ಆನ್ಲೈನ್ ಗೇಮಿಂಗ್, ಯುಪಿಐ ಸೇರಿದಂತೆ ಅ.1 ರಿಂದ ಬದಲಾಗಲಿದೆ ಈ ಎಲ್ಲ ನಿಯಮ, ಖಾಲಿ ಆಗುತ್ತಾ ನಿಮ್ಮ ಜೇಬು?

Published : Sep 28, 2025, 12:14 PM IST
October Rule change

ಸಾರಾಂಶ

Rule change : ಪ್ರತಿ ತಿಂಗಳ ಆರಂಭದಲ್ಲಿ ಸಾಕಷ್ಟು ನಿಯಮಗಳು ಬದಲಾಗುತ್ತವೆ. ಅಕ್ಟೋಬರ್ ತಿಂಗಳಿನಲ್ಲೂ ಕೆಲ ನಿಯಮ ಬದಲಾಗ್ತಿದೆ. ಇದು ಜನಸಾಮಾನ್ಯರ ಮೇಲೆ ನೇರವಾಗಿ ಪರಿಣಾಮ ಬೀರಲಿದೆ. 

ಸೆಪ್ಟೆಂಬರ್ (September) ತಿಂಗಳು ಮುಗೀತಾ ಬಂತು. ತಿಂಗಳು ಮುಗಿಯಲು ಇನ್ನೇನು ಎರಡೇ ದಿನ ಬಾಕಿ ಇದೆ. ಹೊಸ ತಿಂಗಳು ಶುರು ಆಗ್ತಿದ್ದಂತೆ ಅನೇಕ ನಿಯಮಗಳಲ್ಲಿ ಬದಲಾವಣೆ ಆಗುತ್ತೆ. ಅಕ್ಟೋಬರ್ ತಿಂಗಳಿನಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂಬ ಡಿಟೇಲ್ಸ್ ಇಲ್ಲಿದೆ.

ಅಕ್ಟೋಬರ್ (October) 1 ರಿಂದ ಬದಲಾಗಲಿದೆ ಈ ಎಲ್ಲ ನಿಯಮ :

• ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ (NPS) ಬದಲಾವಣೆ : ಅಕ್ಟೋಬರ್ ಒಂದರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಆಗಲಿದೆ. ಸರ್ಕಾರೇತರ ವಲಯದ ಸಬ್ಸ್ಕ್ರೈಬರ್, ಮಲ್ಟಿಪಲ್ ಸ್ಕೀಮ್ ಫ್ರೇಮ್ ವರ್ಕ್ (MSF) ಅಡಿಯಲ್ಲಿ ಷೇರುಗಳಲ್ಲಿ ಶೇಕಡಾ 100 ರವರೆಗೆ ಹೂಡಿಕೆ ಮಾಡಲು ಒಪ್ಪಿಗೆ ಸಿಗಲಿದೆ. ಅಂದ್ರೆ ಮುಂದಿನ ತಿಂಗಳು ಸರ್ಕಾರೇತರ NPS ಸಬ್ಸ್ಕ್ರೈಬರ್ ಪಿಂಚಣಿ ಮೊತ್ತವನ್ನು ಷೇರು ಮಾರುಕಟ್ಟೆ-ಸಂಬಂಧಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಲಿದೆ. ಹಿಂದೆ, ಈಕ್ವಿಟಿ ಹೂಡಿಕೆ ಮಿತಿ ಶೇಕಡಾ 75 ರಷ್ಟಾಗಿತ್ತು.

• ಸರ್ಕಾರಿ ವಲಯದಂತೆ, ಖಾಸಗಿ ವಲಯದ ಉದ್ಯೋಗಿಗಳಿಗೆ PRAN (ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ) ತೆರೆಯಲು e-PRAN ಕಿಟ್ಗೆ 18 ರೂಪಾಯಿ ಮತ್ತು ಭೌತಿಕ PRAN ಕಾರ್ಡ್ಗೆ 40 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕ ನಿರ್ವಹಣಾ ಶುಲ್ಕ ಪ್ರತಿ ಖಾತೆಗೆ 100 ಆಗಿರಲಿದೆ. ಅಟಲ್ ಪಿಂಚಣಿ ಯೋಜನೆ (APY) ಮತ್ತು NPS ಲೈಟ್ ಚಂದಾದಾರರಿಗೆ, PRAN ಆರಂಭಿಕ ಶುಲ್ಕ ಮತ್ತು ನಿರ್ವಹಣಾ ಶುಲ್ಕ 15 ಶುಲ್ಕವಿರಲಿದೆ.

ಏರ್‌ ಇಂಡಿಯಾದಿಂದ ಭರ್ಜರಿ ಆಫರ್: ₹1,200ಕ್ಕೆ ವಿಮಾನ ಟಿಕೆಟ್‌, 50% ಡಿಸ್ಕೌಂಟ್; ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್‌!

• ರೈಲ್ವೆ ಇಲಾಖೆ ಕೂಡ ಮಹತ್ವದ ಬದಲಾವಣೆ ಮಾಡ್ತಿದೆ. ಟಿಕೆಟ್ ಬುಕ್ಕಿಂಗ್ ಓಪನ್ ಆಗುವ 15 ನಿಮಿಷದ ಮೊದಲು ಆಧಾರ್ ವೆರಿಫೈ ಆದ ಪ್ರಯಾಣಿಕರು ಮಾತ್ರ ಟಿಕೆಟ್ ಬುಕ್ ಮಾಡಲು ಸಾಧ್ಯ. ಆದ್ರೆ ಕಂಪ್ಯೂಟರ್ ಮೂಲಕ PRS ಕೌಂಟರ್ಗಳಿಂದ ಟಿಕೆಟ್ಗಳನ್ನು ಖರೀದಿಸುವವರಿಗೆ ಸಮಯ ಅಥವಾ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದೇ ವೇಳೆ ರೈಲ್ವೆ ಇಲಾಖೆ ಅಧಿಕೃತ ಎಜೆಂಟರ್ಸ್ ಕೂಡ ಟಿಕೆಟ್ ಬುಕ್ಕಿಂಗ್ ಶುರುವಾಗುವ 10 ನಿಮಿಷದವರೆಗೆ ಟಿಕೆಟ್ ಬುಕ್ಕಿಂಗ್ ಮಾಡಲು ಸಾಧ್ಯವಿಲ್ಲ.

• ಅಕ್ಟೋಬರ್ 1ರಿಂದ ಆನ್ಲೈನ್ ಗೇಮಿಂಗ್ ನಲ್ಲಿ ಬದಲಾವಣೆ ಆಗಲಿದೆ. ಆನ್ಲೈನ್ ಗೇಮಿಂಗ್ ಗೆ ಸಂಬಂಧಿಸಿದಂತೆ ಸರ್ಕಾರ ಆನ್ಲೈನ್ ಗೇಮಿಂಗ್ ಮಸೂದೆ 2025 ಅನ್ನು ಅನುಮೋದಿಸಿದೆ. ಇದು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಹಣದ ವ್ಯಸನ ಮತ್ತು ಆರ್ಥಿಕ ನಷ್ಟ ತಡೆಯಲು ಇದನ್ನು ಜಾರಿಗೆ ತರಲಾಗ್ತಿದೆ. ಸರ್ಕಾರದ ನಿಯಮ ಉಲ್ಲಂಘಿಸಿದ್ರೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 1 ಕೋಟಿ ದಂಡ ವಿಧಿಸಲಾಗುವುದು.

ನಿಮಗೆ ಅರಿವಿಲ್ಲದೇ Pan Cardಗೆ ಕನ್ನ! ಲಕ್ಷ ಲಕ್ಷ ಸಾಲ ಮಾಡ್ತಿದ್ದಾರೆ ಖದೀಮರು- ಹೀಗೆ ಮಾಡಿ ಸೇಫ್​ ಆಗಿ

• ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ನಲ್ಲೂ ಪ್ರಮುಖ ಬದಲಾವಣೆ ಆಗಲಿದೆ, ಎನ್ಪಿಸಿಐ ಜಾರಿಗೆ ತರುತ್ತಿರುವ ಈ ಹೊಸ ಬದಲಾವಣೆ ಫೋನ್ಪೇ, ಗೂಗಲ್ ಪೇ ಮತ್ತು ಪೇಟಿಎಂ ಬಳಕೆದಾರರ ಮೇಲೆ ಪರಿಣಾಮ ಬೀರಲಿದೆ. ಎನ್ಪಿಸಿಐ ಪೀರ್-ಟು-ಪೀರ್ (ಪಿ2ಪಿ) ವಹಿವಾಟು ತೆಗೆದುಹಾಕಲು ಮುಂದಾಗಿದೆ. ಬಳಕೆದಾರರ ಸೇಫ್ಟಿ ಹೆಚ್ಚಿಸಲು ಮತ್ತು ಆರ್ಥಿಕ ವಂಚನೆ ತಪ್ಪಿಸಲು ಜುಲೈ 29 ರ ಸುತ್ತೋಲೆಯ ಪ್ರಕಾರ, ಅಕ್ಟೋಬರ್ 1, 2025 ರಿಂದ ಈ ಫೀಚರ್ ತೆಗೆದುಹಾಕಲಿದೆ.

• ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡ ಅಡುಗೆ ಅನಿಲ ಬೆಲೆಯಲ್ಲಿ ಬದಲಾವಣೆ ಆಗಲಿದೆ. ಪ್ರತಿ ತಿಂಗಳ ಮೊದಲ ದಿನ ಅನಿಲ ಬೆಲೆ ಏರಿಕೆ ಅಥವಾ ಇಳಿಕೆ ನಿರ್ಧಾರ ಘೋಷಣೆಯಾಗಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?