
ನವದೆಹಲಿ(ಡಿ.13): ಇಡೀ ವಿಶ್ವಕ್ಕೇ ಕೊರೋನಾ ಹಬ್ಬಿಸಿ ಟೀಕೆಗೆ ಗುರಿಯಾಗಿರುವ ಹಾಗೂ ಭಾರತದೊಂದಿಗೆ ಗಡಿ ತಂಟೆ ಮಾಡುತ್ತಿರುವ ಚೀನಾಗೆ ಮತ್ತೊಂದು ಆಘಾತ ಉಂಟಾಗಿದೆ. ವಿಶ್ವದ ಪ್ರಸಿದ್ಧ ಮೊಬೈಲ್ ತಯಾರಕ ಕಂಪನಿಯಾದ ಸ್ಯಾಮ್ಸಂಗ್ ಚೀನಾ ತೊರೆದು ಭಾರತಕ್ಕೆ ಬರಲು ನಿರ್ಧರಿಸಿದೆ. ಇದರಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಹಾಗೂ ಆತ್ಮನಿರ್ಭರ ಭಾರತ ಚಿಂತನೆಗೆ ಭರ್ಜರಿ ಯಶಸ್ಸು ಸಿಕ್ಕಂತಾಗಿದೆ.
ಎಲ್‌ಜಿಯ ಬಿ2ಬಿ ಇನ್ನೋವೇಶನ್ ಗ್ಯಾಲರಿಯಲ್ಲಿ ಏನೆಲ್ಲ ಲಾಭವಿದೆ ಗೊತ್ತಾ..?
ಚೀನಾ ತ್ಯಜಿಸಿ ಉತ್ತರ ಪ್ರದೇಶದ ನೋಯ್ಡಾದಲ್ಲಿ ಮೊಬೈಲ್ ಹಾಗೂ ಐಟಿ ಡಿಸ್ಪೆ$್ಲೕ ತಯಾರಿಕಾ ಘಟಕವನ್ನು ಸ್ಯಾಮ್ಸಂಗ್ ಆರಂಭಿಸಲಿದೆ. ಇದಕ್ಕಾಗಿ ಸ್ಯಾಮ್ಸಂಗ್ .4825 ಕೋಟಿ ಹೂಡಿಕೆ ಮಾಡಲಿದೆ ಎಂದು ಉತ್ತರ ಪ್ರದೇಶ ಸರಕಾರ ಹೇಳಿದೆ.
ಇದು ಭಾರತದ ಅತಿ ದೊಡ್ಡ ಹಾಗೂ ವಿಶ್ವದ ಮೂರನೇ ಅತೀ ದೊಡ್ಡ ಘಟಕವಾಗಿರಲಿದೆ. ಇದಕ್ಕೆ ಉತ್ತರಪ್ರದೇಶ ಸರ್ಕಾರ ವಿಶೇಷ ಪ್ರೋತ್ಸಾಹ ನೀಡಲಿದ್ದು, ಭೂಮಿ ಪರಭಾರೆಯ ಮುದ್ರಾಂಕ ಶುಲ್ಕ ವಿನಾಯಿತಿ ಹಾಗೂ 250 ಕೋಟಿಯ ಹಣಕಾಸು ನೆರವು ನೀಡಲಿದೆ. ಇದೇ ವೇಳೆ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ಘಟಕ ಹಾಗೂ ಸೆಮಿಕಂಡಕ್ಟರ್‌ಗಳ ಉತ್ಪಾದನಾ ಪ್ರಚಾರ ಯೋಜನೆಯಡಿ 460 ಕೋಟಿ ರು. ನೆರವು ಸಿಗಲಿದೆ. ಈ ಘಟಕ 510 ಮಂದಿ ಪ್ರತ್ಯಕ್ಷ ಉದ್ಯೋಗ ನೀಡಲಿದೆ.
ಸ್ಯಾಮ್ಸಂಗ್ ತಯಾರಿಸ್ತಿದೆ 600 ಮೆಗಾಪಿಕ್ಸೆಲ್ ಮೊಬೈಲ್ ಕ್ಯಾಮೆರಾ!
ಈಗಾಗಲೇ ನೋಯ್ಡಾದಲ್ಲಿ ಸ್ಯಾಮ್ಸಂಗ್ ಮೊಬೈಲ್ ಉತ್ಪಾದನಾ ಘಟಕ ಇದ್ದು, ರಾಷ್ಟ್ರ ರಾಜಧಾನಿ ವಲಯವನ್ನು ರಫ್ತು ಕೇಂದ್ರವನ್ನಾಗಿ ಮಾಡುವ ಉದ್ದೇಶ ಇದೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.