ನಿಮ್ಮ ಎಸ್ ಬಿಐ ಉಳಿತಾಯ ಖಾತೆಯಿಂದ 147.5ರೂ. ಕಡಿತವಾಗಿದೆಯಾ? ಇದೇ ಕಾರಣಕ್ಕೆ ನೋಡಿ

By Suvarna News  |  First Published Dec 12, 2022, 12:27 PM IST

ನೀವು ಎಸ್ ಬಿಐ ಉಳಿತಾಯ ಖಾತೆ ಹೊಂದಿದ್ದು, ನಿಮ್ಮ ಖಾತೆಯಿಂದ ಇತ್ತೀಚೆಗೆ 147.5ರೂ. ಕಡಿತವಾಗಿದೆಯಾ? ಯಾಕೆ ಎಂದು ತಿಳಿಯುತ್ತಿಲ್ಲವೇ? ನೀವು ಬಳಸುತ್ತಿರುವ ಡೆಬಿಟ್ / ಎಟಿಎಂ ಕಾರ್ಡ್ ವಾರ್ಷಿಕ ನಿರ್ವಹಣೆ/ ಸೇವಾ ಶುಲ್ಕವಾಗಿ 147.5ರೂ. ಕಡಿತ ಮಾಡಲಾಗಿದೆ. 
 


ನವದೆಹಲಿ (ಡಿ.12): ದೇಶದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸಮಯಕ್ಕೆ ತಕ್ಕಂತೆ ತನ್ನ ಸೇವೆಗಳಲ್ಲಿ ಕೂಡ ಬದಲಾವಣೆಗಳನ್ನು ಮಾಡುತ್ತಿರುತ್ತದೆ. ಆಧುನಿಕ ತಂತ್ರಜ್ಞಾನಗಳಿಗೆ ಅನುಗುಣವಾಗಿ ಗ್ರಾಹಕರಿಗೆ ಅನುಕೂಲವಾಗುವಂತೆ ಸೇವೆಗಳನ್ನು ಒದಗಿಸುತ್ತಿದೆ ಕೂಡ. ಇತ್ತೀಚೆಗೆ ವಾಟ್ಸಾಪ್ ಮೂಲಕ ಬ್ಯಾಲೆನ್ಸ್ ಚೆಕ್ ಸೇರಿದಂತೆ ವಿವಿಧ ಸೇವೆಗಳನ್ನು ಗ್ರಾಹಕರಿಗೆ ಒದಗಿಸಿದೆ. ಎಸ್ ಬಿಐ ಕೋಟ್ಯಂತರ ಉಳಿತಾಯ ಖಾತೆದಾರರನ್ನು ಹೊಂದಿದೆ. ಉಳಿತಾಯ ಖಾತೆ ಹೊಂದಿರುವ ಗ್ರಾಹಕರ ಬಳಿ ಕನಿಷ್ಠ ಒಂದು ಎಟಿಎಂ ಕಾರ್ಡ್ ಆದ್ರೂ ಇರುತ್ತದೆ. ಇತ್ತೀಚೆಗೆ ಎಟಿಎಂ ಕಾರ್ಡ್ ನಗದು ಬಳಕೆಯನ್ನು ತಗ್ಗಿಸಿದೆ. ಆನ್ ಲೈನ್ ಶಾಪಿಂಗ್, ಆನ್ ಲೈನ್ ಪೇಮೆಂಟ್ ಎಲ್ಲದಕ್ಕೂ ಎಟಿಎಂ ಕಾರ್ಡ್ ಬಳಕೆ ಮಾಡಲು ಅವಕಾಶವಿರುವ ಕಾರಣ ಜನರು ಎಟಿಎಂ ಅಥವಾ ಡೆಬಿಟ್ ಕಾರ್ಡ್ ಗರಿಷ್ಠ ಬಳಕೆ ಮಾಡುತ್ತಿದ್ದಾರೆ. ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಕೂಡ ಎಸ್ ಬಿಐ ಮಿತಿ ಹೇರಿದೆ. ನಿರ್ದಿಷ್ಟ ಮಿತಿ ಮೀರಿದ ವಹಿವಾಟಿನ ಮೇಲೆ ಶುಲ್ಕ ವಿಧಿಸಲಾಗುತ್ತದೆ. ಆದರೆ, ಇತ್ತೀಚೆಗೆ ನೀವು ಎಟಿಎಂ ವಿತ್ ಡ್ರಾ ಮಿತಿ ಮೀರದಿದ್ರೂ ನಿಮ್ಮ ಖಾತೆಯಿಂದ  147.5ರೂ. ಕಡಿತವಾಗಿರೋದನ್ನು ಗಮನಿಸಿದ್ದೀರಾ? ಅದು ಏಕೆ ಕಡಿತವಾಗಿರೋದು ಅನ್ನೋದು ಗೊತ್ತಾ? 

ನಿಮ್ಮ ಬ್ಯಾಂಕ್ ಖಾತೆಯಿಂದ 147.5ರೂ. ಕಡಿತವಾಗಿರೋದು ಗಮನಕ್ಕೆ ಬಂದಿರಬಹುದು. ಈ ಮೊತ್ತವನ್ನು ಏಕೆ ಕಡಿತ ಮಾಡಿದ್ರು ಎಂಬ ಅನುಮಾನ ಕಾಡುತ್ತಿರಬಹುದು. ಅದಕ್ಕೆ ಇಲ್ಲಿದೆ ಉತ್ತರ. ನೀವು ಬಳಸುತ್ತಿರುವ ಡೆಬಿಟ್ / ಎಟಿಎಂ ಕಾರ್ಡ್ಗೆ ವಾರ್ಷಿಕ ನಿರ್ವಹಣೆ/ ಸೇವಾ ಶುಲ್ಕವಾಗಿ 147.5ರೂ. ಕಡಿತ ಮಾಡಲಾಗಿದೆ. 

Tap to resize

Latest Videos

ಎರಡು ಅಥವಾ ಅದಕ್ಕಿಂತ ಹೆಚ್ಚಿನ ಇಪಿಎಫ್ ಖಾತೆಗಳನ್ನು ವಿಲೀನಗೊಳಿಸೋದು ಹೇಗೆ? ಇಲ್ಲಿದೆ ಮಾಹಿತಿ

ಎಸ್ ಬಿಐ ತನ್ನ ಗ್ರಾಹಕರಿಗೆ ಅನೇಕ ವಿಧದ ಎಟಿಎಂ ಕಾರ್ಡ್ ಗಳನ್ನು ಒದಗಿಸುತ್ತದೆ. ಇವುಗಳಲ್ಲಿ ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್ ಗಳು ಮುಖ್ಯವಾದವು. ಈ ಕಾರ್ಡ್ ಗಳ ನಿರ್ವಹಣೆಗೆ ಬ್ಯಾಂಕ್ 125ರೂ. ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಹೀಗಿರುವಾಗ ಎಟಿಎಂ ವಾರ್ಷಿಕ ನಿರ್ವಹಣಾ ಶುಲ್ಕವಾಗಿ 125ರೂ. ಕಡಿತ ಮಾಡಬೇಕು ತಾನೇ? ಅದು ಬಿಟ್ಟು 147.5ರೂ. ಕಡಿತ ಮಾಡಿರೋದು ಏಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಕಾರಣ ಈ ಸೇವಾ ಶುಲ್ಕಕ್ಕೆ ಶೇ.18ರಷ್ಟು ಜಿಎಸ್ ಟಿ ಅನ್ವಯಿಸುತ್ತದೆ. ಹೀಗಾಗಿ 125ರೂ.ಗೆ ಶೇ.18ರಷ್ಟು ಜಿಎಸ್ ಟಿ ಅಂದರೆ 22.5ರೂ. ಸೇರಿಸಿದ್ರೆ ಒಟ್ಟು 147.5ರೂ. ಕಡಿತಗೊಳಿಸಲಾಗಿದೆ. 

ಯುವ (Yuva),ಗೋಲ್ಡ್ (Gold), ಕಾಂಬೋ (Combo), ಮೈ ಕಾರ್ಡ್ (ಇಮೇಜ್) ಡೆಬಿಟ್ ಕಾರ್ಡ್ ಮೇಲೆ ವಾರ್ಷಿಕ  175 +ಜಿಎಸ್ ಟಿ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಪ್ಲಾಟಿನಂ ಡೆಬಿಟ್ ಕಾರ್ಡ್ (Platinum Debit card) ಮೇಲೆ 250 ರೂ. +ಜಿಎಸ್ ಟಿ ವಿಧಿಸಲಾಗುತ್ತದೆ. ಇನ್ನು ಪ್ರೈಡ್/ ಪ್ರೀಮಿಯಂ ಬ್ಯುಸಿನೆಸ್ ಡೆಬಿಟ್ ಕಾರ್ಡ್ ಗಳ ಮೇಲೆ  350ರೂ. +ಜಿಎಸ್ ಟಿ ವಿಧಿಸಲಾಗುತ್ತದೆ. ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಬದಲಾಯಿಸಲು ಬಯಸಿದ್ರೆ ಬ್ಯಾಂಕ್ 300+ಜಿಎಸ್ ಟಿ ಶುಲ್ಕ ವಿಧಿಸುತ್ತದೆ. 

ತೆರಿಗೆದಾರರಿಗೆ ಶುಭ ಸುದ್ದಿ; ತೆರಿಗೆ ರೀಫಂಡ್ ನಿಯಮ ಬದಲಾಯಿಸಿದ ಐಟಿ ಇಲಾಖೆ

ಆನ್ ಲೈನ್ ನಲ್ಲೇ ಶಾಖೆ ಬದಲಾವಣೆ
ನೀವು ಎಸ್ ಬಿಐ ಶಾಖೆ ಹೊಂದಿದ್ದು, ಬದಲಾಯಿಸಲು ಬಯಸಿದ್ರೆ ಎಸ್ ಬಿಐ ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಮನೆಯಿಂದಲೇ ಈ ಕೆಲಸ ಮಾಡಿ ಮುಗಿಸಬಹುದು. ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯನ್ನು ಇನ್ನೊಂದು ಶಾಖೆಗೆ ಬದಲಾಯಿಸಲು ನಿಮಗೆ ಆ ಶಾಖೆಯ ಕೋಡ್ ಗೊತ್ತಿರೋದು ಅಗತ್ಯ. ಹಾಗೆಯೇ ಬ್ಯಾಂಕಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರೋದು ಅಗತ್ಯ. ಆನ್ ಲೈನ್  ಮೂಲಕವೇ ಬ್ಯಾಂಕ್ ಶಾಖೆ ಬದಲಾವಣೆ ಮಾಡೋದ್ರಿಂದ ಬ್ಯಾಂಕಿಗೆ ಓಡಾಟ ನಡೆಸಬೇಕಾದ ಅಗತ್ಯವಿಲ್ಲ. ಆನ್ ಲೈನ್ ಪ್ರಕ್ರಿಯೆ ಹೊರತಾಗಿ ಯೋನೋ ಅಪ್ಲಿಕೇಷನ್ ಅಥವಾ ಯೋನೋ ಲೈಟ್ ಮೂಲಕ ನೀವು ನಿಮ್ಮ ಶಾಖೆಯನ್ನು ಬದಲಾಯಿಸಬಹುದು. ಆದ್ರೆ ನೆನಪಿಡಿ, ನಿಮ್ಮ ಮೊಬೈಲ್ ಸಂಖ್ಯೆ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು. ಇಲ್ಲವಾದ್ರೆ ಒಟಿಪಿ ಇಲ್ಲದೆ ಖಾತೆಯನ್ನು ವರ್ಗಾವಣೆ ಮಾಡಲು ಸಾಧ್ಯವಾಗೋದಿಲ್ಲ. 


 

click me!