ಮತ್ತು ಲಾಭ ಮಾತ್ರ ಚೆನ್ನಾಗಿದೆ. ಒಂದು ಲಕ್ಷ ರೂಪಾಯಿಗಿಂತ ಕಡಿಮೆ ಬಂಡವಾಳದಲ್ಲಿ ಈ ಕೆಲಸ ಶುರು ಮಾಡಬಹುದು. ಸ್ವಲ್ಪ ಬುದ್ದಿವಂತಿಕೆ ತೋರಿಸಿದರೆ ಚೆನ್ನಾಗಿ ದುಡ್ಡು ಮಾಡಬಹುದು. ಬನ್ನಿ ಈ ಬಿಸಿನೆಸ್ ಐಡಿಯಾ ಬಗ್ಗೆ ತಿಳ್ಕೊಳ್ಳೋಣ…

ಏನಿದು ಐಡಿಯಾ?

ಊರಲ್ಲಿ ಶಾಲೆಗೆ ಹೋಗುವಂತಹ ಮಕ್ಕಳಿಗೆ ಬರೆಯುವ ಪುಸ್ತಕ, ಪೆನ್, ಪೆನ್ಸಿಲ್, ರಬ್ಬರ್, ಕಲರ್ ಪೆನ್ಸಿಲ್ ಮತ್ತು ಸ್ಕೆಚ್ಚಸ್, ಸ್ಕೂಲ್ ಬ್ಯಾಗ್, ಜಾಮಿಟ್ರಿ ಬಾಕ್ಸ್, ಚಾರ್ಟ್ ಪೇಪರ್ ಇತ್ಯಾದಿಗಳು ಪ್ರತಿ ತಿಂಗಳು ಬೇಕಾಗುತ್ತವೆ. ಆದರೆ ಇವುಗಳನ್ನು ನಗರದಿಂದ ತರಬೇಕಾಗುತ್ತದೆ. ಇನ್ನು ಕಿರಾಣಿ ಅಂಗಡಿಯವರು ಇಂತಹ ವಸ್ತುಗಳನ್ನು ಅತ್ಯಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಹಾಗಾಗಿ ನೀವು ಶಾಲೆಯ ಹತ್ತಿರ ಅಥವಾ ಊರಿನ ಮಧ್ಯದಲ್ಲಿ ಸಣ್ಣ ಸ್ಕೂಲ್ ಸ್ಟೇಷನರಿ (ಬುಕ್ ಸ್ಟಾಲ್) ಅಂಗಡಿ ತೆರೆದು ದಿನನಿತ್ಯ ದುಡ್ಡು ಮಾಡಬಹುದು.

ಹೇಗೆ ದುಡ್ಡು ಮಾಡೋದು? (ಊರಲ್ಲಿ 200 ಶಾಲಾ ಮಕ್ಕಳಿದ್ದಾರೆ ಅಂತ ಭಾವಿಸಿ)

ಕ್ರಮ ಸಂಖ್ಯೆ

ಸಾಮಾನು

ಸರಾಸರಿ ಖರ್ಚು/ಮಗು/ತಿಂಗಳು

ಒಟ್ಟು

1ಕಾಪಿ-ಪೆನ್-ಪೆನ್ಸಿಲ್ ಇತ್ಯಾದಿ100 ರೂಪಾಯಿ20,000 ರೂಪಾಯಿ
2ಚಾರ್ಟ್-ಪೇಪರ್, ಪ್ರಾಜೆಕ್ಟ್ ಸಾಮಾನು50 ರೂಪಾಯಿ10,000 ರೂಪಾಯಿ
3ಸ್ಕೂಲ್ ಬ್ಯಾಗ್, ಬಾಟಲ್, ಡಬ್ಬ (ವರ್ಷಕ್ಕೆ 2 ಬಾರಿ)500 ರೂಪಾಯಿ ಪ್ರತಿ ವಿದ್ಯಾರ್ಥಿ1,00,000 ರೂಪಾಯಿ ವಾರ್ಷಿಕ
4ಪುಸ್ತಕಗಳು, ಗೈಡ್, ಸಪ್ಲಿಮೆಂಟ್300 ರೂಪಾಯಿ ಪ್ರತಿ ವಿದ್ಯಾರ್ಥಿ60,000 ರೂಪಾಯಿ ವಾರ್ಷಿಕ

ಎಷ್ಟು ಹಣ ಹೂಡಿಕೆ ಮಾಡಬೇಕು?

  • ಆರಂಭಿಕ ಸಾಮಾನು ಖರೀದಿಗೆ- 50,000 ರಿಂದ 70,000 ರೂಪಾಯಿ
  • ಅಂಗಡಿ ಬಾಡಿಗೆ ಅಥವಾ ಸೆಟಪ್ (ಸ್ವಂತ ಜಾಗ ಇಲ್ಲದಿದ್ದರೆ)- 2,000 ರಿಂದ 3,000 ರೂಪಾಯಿ ತಿಂಗಳು
  • ಬಿಲ್ಲಿಂಗ್, ಬ್ಯಾನರ್, ಕೌಂಟರ್ ಇತ್ಯಾದಿಗಳಿಗೆ- 10,000 ರೂಪಾಯಿ
  • ಒಟ್ಟಾರೆ ₹1 ಲಕ್ಷಕ್ಕಿಂತ ಕಡಿಮೆ ಬಂಡವಾಳದಲ್ಲಿ ಶುರು ಮಾಡಬಹುದು.

ಈ ವಿಷಯಗಳನ್ನು ಗಮನದಲ್ಲಿಡಿ

  1. ಶಾಲಾ ಸಮಯದಲ್ಲಿ ಅಂಗಡಿ ತೆರೆಯಿರಿ, ಬೆಳಿಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 6 ರವರೆಗೆ.
  2. ಮಕ್ಕಳಿಗೆ ಚಾಕಲೇಟ್, ಕ್ರಯಾನ್ಸ್, ಆಕ್ಟಿವಿಟಿ ಪುಸ್ತಕಗಳನ್ನು ಇಟ್ಟುಕೊಳ್ಳಿ.
  3. ಪ್ರತಿ ತಿಂಗಳು ರಿಯಾಯಿತಿ ಕೊಡಿ, ಉದಾ: 500 ರೂಪಾಯಿ ಖರೀದಿಗೆ ಪೆನ್ಸಿಲ್ ಉಚಿತ.
  4. ಹತ್ತಿರದ ಶಾಲೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಿ, ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್‌ಗಳು ಬರುತ್ತವೆ.
  5. ನೀವು ಬಯಸಿದರೆ ಶಾಲಾ ಸಮವಸ್ತ್ರಗಳನ್ನು ಪೂರೈಸಬಹುದು.
  6. ಪುಸ್ತಕ ಕವರ್ ಮಾಡುವ ಸೇವೆ, ಪ್ರಾಜೆಕ್ಟ್‌ಗಳಿಗೆ ಫೋಟೊಕಾಪಿ, ಇ-ಮಿತ್ರ ಅಥವಾ ಆನ್‌ಲೈನ್ ಫಾರ್ಮ್ ಭರ್ತಿ ಮಾಡುವ ಸೇವೆಗಳನ್ನು ಸೇರಿಸಬಹುದು.

ಎಷ್ಟು ಲಾಭ ಬರುತ್ತದೆ?

ಈ ಲೆಕ್ಕಾಚಾರದ ಪ್ರಕಾರ, ಸ್ಟೇಷನರಿಯಿಂದ ತಿಂಗಳಿಗೆ 25,000 ರೂಪಾಯಿಯಿಂದ 30,000 ರೂಪಾಯಿವರೆಗೆ ಮಾರಾಟವಾಗುತ್ತದೆ. ಇದರ ಲಾಭದ ಪ್ರಮಾಣ 30-40% ಇರುತ್ತದೆ. ಇದಲ್ಲದೆ ಚಾಕಲೇಟ್, ಕ್ರಯಾನ್ಸ್, ಸ್ಕೂಲ್ ಡ್ರೆಸ್, ಪುಸ್ತಕ ಕವರ್ ಮಾಡುವ ಸೇವೆ, ಫೋಟೊಕಾಪಿ ಮತ್ತು ಆನ್‌ಲೈನ್ ಫಾರ್ಮ್ ಭರ್ತಿ ಮಾಡುವ ಸೇವೆಗಳನ್ನು ಸೇರಿಸಿ ತಿಂಗಳಿಗೆ 1.25 ಲಕ್ಷ ಮತ್ತು ವರ್ಷಕ್ಕೆ 12-15 ಲಕ್ಷ ರೂಪಾಯಿ ಸುಲಭವಾಗಿ ಗಳಿಸಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಜಿಎಸ್‌ಟಿ ದರ ಬದಲಾವಣೆ ಬಳಿಕ ವಾಣಿಜ್ಯ ತೆರಿಗೆ ಸಂಗ್ರಹ ಕುಸಿತ
ರೆಪೋ ದರ ಕಡಿತ : ಸಾಲಗಾರರಿಗೆ ಅನುಕೂಲ, ಹೂಡಿಕೆದಾರರಿಗೆ ಬೇಸರ