ವ್ಯವಹಾರವೇ ಇಲ್ಲ, ಹಾಗಿದ್ರೂ ಕೆಲ ತಿಂಗಳ ಹಿಂದೆ ಈ ಕಂಪನಿಯಲ್ಲಿ 1 ಲಕ್ಷ ಹಾಕಿದ್ರೆ ಈಗಾಗ್ತಿತ್ತು 670 ಕೋಟಿ!

By Santosh Naik  |  First Published Oct 29, 2024, 10:28 PM IST

ಈ ಕಂಪನಿ ಪ್ರಸ್ತುತ ಯಾವುದೇ ವ್ಯವಹಾರವನ್ನು ಹೊಂದಿಲ್ಲ. ಆದರೆ, ಭಾರತದ ಪ್ರಮುಖ ಕಂಪನಿಗಳಲ್ಲಿ ದೊಡ್ಡ ಪ್ರಮಾಣದ ಹೂಡಿಕೆಯನ್ನು ಹೊಂದಿದೆ.


ಬೆಂಗಳೂರು (ಅ.29): ದೇವರು ಕೊಡಬೇಕು ಅಂತಾ ಮನಸ್ಸು ಮಾಡಿದರೆ ಅದಕ್ಕೆ ಕೊನೇ ಅಂತಾನೇ ಇರೋದಿಲ್ಲ ಅನ್ನೋ ಮಾತಿದೆ.ಎಲ್ಸಿಡ್ ಇನ್ವೆಸ್ಟ್‌ಮೆಂಟ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಿದವರ ಪಾಲಿಗೆ ಈ ಮಾತು ನಿಜವಾಗಿದೆ. ಕೆಲವೇ ತಿಂಗಳ ಹಿಂದೆ ಪೆನ್ನಿ ಸ್ಟಾಕ್‌ ಎಂದು ಮೂಗು ಮುರಿಯುತ್ತಿದ್ದ ಮಂದಿಯ ತಲೆತಿರುಗುವಂತೆ ಇಂದು ಬಿಎಸ್‌ಇಯಲ್ಲಿ ಈ ಕಂಪನಿ ಲಿಸ್ಟಿಂಗ್‌ ಆಗಿದೆ. ಲಿಸ್ಟಿಂಗ್‌ ಆಗಿರುವುದು ಮಾತ್ರವಲ್ಲ, ಎಂಆರ್‌ಎಫ್‌ ಕಂಪನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ದುಬಾರಿ ಷೇರು ಎನಿಸಿಕೊಂಡಿದೆ. ಅಷ್ಟಕ್ಕೂ ಹೀಗಾಗಲು ಕಾರಣವೇನು ಎಂದರೆ, ಇತ್ತೀಚೆಗೆ ಸೆಬಿ ಹೊರಡಿಸಿದ್ದ ಒಂದು ಸುತ್ತೋಲೆ.ಭಾರತದ ಮಾರುಕಟ್ಟೆಯಲ್ಲಿರುವ ಇನ್ವೆಸ್ಟ್‌ಮೆಂಟ್‌ ಕಂಪನಿಗಳ ಮೂಲ ಬೆಲೆ ಏನು ಅನ್ನೋದನ್ನು ಪತ್ತೆ ಮಾಡುವ ನಿರ್ಧಾರವನ್ನು ಬಿಎಸ್ಇ ಮಾಡಿತ್ತು. ಅದರ ಬೆನ್ನಲ್ಲಿತೇ ಗೊತ್ತಾಗಿದ್ದು ಏನೆಂದರೆ, ಎಲ್ಸಿಡ್‌ ಇನ್ವೆಸ್ಟ್‌ಮೆಂಟ್‌ನ ಪ್ರತಿ ಷೇರಿನ ಮೌಲ್ಯ 2.25 ಲಕ್ಷ ರೂಪಾಯಿ ಅನ್ನೋದು.

ಸ್ಮಾಲ್‌ಕ್ಯಾಪ್ ಸ್ಟಾಕ್ ದಲಾಲ್ ಸ್ಟ್ರೀಟ್‌ನಲ್ಲಿ ಇತಿಹಾಸವನ್ನು ಸೃಷ್ಟಿಸಿದೆ. ಷೇರಿನ ಬೆಲೆ ಒಂದೇ ದಿನದಲ್ಲಿ ರೂ 3.53 ರಿಂದ ರೂ 2,36,250 ಕ್ಕೆ ಏರಿಕೆ ಕಂಡಿತು. ಒಂದೇ ದಿನದಲ್ಲಿ ಬರೋಬ್ಬರಿ 66,92,535% ಜಿಗಿತ. ಇದರ ನಡುವೆ, ಅಕ್ಟೋಬರ್ 29 ರಂದು, BSE ನಲ್ಲಿ MRF ಷೇರುಗಳು 0.61% ನಷ್ಟು ಕಡಿಮೆಯಾಗಿ 1.22 ಲಕ್ಷ ರೂಪಾಯಿಗೆ ಇಳಿದಿದೆ. ಇನ್ನೂ ಅಚ್ಚರಿ ಏನೆಂದರೆ, ಎಲ್ಸಿಡ್‌ನ ಅತ್ಯಧಿಕ ವಹಿವಾಟು ಮೌಲ್ಯವು 4.58 ಲಕ್ಷ ರೂಪಾಯಿಗಳು, ಆದರೆ ಪತ್ತೆಯಾದ ಬೆಲೆ 2.25 ಲಕ್ಷ ರೂಪಾಯಿ ಮಾತ್ರ ಎಂದು ಬಿಎಸ್‌ಇ ಹೇಳಿದೆ.

ಬಿಎಸ್‌ಇ ಅಕ್ಟೋಬರ್ 28 ರಂದು ಹೋಲ್ಡಿಂಗ್ ಕಂಪನಿಗಳ ಬೆಲೆ ಪತ್ತೆಗಾಗಿ ಹರಾಜು ನಡೆಸಿತ್ತು. ಇದರ ಪ್ರಕಾರ, ಈ ಸ್ಟಾಕ್‌ನಲ್ಲಿ ನಾಲ್ಕು ತಿಂಗಳ ಹಿಂದೆ  1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ, ಕೆಲವೇ ಇಂದಿದೆ ಅದು  670 ಕೋಟಿ ರೂಪಾಯಿ ಆಗಿರುತ್ತಿತ್ತು. ಸೋಶಿಯಲ್‌ ಮೀಡಿಯಾದಲ್ಲಿ ಎಲ್ಸಿಡ್‌ ಇನ್ವೆಸ್ಟ್‌ಮೆಂಟ್‌ ಕಂಪನಿಯ ಷೇರಿನಲ್ಲಿ ಈ ಮಟ್ಟದ ಅದೃಷ್ಟ ಬದಲಾಗುತ್ತದೆ ಎಂದೂ ಯಾರೂ ನಿರೀಕ್ಷೆ ಮಾಡಿರಲಿಲ್ಲ ಎನ್ನುವುದು ವೈರಲ್‌ ಆಗಿದೆ.

ಜೂನ್ 2024 ರ SEBI ಸುತ್ತೋಲೆಯು ಹೂಡಿಕೆ ಕಂಪನಿಗಳು (IC ಗಳು) ಮತ್ತು ಇನ್ವೆಸ್ಟ್‌ಮೆಂಟ್ ಹೋಲ್ಡಿಂಗ್ ಕಂಪನಿಗಳ (IHCs) ಬೆಲೆಯ ಅನ್ವೇಷಣೆಯನ್ನು ಸುಧಾರಿಸಲು ಹೊಸ ಕಾರ್ಯವಿಧಾನವನ್ನು ಪ್ರಸ್ತಾಪಿಸಿದೆ. ಅನೇಕ ICಗಳು ಮತ್ತು IHC ಗಳು ತಮ್ಮ ಬುಕ್‌ ವ್ಯಾಲ್ಯುಗಿಂತ ಗಮನಾರ್ಹವಾಗಿ ಕಡಿಮೆ ವಹಿವಾಟು ನಡೆಸುತ್ತಿರುವುದನ್ನು SEBI ಗಮನಿಸಿದೆ.

MRF ದಾಖಲೆ ಮುರಿದ ಕಂಪನಿ, 4 ತಿಂಗಳ ಹಿಂದೆ 3 ರೂಪಾಯಿ ಇದ್ದ ಸ್ಟಾಕ್‌ನ ಬೆಲೆ ಇಂದು 2.36 ಲಕ್ಷ!

Latest Videos

undefined

ಲಿಕ್ವಿಡಿಟಿ, ನ್ಯಾಯಯುತ ಬೆಲೆಯ ಅನ್ವೇಷಣೆ ಮತ್ತು ಅಂತಹ ಕಂಪನಿಗಳ ಷೇರುಗಳಲ್ಲಿ ಒಟ್ಟಾರೆ ಹೂಡಿಕೆದಾರರ ಆಸಕ್ತಿಯನ್ನು ಸುಧಾರಿಸಲು, SEBI ಈ ಷೇರುಗಳಿಗೆ "ಬೆಲೆಯ ಬ್ಯಾಂಡ್‌ಗಳಿಲ್ಲದ ವಿಶೇಷ ಕರೆ ಹರಾಜು" ಗೆ ಚೌಕಟ್ಟನ್ನು ಪರಿಚಯಿಸಿತು. ಅಂದಹಾಗೆ, ಎಲ್ಸಿಡ್ ಅಕ್ಟೋಬರ್ 29 ರಂದು 2.25 ಲಕ್ಷ ರೂ.ನಲ್ಲಿ ವಹಿವಾಟು ಆರಂಭಿಸಿತು. ಇದು ಅದರ ಬುಕ್‌ ವ್ಯಾಲ್ಯುಗಿಂತ ಅರ್ಧದಷ್ಟು ಕಡಿಮೆ ಆಗಿದೆ.

ಟಾಟಾ ಟ್ರಸ್ಟ್‌ನಿಂದ ಸ್ಫೂರ್ತಿ ಪಡೆದ ಲೋಧಾ ಫ್ಯಾಮಿಲಿ, 20 ಸಾವಿರ ಕೋಟಿ ದಾನಕ್ಕೆ ನಿರ್ಧಾರ

ಕಂಪನಿಯ ಆದಾಯ ಹೇಗೆ?: ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭವು ಜೂನ್ 2024 ರಲ್ಲಿ ರೂ 135.95 ಕೋಟಿ ಆಗಿತ್ತು, ಜೂನ್ 2023 ರಲ್ಲಿ ರೂ 97.41 ಕೋಟಿಯಿಂದ 39.57% ಹೆಚ್ಚಾಗಿದೆ. ಜೂನ್ 2024 ರಲ್ಲಿ ನಿವ್ವಳ ಮಾರಾಟವು ರೂ 177.53 ಕೋಟಿಯಲ್ಲಿತ್ತು, ಜೂನ್ 2023 ರಲ್ಲಿ ರೂ 128.38 ಕೋಟಿಗಳಿಂದ 38.28% ಹೆಚ್ಚಾಗಿದೆ. ಎಲ್ಸಿಡ್ ಇನ್ವೆಸ್ಟ್‌ಮೆಂಟ್‌ಗಳು ಆರ್‌ಬಿಐನೊಂದಿಗೆ ಹೂಡಿಕೆ ಕಂಪನಿ ವರ್ಗದ ಅಡಿಯಲ್ಲಿ ನೋಂದಾಯಿತ NBFC ಆಗಿದೆ. ಕಂಪನಿಯು ಪ್ರಸ್ತುತ ತನ್ನದೇ ಆದ ಯಾವುದೇ ಕಾರ್ಯಾಚರಣೆಯ ವ್ಯವಹಾರವನ್ನು ಹೊಂದಿಲ್ಲ, ಆದರೆ ಇದು ಏಷ್ಯನ್ ಪೇಂಟ್ಸ್ ಮುಂತಾದ ಇತರ ದೊಡ್ಡ ಕಂಪನಿಗಳಲ್ಲಿ ಸಾಕಷ್ಟು ಹೂಡಿಕೆಗಳನ್ನು ಹೊಂದಿದೆ. ಈ ಕಂಪನಿಯ ಲಾಭದ ಮುಖ್ಯ ಮೂಲವು ಅದರ ಹಿಡುವಳಿ ಕಂಪನಿಗಳಿಂದ  ಬರುವ ಲಾಭಾಂಶವಾಗಿದೆ. ಕಂಪನಿಯು 11,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆಯನ್ನು ಹೊಂದಿದೆ.

click me!