
ಮುಂಬೈ(ಸೆ.12): ಜಾಗತಿಕ ಮಟ್ಟದಲ್ಲಿ ಡಾಲರ್ ಮೌಲ್ಯ ಏರಿಕೆ ಮುಂದುವರೆದಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ 73 ರ ಸನಿಹಕ್ಕೆ ಬಂದು ತಲುಪಿದೆ.
ಇಂದು ವಹಿವಾಟು ಪ್ರಾರಂಭವಾಗುತ್ತಿದ್ದಂತೇ ಡಾಲರ್ ಎದುರು ರೂಪಾಯಿ ಮೌಲ್ಯ 72.91 ರಷ್ಟಕ್ಕೆ ಕುಸಿಯಿತು. ಇದು ಈ ವರೆಗಿನ ಸಾರ್ವಕಾಲಿಕ ದಾಖಲೆಯಾಗಿದೆ.
ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 78 ಡಾಲರ್ ಗೆ ತಲುಪಿರುವ ಹಿನ್ನೆಲೆಯಲ್ಲಿ ಡಾಲರ್ ತನ್ನ ಪ್ರಾಬಲ್ಯ ಕಾಯ್ದುಕೊಂಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ವರ್ಷದ ಆರಂಭದಿಂದ ಇದುವರೆಗೆ ರೂಪಾಯಿ ಮೌಲ್ಯ ಶೇ.12 ರಷ್ಟು ಕುಸಿತಗೊಂಡಿದ್ದು, ಏಷ್ಯಾದಲ್ಲೇ ಡಾಲರ್ ಎದುರು ಅತಿ ಹೆಚ್ಚು ಮೌಲ್ಯ ಕಳೆದುಕೊಂಡ ಕರೆನ್ಸಿ ಎಂಬ ಕುಖ್ಯಾತಿಗೆ ಪಾತ್ರವಾಗಿದೆ.
ಅದೇ ಕತೆ, ನಮಗಷ್ಟೇ ವ್ಯಥೆ: ಮತ್ತೆ ಕುಸಿದ ರೂಪಾಯಿ ಮೌಲ್ಯ!
ಪ್ಲೀಸ್.. ಗಾಂಧಿ ನೋಟನ್ನು ಕಾಪಾಡಿ ಮೋದಿ!
ಹೆದ್ರಬ್ಯಾಡ್ರಿ ನಾ ಇದ್ದೇನೆ: ಎಲ್ಲರ 'ಆ' ಆತಂಕಕ್ಕೆ ಜೇಟ್ಲಿ 'ಈ' ಉತ್ತರ!
ರೊಕ್ಕಾ ಅಲ್ಲ ಡಾಲರ್ ಪ್ರಾಬ್ಲಂ: ಧಮೇಂದ್ರ ಹೊಸ ಲೆಕ್ಕ!
ಸೆನ್ಸೆಕ್ಸ್'ನ್ನೂ ಪಾತಾಳಕ್ಕೆ ಎಳೆದೊಯ್ದ ರೂಪಾಯಿ ಮೌಲ್ಯ ಕುಸಿತ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.