ಇಂದಿನಿಂದ RTGS‌ ವ್ಯವಸ್ಥೆಯಲ್ಲಿ ದಿನದ 24 ಗಂಟೆಯೂ ಹಣ ಪಾವತಿ!

Published : Dec 14, 2020, 08:18 AM ISTUpdated : Dec 14, 2020, 10:54 AM IST
ಇಂದಿನಿಂದ RTGS‌ ವ್ಯವಸ್ಥೆಯಲ್ಲಿ ದಿನದ 24 ಗಂಟೆಯೂ ಹಣ ಪಾವತಿ!

ಸಾರಾಂಶ

ಹೆಚ್ಚು ಮೌಲ್ಯದ ಹಣ ವರ್ಗಾವಣೆಗೆ ಇರುವ ಆನ್‌ಲೈನ್‌ ವ್ಯವಸ್ಥೆಯಾದ ಆರ್‌ಟಿಜಿಎಸ್| ಇಂದಿನಿಂದ ಆರ್‌ಟಿಜಿಎಸ್‌ ವ್ಯವಸ್ಥೆಯಲ್ಲಿ ದಿನದ 24 ಗಂಟೆಯೂ ಹಣ ಪಾವತಿ

ಮುಂಬೈ(ಡಿ.೧೪): ಹೆಚ್ಚು ಮೌಲ್ಯದ ಹಣ ವರ್ಗಾವಣೆಗೆ ಇರುವ ಆನ್‌ಲೈನ್‌ ವ್ಯವಸ್ಥೆಯಾದ ಆರ್‌ಟಿಜಿಎಸ್‌ (ರಿಯಲ್‌ ಟೈಮ್‌ ಗ್ರಾಸ್‌ ಸೆಟ್‌್ಲಮೆಂಟ್‌ ಸಿಸ್ಟಮ್‌) ಸೇವೆಯನ್ನು ದಿನದ 24 ಗಂಟೆಯೂ ಬಳಸುವ ಅವಕಾಶ ಭಾನುವಾರ ರಾತ್ರಿಯಿಂದ ಲಭ್ಯವಾಗಿದೆ. ಇದರೊಂದಿಗೆ ಈ ವ್ಯವಸ್ಥೆ ಜಾರಿ ಮಾಡಿದ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸೇರ್ಪಡೆಯಾಗಿದೆ.

ಆರ್‌ಬಿಐ ಮಹತ್ವದ ಘೋಷಣೆ: ಬ್ಯಾಂಕ್ ಖಾತೆದಾರರಿಗೆ ಗುಡ್‌ ನ್ಯೂಸ್!

ಭಾನುವಾರ ರಾತ್ರಿ 12.30ರಿಂದಲೇ ಈ ಸೇವೆ ದೇಶಾದ್ಯಂತ ಎಲ್ಲಾ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಪ್ರಕಟಿಸಿದ್ದಾರೆ. ಈ ಸೇವೆ ವಾರದ ಏಳೂ ದಿನ, ವರ್ಷದ 365 ದಿನಗಳೂ ಲಭ್ಯವಿರಲಿದೆ. ನೆಫ್ಟ್‌ನಲ್ಲಿ ವಾರದ ಏಳೂ ದಿನ ಸೇವೆಗೆ ಅವಕಾಶ ಕಲ್ಪಿಸಿದ ವರ್ಷದೊಳಗೆ ಆರ್‌ಬಿಐ ಆರ್‌ಟಿಜಿಎಸ್‌ ವ್ಯವಸ್ಥೆಯಲ್ಲೂ ಇದೇ ರೀತಿಯ ಸೌಲಭ್ಯ ಕಲ್ಪಿಸಿದೆ.

ಹಗಲು -ರಾತ್ರಿ ವಹಿವಾಟು: NEFT ಇನ್ಮುಂದೆ ಬೊಂಬಾಟು!

2004ರಲ್ಲಿ ಕೇವಲ 4 ಬ್ಯಾಂಕ್‌ಗಳಿಗೆ ಸೀಮಿತವಾಗಿ ಆರಂಭವಾದ ಈ ಸೇವೆಯನ್ನು ಪ್ರಸಕ್ತ ದೇಶಾದ್ಯಂತ ಇರುವ 237 ಬ್ಯಾಂಕ್‌ಗಳ ಮೂಲಕ ಬಳಸಲಾಗುತ್ತಿದೆ. ನಿತ್ಯ 6.35 ಲಕ್ಷದಷ್ಟುವ್ಯವಹಾರ ಆರ್‌ಟಿಜಿಎಸ್‌ ಮೂಲಕ ನಡೆಯುತ್ತಿದ್ದು, 4.17 ಲಕ್ಷ ಕೋಟಿ ರು. ಹಣ ವರ್ಗಾವಣೆಯಾಗುತ್ತಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ತನ್ನ ಬಾಯಲ್ಲಿ ಕೇಸರಿ ಹೇಳಿ, ಜನರ ಬಾಯಿಗೆ ವಿಸ್ಕಿಬಿಟ್ಟು ಕೋಟಿ ಕೋಟಿ ಗಳಿಸಿದ ಬಾಲಿವುಡ್ ನಟ ಅಜಯ್ ದೇವಗನ್!
ಟೆಂಪಲ್ ಸ್ಟಾರ್ಟ್ಅಪ್ ನೇಮಕಾತಿ ಆರಂಭ, ಒಂದೇ ಕಂಡೀಷನ್ ದೇಹದ ಫ್ಯಾಟ್ ಶೇ.16ರ ಒಳಗಿರಬೇಕು