ಎಕ್ಸಿಬಿಷನ್‌ನಲ್ಲಿ ಮಾರಿದ ರೊಟ್ಟಿ ಬದುಕು ಬದಲಿಸಿತು: ಉದ್ಯಮಿಯಾಗಿ ಬದಲಾದ ಹಳ್ಳಿಹೈದನ ಕತೆ

By Suvarna News  |  First Published Aug 9, 2023, 2:58 PM IST

ಜೀವನ ನಿರ್ವಹಣೆಗೆ ಸಮಸ್ಯೆ ಎದುರಾದಾಗ ಕಾಲೇಜೊಂದರ ಫುಡ್ ಎಕ್ಸ್ಬಿಷನ್‌ನಲ್ಲಿ ಒಂದು ಸಣ್ಣ ಸ್ಟಾಲ್‌ನಲ್ಲಿ ಸ್ಥಳೀಯ ಖಾದ್ಯಗಳನ್ನಿಟ್ಟು ಮಾರುತ್ತಿದ್ದ  ವ್ಯಕ್ತಿ ಈಗ ಹತ್ತಾರು ಜನರಿಗೆ ಕೆಲಸ ನೀಡುವಷ್ಟು ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತಿದ್ದಾರೆ.


ಕೆ.ಎಂ.ಮಂಜುನಾಥ್
ಬಳ್ಳಾರಿ: ಜೀವನ ನಿರ್ವಹಣೆಗೆ ಸಮಸ್ಯೆ ಎದುರಾದಾಗ ಕಾಲೇಜೊಂದರ ಫುಡ್ ಎಕ್ಸ್ಬಿಷನ್‌ನಲ್ಲಿ ಒಂದು ಸಣ್ಣ ಸ್ಟಾಲ್‌ನಲ್ಲಿ ಸ್ಥಳೀಯ ಖಾದ್ಯಗಳನ್ನಿಟ್ಟು ಮಾರುತ್ತಿದ್ದ  ವ್ಯಕ್ತಿ ಈಗ ಹತ್ತಾರು ಜನರಿಗೆ ಕೆಲಸ ನೀಡುವಷ್ಟು ಹೋಟೆಲ್ ಉದ್ಯಮದಲ್ಲಿ ಬೆಳೆದು ನಿಂತಿದ್ದಾರೆ. ಹೆಸರು ಯಲ್ಲನಗೌಡ ಶಂಕರಬಂಡೆ. ಹೆಚ್ಚಿನ ಶಿಕ್ಷಣವಿಲ್ಲ. ಜಾನಪದ ಗೀತೆಗಳನ್ನು ಸುಮಧುರವಾಗಿ ಹಾಡುತ್ತಾನೆ ಎಂಬ ಕಾರಣಕ್ಕಾಗಿ ಅಲ್ಲಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಅವಕಾಶ ನೀಡುತ್ತಿದ್ದರು. ಅವರು ಕೊಡುತ್ತಿದ್ದ ಒಂದಷ್ಟು ಹಣವನ್ನು ಕುಟುಂಬ ನಿರ್ವಹಣೆಗೆ ಬಳಸುತ್ತಿದ್ದರು. ಈ ಅರೆಕಾಲಿಕ ಕೆಲಸ ಹೊಟ್ಟೆ ತುಂಬಿಸುತ್ತಿಲ್ಲ ಎಂದು ಯೋಚಿಸುತ್ತಿರುವಾಗಲೇ, ಪರಿಚಿತ ನಗರದ ಉದ್ಯಮಿಯೊಬ್ಬರು ನೀಡಿದ ಸಲಹೆ ಆತನ ಬದುಕನ್ನೇ ಬದಲಾಯಿಸಿತು.

ಅದು 2011 ನಗರದ ಪ್ರತಿಷ್ಠಿತ ಕಾಲೇಜೊಂದು ಹಮ್ಮಿಕೊಂಡಿದ್ದ ಫುಡ್ ಪೆಸ್ಟಿವೆಲ್‌ನಲ್ಲಿ (Food Festival) ಸ್ಟಾಲ್ ಪಡೆದು ಸ್ಥಳೀಯ ಜನಪ್ರಿಯ ಖಾದ್ಯಗಳಾದ ರೊಟ್ಟಿ, ಬದನೆಕಾಯಿ (Brinjal), ವಗ್ಗರಣೆ, ಮಿರ್ಚಿ ತಯಾರಿಸಿ ವ್ಯಾಪಾರಕ್ಕಿಡುತ್ತಾರೆ. ರೊಟ್ಟಿ, ಬದನೆಕಾಯಿ ಹೆಚ್ಚು ರುಚಿಯಾಗಿದೆ ಎಂಬ ಕೆಲವೇ ಹೊತ್ತಿನಲ್ಲಿ ಖಾಲಿಯಾಗುತ್ತದೆ. ಇದು ಯಲ್ಲನಗೌಡರ ಬದುಕಿಗೆ ತಿರುವು ನೀಡುತ್ತದೆ. ನಾನೇಕೆ ಹೋಟೆಲ್ ಉದ್ಯಮವನ್ನು ಬದುಕಿಗೆ ಆಯ್ಕೆ ಮಾಡಿಕೊಳ್ಳಬಾರದು ಎಂದು ಯೋಚಿಸುತ್ತಾರಲ್ಲದೆ, ಶ್ರೇಯೋಭಿಲಾಷಿ ಉದ್ಯಮಿಯೊಬ್ಬರಿಗೆ ಈ ವಿಚಾರ ಹೇಳುತ್ತಾರೆ. ಖಂಡಿತ ಈ ಕ್ಷೇತ್ರ ನಿನ್ನ ಕೈ ಹಿಡಿಯುತ್ತದೆ ಎಂದು ಉದ್ಯಮಿ ಸಲಹೆ ನೀಡಿ, ಒಂದಷ್ಟು ಆರ್ಥಿಕ ನೆರವು ನೀಡುವ ಭರವಸೆ ನೀಡುತ್ತಾರೆ. ಈ ಎಲ್ಲ ಬೆಳವಣಿಗೆ ಫಲಿತವಾಗಿ 2012ರಲ್ಲಿ ಹಳ್ಳಿಮನೆ ಹೆಸರಿನಲ್ಲಿ ಖಾನಾವಳಿ ಶುರು ಮಾಡುತ್ತಾರೆ. ಈ ಖಾನಾವಳಿ ಹೆಚ್ಚು ಜನಪ್ರಿಯವಾಗುತ್ತದೆ. 

Tap to resize

Latest Videos

ಮನುಷ್ಯನಿಗೆ ನಿದ್ರೆ ಅಂದ್ರೆ ಟೈಮ್ ವೇಸ್ಟ್ ಅಂತ ಯೋಚಿಸುತ್ತಿದ್ದರಂತೆ ಬಿಲ್ ಗೇಟ್ಸ್!

ಆರಂಭವಾದ ಜಾನಪದ ಹೋಟೆಲ್
ಉದ್ಯಮದಲ್ಲಿ ಲಾಭ ನೋಡುತ್ತಿದ್ದಂತೆಯೇ 2018ರಲ್ಲಿ ಬಳ್ಳಾರಿಯ ಪೊಲೀಸ್ ಜಿಮ್‌ಖಾನಾದಲ್ಲಿ (Police Zimkhan) ಜಾನಪದ ಹೆಸರಿನಲ್ಲಿ ಹೋಟೆಲ್ ಶುರು ಮಾಡುತ್ತಾರೆ. ಹೀಗೆ ವಿವಿಧೆಡೆ ಹೋಟೆಲ್ ಉದ್ಯಮಕ್ಕೆ (Business) ಸಂಬಂಧಿಸಿದ ಕ್ಷೇತ್ರಗಳಲ್ಲಿ ತೊಡಿಸಿಕೊಂಡು ಸುಮಾರು 100ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದಾರಲ್ಲದೆ, ವಾರ್ಷಿಕ ಲಕ್ಷಾಂತರ ರು. ಆದಾಯ ಗಳಿಸುತ್ತಿದ್ದಾರೆ. ನಾನು ವಾರ್ಷಿಕ ಲಕ್ಷಾಂತರ ರು. ದುಡಿಯುತ್ತಿದ್ದೇನೆ ಎನ್ನುವುದಕ್ಕಿಂತ ಅನೇಕರಿಗೆ ಉದ್ಯೋಗ (Employment) ನೀಡಿದ್ದೇನೆ ಎಂಬ ತೃಪ್ತಿಯಿದೆ. ನಾನು ಸಹ ಮೊದ ಮೊದಲು ಜೀವನ ನಿರ್ವಹಣೆಗೆ ಸಾಕಷ್ಟು ಒದ್ದಾಡಿದ್ದೇನೆ. ನನ್ನಂತೆಯೇ ಅನೇಕರು ಇರಬಹುದು. ನನ್ನ ಹೋಟೆಲ್ ಉದ್ಯಮದಲ್ಲಿ (Hotel Business) 100ಕ್ಕೂ ಹೆಚ್ಚು ಜನರು ಉದ್ಯೋಗ ಪಡೆದಿದ್ದು, ಅವರು ಸಹ ನಿರಮ್ಮಳವಾಗಿದ್ದಾರೆ ಎಂಬುದೇ ನನ್ನ ಖುಷಿ ಎನ್ನುತ್ತಾರೆ.

ಯಲ್ಲನಗೌಡ ಶಂಕರಬಂಡೆ (Yallana Gowda Shankarbande). ಹೋಟೆಲ್ ಉದ್ಯಮದಲ್ಲಿ ಸಹ ಪೈಪೋಟಿಯಿದೆ. ಪೈಪೋಟಿ ಇದ್ದಾಗಲೇ ನಾವು ಹೆಚ್ಚು ಅಲರ್ಟ್ ಆಗಿರುತ್ತೇವೆ. ಗ್ರಾಹಕರಿಗೆ ಮತ್ತಷ್ಟೂ ಗುಣಮಟ್ಟ ಹಾಗೂ ರುಚಿಯಾದ ಆಹಾರ (Food) ನೀಡಲು ಪ್ರಯತ್ನಿಸುತ್ತೇವೆ. ಯಾವುದೇ ಉದ್ಯಮದಲ್ಲಿ ತಾಳ್ಮೆ ಬಹಳ ಮುಖ್ಯ. ನಾವು ಆಯ್ದುಕೊಂಡ ಉದ್ಯಮ ಅಥವಾ ಉದ್ಯೋಗವನ್ನು ಹೆಚ್ಚು ಪ್ರೀತಿಸಬೇಕು. ಅದು ಫ್ಯಾಷನ್ ಆಗಬೇಕು. ಆಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎನ್ನುತ್ತಾರೆ.  ಆಹಾರಧಾನ್ಯಗಳು ಬೆಲೆ ಏರಿಕೆಯಾಗುತ್ತಿರುವುದರಿಂದ ಹೋಟೆಲ್ ಉದ್ಯಮ ಸವಾಲನ್ನು ಎದುರಿಸುತ್ತಿದೆ. ಕೊನೆಗೆ ಅನಿವಾರ್ಯವಾಗಿ ಗ್ರಾಹಕರ ಮೇಲೆಯೇ ಬೆಲೆ ಏರಿಕೆಯ ಬಿಸಿ ತಾಗುತ್ತದೆ. ಬೆಲೆ ಏರಿಕೆಯಾದಾಗ ನಾವು ಊಟದ ರೇಟನ್ನು ಸಹ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ ಎನ್ನುತ್ತಾರೆ ಯಲ್ಲನಗೌಡ.

ಗಂಡನಿಂದ ದೂರವಾಗಿ ತನ್ನದೇ ಕಂಪನಿ ಸ್ಥಾಪಿಸಿ, ದೇಶದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು ಮಹಿಳೆ

click me!