
ನವದೆಹಲಿ(ಮಾ.2) ಭಾರತದಲ್ಲಿ ಓಯೋ ಬ್ಯೂಸಿನೆಸ್ ಊಹೆಗೂ ನಿಲುಕದ ರೀತಿಯಲ್ಲಿ ಬೆಳೆದು ನಿಂತಿದೆ. 2013ರಲ್ಲಿ ಓಯೋ ಆರಂಭವಾದಾಗ ಇದೇನ್ ಮಹಾ ಎಂದು ನಕ್ಕಿದ್ದರು. ಆದರೆ ಇಂದು 80 ದೇಶಗಳಲ್ಲಿ 1 ಮಿಲಿಯನ್ ಕೊಠಡಿಗಳು ಸಂಪರ್ಕ ಜಾಲ ಹೊಂದಿದೆ. ಓಯೋ ಸಂಸ್ಥಾಪಕ ಹಾಗೂ ಸಿಇಒ ರಿತೇಶ್ ಅಗರ್ವಾಲ್ ಒಟ್ಟು ಆಸ್ತಿ 1,900 ಕೋಟಿ ರೂಪಾಯಿ. ರಿತೇಶ್ ಅಗರ್ವಾಲ್‌ಗೆ ಕೈಗೊಂಡು ಕಾಲಿಗೊಂದು ಆಳಿಟ್ಟುಕೊಳ್ಳುವ ಸಾಮರ್ಥ್ಯವಿದೆ. ಲಕ್ಷಾಂತರ ಮಂದಿಗ ಉದ್ಯೋಗ ನೀಡಿರುವ ರಿತೇಶ್ ಅಗರ್ವಾಲ್ ಈಗಲೂ ತಮ್ಮ ಹೊಟೆಲ್‌ನ ವಾಶ್ ರೂಂ ತೊಳೆಯುತ್ತಾರೆ. ಈ ಮಾತನ್ನು ಖುದ್ದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.
ಮುಂಬೈ ಟೆಕ್ ವೀಕ್‌ಗೆ ನೀಡಿದ ಸಂದರ್ಶನದಲ್ಲಿ ರಿತೇಶ್ ಅಗರ್ವಾಲ್ ಹಲವು ಮಾಹಿತಿ ಬಹಿರಂಗ ಪಡಸಿದ್ದಾರೆ. ಈ ಪೈಕಿ ಟಾಯ್ಲೆಟ್ ಸೇರಿದಂತೆ ವಾಶ್‌ರೂಂನ್ನು ಖುದ್ದು ಶುಚಿಗೊಳಿಸುವುದಾಗಿ ಹೇಳಿದ್ದಾರೆ. ಹಲವು ಬಾರಿ ನಾನು ಖುದ್ದು ವಾಶ್‌ರೂಂ ಶುಚಿಗೊಳಿಸುತ್ತೇನೆ. ಇದು ಇತರ ಉದ್ಯೋಗಿಗಳಿಗೆ ಮಾದರಿಯಾಗಲು ಮಾಡುತ್ತೇನೆ. ಇಷ್ಟೇ ಅಲ್ಲ ಎಲ್ಲಾ ಉದ್ಯೋಗಿಗಳು ಪ್ರೇರಣೆ ಪಡೆಯಲು ಈ ರೀತಿ ಮಾಡುತ್ತೇನೆ. ಕೆಲಸ ಅಚ್ಚುಕಟ್ಟಾಗಿ ಮಾಡಬೇಕು ಅಷ್ಟೆ ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.
ಟಿವಿಎಸ್, ವಿಪ್ರೊ, ಪಿವಿಆರ್: ಕೆಲ ಕಂಪನಿಗಳ ಪೂರ್ಣ ಹೆಸರು ಗೊತ್ತಾ?
ಪ್ರಮುಖವಾಗಿ ಕೆಲಸದಲ್ಲಿ ಮ್ಯಾನೇಜರ್, ಬಾಸ್, ನೌಕರ ಹೀಗೆ ಮೇಲು ಕೀಳು ಭಾವನೆಗಳಿರುತ್ತದೆ. ಕೆಲವು ಕೆಲಸಗಳು ನೌಕರರೇ ಮಾಡಬೇಕು, ಬಾಸ್ ಆಜ್ಞೆ ಮಾಡಬೇಕು ಎಂದಿರು ಒಂದಷ್ಟು ಅಲಿಖಿತ ನಿಯಮಗಳಿರುತ್ತದೆ.ಇವನ್ನು ತೊಡೆದು ಹಾಕಲು ಶೌಚಾಲಯವನ್ನು ಶುಚಿಗೊಳಿಸಲು ನಾನು ಹಿಂಜರಿಯುವುದಿಲ್ಲ. ಇದರಿಂದ ನಮ್ಮಲ್ಲಿ ಹೈರಾರ್ಕಿ ಇರುವುದಿಲ್ಲ ಎಂದಿದ್ದಾರೆ.ನಮ್ಮ ನಡೆ ಹಾಗೂ ವೃತ್ತಿ ಸಮಾಜದಲ್ಲಿ ಪ್ರಭಾವ ಬೀರಬೇಕು. ಅದು ಉತ್ತಮ ರೀತಿಯಲ್ಲಿರಬೇಕು ಎಂದು ರಿತೇಶ್ ಅಗರ್ವಾಲ್ ಹೇಳಿದ್ದಾರೆ.
29ರ ಹರೆಯದ ರಿತೇಶ್ ಅಗರ್ವಾಾಲ್ 2013ರಲ್ಲಿ ಓಯೋ ಆರಂಭಿಸಿ ಇದೀಗ ಭಾರತದ ಪ್ರಮುಖ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.ಓಯೋ ಹಂತ ಹಂತವಾಗಿ ಹಲವು ನಿಯಮಗಳನ್ನು ಬದಲಿಸಿದೆ. ಓಯೋ ಜೋಡಿಗಳ ಕೊಠಡಿ ಎಂದೇ ಕರೆಯಲಾಗುತ್ತಿತ್ತು. ಹೀಗಾಗಿ ಇತ್ತೀಚೆಗೆ ಗುರುತಿನ ಚೀಟಿಗಳನ್ನು ಕಡ್ಡಾಯಗೊಳಿಸಲಾಗಿದೆ. ಹಲವು ನಿಯಮಗಳನ್ನು ಬದಲಾಯಿಸಲಾಗಿದೆ.
ಇತ್ತೀಚೆಗೆ ರಿತೇಶ್ ಅಗರ್ವಾಲ್ ಮಹಾಕುಂಭ ಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿದ್ದರು. ಕುಟುಂಬದ ಜೊತೆ ತೆರಳಿದ ರಿತೇಶ್ ಅಗರ್ವಾಲ್ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದರು. ಅತೀ ಹೆಚ್ಚು ಮಂದಿ ಸೇರಿರುವ ಈ ಪುಣ್ಯಸ್ಥಳದಲ್ಲಿ ನಿಂತು ನೋಡಿದಾಗ ನಾವೆಲ್ಲೂ ತುಂಬಾ ಸಣ್ಣವರು ಎಂದನಿಸುತ್ತಿದೆ ಎಂದು ಬರೆದುಕೊಂಡಿದ್ದರು.
ಇದು ಓಯೋ ಅಲ್ಲ ಕಾರಿನೊಳಗೆ ನೋ ರೊಮ್ಯಾನ್ಸ್, ಕ್ಯಾಬ್ ಚಾಲಕನ ನೋಟಿಸ್‌ಗೆ ಭಾರಿ ಮೆಚ್ಚುಗೆ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.