Sensex Rises:ಜಿಗಿದ ಷೇರುಪೇಟೆ, ಡಾಲರ್ ಎದುರು ಮತ್ತೆ ಕುಸಿದ ರೂಪಾಯಿ ಮೌಲ್ಯ

By Suvarna NewsFirst Published May 17, 2022, 6:12 PM IST
Highlights

*ಅಮೆರಿಕದ ಡಾಲರ್ ಎದುರು 14 ಪೈಸೆಗಳಷ್ಟು ಕುಸಿದು 77.69 ರೂ.ತಲುಪಿದ ರೂಪಾಯಿ
* 1,344  ಪಾಯಿಂಟ್ ಗಳ ಏರಿಕೆ ಕಂಡ ಸೆನ್ಸೆಕ್ಸ್
*417 ಪಾಯಿಂಟ್ಸ್ ಏರಿಕೆ ದಾಖಲಿಸಿದ ನಿಫ್ಟಿ

Business Desk:ಕಳೆದ ವಾರ ಸತತ ಕುಸಿತದಿಂದ ಕಂಗೆಟ್ಟಿದ್ದ ಷೇರು ಮಾರುಕಟ್ಟೆ ಸೋಮವಾರ ಚೇತರಿಕೆ ಹಾದಿಗೆ ಮರಳುವ ಸೂಚನೆ ನೀಡಿತ್ತು. ಮಂಗಳವಾರ  (ಮೇ 17) ಏರಿಕೆ ದಾಖಲಿಸುವ ಮೂಲಕ ಹೂಡಿಕೆದಾರರಿಗೆ ಕೊಂಚ ನೆಮ್ಮದಿ ನೀಡಿದೆ.  ಇನ್ನೊಂದೆಡೆ ಭಾರತೀಯ ರೂಪಾಯಿ (Indian Rupee) ಮೌಲ್ಯ  ಅಮೆರಿಕದ ಡಾಲರ್ (US Dollar) ಎದುರು ಮತ್ತೊಮ್ಮೆ ಸಾರ್ವಕಾಲಿಕ ಕುಸಿತ ಕಂಡಿದೆ. 

ಮಂಗಳವಾರ  (ಮೇ 17) ಬೆಳಗ್ಗಿನ ವಹಿವಾಟಿನ ಸಮಯದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ  ಮೌಲ್ಯವು 14 ಪೈಸೆಗಳಷ್ಟು ಕುಸಿದು 77.69 ರೂ. ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿದೆ. ಆದ್ರೆ ನಂತರದ ಅವಧಿಯಲ್ಲಿ ರೂಪಾಯಿ ಮೌಲ್ಯ ಚೇತರಿಕೆ ಕಂಡು ಡಾಲರ್ ಎದುರು 77.56ಕ್ಕೆ ಬಂದು ನಿಂತಿದೆ. 
ಕಳೆದ ವಾರ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು ಎರಡು ಬಾರಿ ಕುಸಿತ ಕಂಡಿತ್ತು. ಮೇ 9ರಂದು ಮೇ 12ರಂದು ಡಾಲರ್ ಎದುರು ರೂಪಾಯಿ ಮೌಲ್ಯ 51 ಪೈಸೆ ಇಳಿಕೆ ಕಂಡು 77.41ರೂ. ತಲುಪಿತ್ತು. ಆ ಬಳಿಕ ಮೇ12ರಂದು ರೂಪಾಯಿ ಮೌಲ್ಯ ಅಮೆರಿಕದ ಡಾಲರ್  (US Dollar) ಎದುರು 77.63ರ ಕನಿಷ್ಠ ಮಟ್ಟಕ್ಕೆ ತಲುಪಿತ್ತು.ರೂಪಾಯಿ ಮೌಲ್ಯ ಇಳಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಬಲವರ್ಧನೆಗೊಳ್ಳುತ್ತಿರುವುದೇ ಕಾರಣ ಎಂದು ತಜ್ಞರು ಹೇಳಿದ್ದಾರೆ. ಇನ್ನು ಭಾರತೀಯ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. 

ಮತ್ತೆ ಮರಳಿ ಬಂದಿದೆ ಹಣದುಬ್ಬರದ ದಿನಗಳು, WPI 1998 ಬಳಿಕ ಮೊದಲ ಬಾರಿ ಶೇ. 15ಕ್ಕಿಂತ ಹೆಚ್ಚು!

ಜಿಗಿದ ಷೇರುಪೇಟೆ
ಈ ಎಲ್ಲ ಬೆಳವಣಿಗೆಗಳ ನಡುವೆ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕಗಳು ಸತತ ಎರಡನೇ ದಿನವೂ ಏರಿಕೆ ದಾಖಲಿಸಿವೆ. ಮುಂಬೈ ಷೇರುಪೇಟೆ (BSE) ಸಂವೇದಿ ಸೂಚ್ಯಂಕ (Sensex) 1,344  ಪಾಯಿಂಟ್ ಗಳ ಏರಿಕೆ ಕಂಡು 54,318  ಮಟ್ಟ ತಲುಪುವ ಮೂಲಕ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟದ ಏರಿಕೆ ದಾಖಲಿಸಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ  (NSE) ಸಂವೇದಿ ಸೂಚ್ಯಂಕ (Nifty) 417 ಪಾಯಿಂಟ್ಸ್ ಏರಿಕೆ ದಾಖಲಿಸುವ ಮೂಲಕ 16,259 ಮಟ್ಟ ತಲುಪಿತ್ತು.

ಕಳೆದ ವಾರ ಸತತ ಕುಸಿತ ದಾಖಲಿಸಿದ್ದ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ ಏರಿಳಿತದ ದಾಖಲಿಸಿದ್ದವು. ಮಂಗಳವಾರ ಸೆನ್ಸೆಕ್ಸ್ ಹಾಗೂ ನಿಫ್ಟಿ ಮರಳಿ ಹಳಿಗೆ ಬಂದಿದ್ದು, ಜಿಗಿತ ದಾಖಲಿಸಿವೆ. ಸೆನ್ಸೆಕ್ಸ್ 180.22 ಪಾಯಿಂಟ್ಸ್ ಅಥವಾ ಶೇ.0.34 ಏರಿಕೆ ಕಂಡಿದೆ.  ಈ ಮೂಲಕ ಸತತ ಆರು ದಿನಗಳ ಕುಸಿತಕ್ಕೆ ಬ್ರೇಕ್ ನೀಡಿ ಮತ್ತೆ ಗಳಿಕೆಯ ಹಾದಿಗೆ ಮರಳಿದೆ. ಇನ್ನು ನಿಫ್ಟಿ 60.15 ಪಾಯಿಂಟ್ಸ್ ಅಥವಾ ಶೇ.0.38 ಗಳಿಕೆ ದಾಖಲಿಸಿದೆ. ಕಳೆದ ಆರು ದಿನಗಳಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ.5ಕ್ಕಿಂತಲೂ ಹೆಚ್ಚಿನ ನಷ್ಟ ಅನುಭವಿಸಿದ್ದವು. 

LIC Shares Listing: ಮಾರುಕಟ್ಟೆಯಲ್ಲಿ ಶೇ.8.62ರಷ್ಟು ಕಡಿಮೆ ಬೆಲೆಗೆ ಎಲ್ಐಸಿ ಷೇರು ಲಿಸ್ಟಿಂಗ್; ಹೂಡಿಕೆದಾರರಿಗೆ ಆಘಾತ

ರಿಲಾಯನ್ಸ್ , ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್ ಸಿಎಲ್ ಟೆಕ್, ಮಾರುತಿ, ಬಜಾಜ್ ಫೈನಾನ್ಸ್, ಎಚ್ ಡಿಎಫ್ ಸಿ ಲಿ. ಮುಂತಾದ ಷೇರುಗಳು ಲಾಭ ಗಳಿಸಿವೆ. ಇನ್ನು ಟಿಸಿಎಸ್, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಏಷ್ಯನ್ ಪೆಂಟ್ಸ್ ಹಾಗೂ ಇನ್ಫೋಸಿಸ್ ಷೇರುಗಳು ಹಿನ್ನಡೆ ಕಂಡಿವೆ. 

click me!