Rich Dad Poor Dad ಪುಸ್ತಕದಿಂದ ಪ್ರೇರಣೆಗೊಂಡ ಅಪ್ಪ ಮಗಳು ಏನ್ ಮಾಡಿದ್ರು ನೋಡಿ

Published : Aug 14, 2025, 01:22 PM IST
Rich Dad Poor Dad Book Inspires Father Daughter

ಸಾರಾಂಶ

ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದಿಂದ ಪ್ರೇರಣೆಗೊಂಡಿರುವ ಅಪ್ಪ ಮಗಳು ಉದ್ಯಮವೊಂದನ್ನು ಆರಂಭಿಸಿದ್ದು ಪುಟ್ಟ ಮಗಳಿಗೆ ಅಪ್ಪ ಬದುಕಿನ ಮಾರ್ಗದರ್ಶನ ನೀಡುತ್ತಿರುವ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

ಬಹುತೇಕ ಪೋಷಕರಿಗೆ ಮಕ್ಕಳನ್ನು ಹೇಗೆ ಬೆಳೆಸಬೇಕೆಂಬುದೇ ಗೊತ್ತಿಲ್ಲ, ಕೆಲವರು ಶ್ರೀಮಂತರು ತಮಗಿರುವ ಎಲ್ಲಾ ಸವಲತ್ತುಗಳನ್ನು ನೀಡಿ ಬೆಳೆಸುತ್ತಾರೆ. ಹಾಗೆಯೇ ಮಧ್ಯಮ ವರ್ಗದ ಕುಟುಂಬಗಳು ಅಷ್ಟೇ ತಮ್ಮ ಹೊಟ್ಟೆ ಬಟ್ಟೆ ಕಟ್ಟಿಯಾದರೂ ಸರಿ ತಾವು ಕಾಣದ ಶ್ರೀಮಂತಿಕೆಯನ್ನು ಮಕ್ಕಳಿಗೆ ತೋರಿಸುತ್ತಾರೆ. ಶ್ರೀಮಂತರಂತೆ ಮಕ್ಕಳನ್ನು ಬೆಳೆಸುತ್ತಾರೆ. ಆದರೆ ನಿಜವಾಗಿಯೂ ನೀವು ನಿಮ್ಮಲ್ಲಿ ಇಲ್ಲದ ಶ್ರೀಮಂತಿಕೆಯನ್ನು ತೋರಿಸಿ ಮಕ್ಕಳನ್ನು ಬೆಳೆಸುವುದು ಸರಿಯ ಅಥವಾ ತಮ್ಮ ಆರ್ಥಿಕ ಸ್ಥಿತಿಗೆ ತಕ್ಕಂತೆ ಮಕ್ಕಳನ್ನು ಬೆಳೆಸುವುದು ಸರಿಯಾ ಈ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದೇ ಪೋಷಕರ ಇಂದಿನ ದೊಡ್ಡ ಚಿಂತೆ ಮಕ್ಕಳು ಕೇಳಿದ್ದನ್ನು ಕೊಟ್ಟಿಲ್ಲವೆಂದರೆ ಹುಟ್ಟಿಸಿದ್ದು ಏಕೆ ಎಂದು ಮಕ್ಕಳೇ ಕೇಳುತ್ತಾರೆ ಎಂಬುದು ಪೋಷಕರ ಅಳಲು ಈ ಎಲ್ಲಾ ಪೋಷಕರ ಸಂಕಷ್ಟಗಳ ಮಧ್ಯೆ ಇಲ್ಲೊಂದು ಅಪ್ಪ ಮಗಳ ವೀಡಿಯೋ ಭಾರಿ ವೈರಲ್ ಆಗ್ತಿದೆ.

ನಿಂಬೆ ಹಣ್ಣಿನ ಜ್ಯೂಸ್ ಮಾರಾಟ ಮಾಡುವ 7 ವರ್ಷದ ಬಾಲಕಿ:

ಈ ವೀಡಿಯೋವನ್ನು purvagx(Purva Gharat)ಎಂಬ ಫೋಟೋಗ್ರಾಫರ್‌ ಹಾಗೂ ಇನ್‌ಫ್ಲುಯೆನ್ಸರ್‌ ಒಬ್ಬರು ತಮ್ಮ ಇನ್ಸ್ಟಾಗ್ರಾಮ್ ಪೇಜ್‌ನಿಂದ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಬೀದಿಯಲ್ಲಿ ಬಾಲಕಿಯೊಬ್ಬಳು ನಿಂಬೆಹಣ್ಣಿನ ಜ್ಯೂಸ್ ಮಾರಾಟ ಮಾಡುತ್ತಿರುತ್ತಾರೆ. ಆಕೆಯ ಅಪ್ಪ ಹಾಗೂ ಅಜ್ಜಿಯೂ ಕೂಡ ಪಕ್ಕದಲ್ಲೇ ಇರುತ್ತಾರೆ. ಇವರನ್ನು ಪರಿಚಯಿಸಿಕೊಂಡ ಫೋಟೋಗ್ರಾಫರ್ ಬಾಲಕಿಯ ಹೆಸರು ಕೇಳಿ ಫೋಟೋ ತೆಗೆಯಬಹುದೇ ಎಂದು ಕೇಳುತ್ತಾರೆ. ಅದರಂತೆ ಅವರು ಫೋಟೋ ತೆಗೆದಿದ್ದು, ಆರ್ಥಿಕವಾಗಿ ಸಧೃಡರಂತೆ ಕಾಣಿಸುತ್ತಿದ್ದ ಅವರ ಬಳಿ ಕುತೂಹಲದಿಂದ ಜ್ಯೂಸ್‌ ಮಾರಾಟದ ಅನಿವಾರ್ಯತೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 

Rich Dad Poor Dad ಪುಸ್ತಕ ಪ್ರೇರಣೆ:

ಈ ವೇಳೆ ಆ ಬಾಲಕಿಯ ತಂದೆ, ತಾವು ಅಪ್ಪ ಮಗಳಿಬ್ಬರು ಖ್ಯಾತ ಲೇಖಕ ರಾಬರ್ಟ್ ಕಿಯೋಸಾಕಿ ಅವರ Rich Dad Poor Dad ಪುಸ್ತಕವನ್ನು ಓದಿದ್ದು ಅದರಿಂದ ಪ್ರೇರಣೆಗೊಂಡಿದ್ದಾಗಿ ಹೇಳಿದ್ದಾರೆ. ಅವರ ಮೊದಲ ಚಾಪ್ಟರ್‌ನಲ್ಲಿ ಇಬ್ಬರು ಬಾಲಕರು ಉದ್ಯಮದ ಆಳ ಅಗಲದ ಅರಿವಿಲ್ಲದೇ ಜೊತೆಯಾಗಿ ಉದ್ಯಮ ಆರಂಭಿಸುವ ಕತೆ ಇದೆ. ಹೀಗಾಗಿ ನಾವು ಈಗ ಉದ್ಯಮವನ್ನು ಆರಂಭಿಸಿದ್ದೇವೆ. ನಾವು ಮುಂದಿನ ಚಾಪ್ಟರ್‌ಗೆ ಹೋಗುವ ಮೊದಲು ಮೊದಲ ಚಾಪ್ಟರ್‌ನ್ನು ವೇರಿಫೈ ಮಾಡುತ್ತಿದ್ದೇವೆ ಮುಂದೇನಾಗುತ್ತದೆ ಹಾಗು ಆ ಪುಸ್ತಕ ನಮಗೆ ಹೇಗೆ ಸಂಬಂಧಿಸುತ್ತದೆ ಎಂದು ಆ ಬಾಲಕಿಯ ಅಪ್ಪ ವಿವರಿಸಿದ್ದಾರೆ. ಅಪ್ಪನ ಈ ಕಾರ್ಯಕ್ಕೆ ಇನ್‌ಫ್ಲುಯೆನ್ಸರ್ ಶ್ಲಾಘನೆ ವ್ಯಕ್ತಪಡಿಸಿದ್ದು, ಇದೊಂದು ಒಳ್ಳೆಯ ಆರಂಭ ಎಂದಿದ್ದಾರೆ.

ನನ್ನ ಮಗಳು 7 ವರ್ಷದವಳು, ಅವಳು ಆ ಪುಸ್ತಕರವನ್ನು ಓದಿದ ನಂತರ ನಾನು ಒಂದು ನನ್ನದೇ ಆದ ಲೆಮನ್ ಜ್ಯೂಸ್ ಶಾಪ್ ಹಾಕ್ಬೇಕು ಎಂದಳು. ಅದಕ್ಕೆ ನಾನು ಓಕೆ ನಾನು ನಿನ್ನನ್ನು ಬೆಂಬಲಿಸುತ್ತೇನೆ ಎಂದು ಹೇಳಿದೆ ಎಂದಿದ್ದಾರೆ. ಈ ವೀಡಿಯೋವನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ ಫೋಟೋಗ್ರಾಪರ್ ಹೀಗೆ ಬರೆದುಕೊಂಡಿದ್ದಾರೆ. ತನ್ನ ತಂದೆ ಮತ್ತು ಅಜ್ಜಿಯೊಂದಿಗೆ ಬೀದಿಯಲ್ಲಿ ನಿಂಬೆ ಪಾನಕ ಮಾರುತ್ತಿದ್ದ 7 ವರ್ಷದ ಬಾಲಕಿಯನ್ನು ಭೇಟಿಯಾದೆ. ನಾನು ಅವಳ ತಂದೆಯನ್ನು ಅದರ ಬಗ್ಗೆ ಕೇಳಿದಾಗ, ಅವರು ಮುಗುಳ್ನಗುತ್ತಾ ನೀವು ರಿಚ್ ಡ್ಯಾಡ್ ಪೂವರ್ ಡ್ಯಾಡ್ ಪುಸ್ತಕವನ್ನು ಓದಿದ್ದೀರಾ? ಎಂದು ಪ್ರಶ್ನಿಸಿದರು.

ಅವರಿಬ್ಬರೂ ಒಟ್ಟಿಗೆ ಪುಸ್ತಕವನ್ನು ಓದುತ್ತಿದ್ದಾರೆ ಮತ್ತು ಅಪ್ಪ ಆ ಪುಸ್ತಕದಿಂದ ಕಲಿತದ್ದನ್ನು ಮಗಳಿಗೆ ಕಲಿಸುತ್ತಿದ್ದಾನೆ: ಕನಸು ಕಾಣುವುದು, ನಿರ್ಮಿಸುವುದು ಮತ್ತು ಬೇಗನೆ ನಂಬುವುದು. 7 ನೇ ವಯಸ್ಸಿನಲ್ಲಿ, ಅವಳು ಈಗಾಗಲೇ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಕಲಿಯುತ್ತಿದ್ದಾಳೆ. ಮತ್ತು ಪ್ರಾಮಾಣಿಕವಾಗಿ? ನಮಗೆ ಈ ರೀತಿಯ ಹೆಚ್ಚಿನ ಪೋಷಕರು ಬೇಕು. ತಮ್ಮ ಮಕ್ಕಳಿಗೆ ನಿಜವಾಗಿಯೂ ಅಂಕಗಳು ಮಾತ್ರವಲ್ಲದೆ, ಯೋಚಿಸುವುದು, ರಚಿಸುವುದು ಮತ್ತು ಅವರ ಭವಿಷ್ಯದ ಜವಾಬ್ದಾರಿಯನ್ನು ಹೇಗೆ ತೆಗೆದುಕೊಳ್ಳುವುದು ಎಂಬುದನ್ನು ಕಲಿಸುವ ಪೋಷಕರು ಬೇಕು ಎಂದು ಅವರು ಬರೆದುಕೊಂಡಿದ್ದಾರೆ.

ಈ ವೀಡಿಯೋ ಭಾರಿ ವೈರಲ್ ಆಗಿದ್ದು, ಅನೇಕರು ಮಗಳಿಗೆ ಬದುಕಿನ ಅರ್ಥವನ್ನು ತಿಳಿಸುವ ಅವಳನ್ನು ಸರಿದಾರಿಯಲ್ಲಿ ಕರೆದೊಯ್ಯುವ ಪ್ರಯತ್ನ ಮಾಡುತ್ತಿರುವ ತಂದೆಯ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ. ವೀಡಿಯೋ ನೋಡಿದ ಅನೇಕರು ಇದೊಂದು ಒಳ್ಳೆಯ ಪೇರೆಂಟಿಗ್ ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಒಬ್ಬರು ಹೀಗೆ ಕಾಮೆಂಟ್ ಮಾಡಿದ್ದಾರೆ. ನಿಜವಾದ ವಿಷಯಗಳನ್ನು ಕಲಿಸುವ ತಂದೆಯನ್ನು ನೋಡುವುದು ತುಂಬಾ ಒಳ್ಳೆಯದು. ಆದರೆ ಈ ಇಡೀ ರೀಲ್‌ನ ಇನ್ನೊಂದು ದೃಷ್ಟಿಕೋನವನ್ನು ಕೆಲವರು ಮಾತ್ರ ನೋಡಬಹುದು. ಇಲ್ಲಿ ಒಂದು ದಿನ ಮಾರಾಟವಿಲ್ಲದಿದ್ದರೂ ಆ ಬಾಲಕಿ ಇನಾಯಾ ಚಿಂತಿಸಬೇಕಾಗಿಲ್ಲ. ಆದರೆ ಅದೇ ವೀಡಿಯೋದಲ್ಲಿ ಆ ಎರಡು ಬಲೂನ್‌ಗಳನ್ನು ಮಾರಾಟ ಮಾಡಲು ಹಿಡಿದುಕೊಂಡಿದ್ದ ಪುಟ್ಟ ಮಕ್ಕಳ ಕತೆ ಬೇರೆಯದೇ ಆಗಿದೆ. ಏಕೆಂದರೆ ಅವರಿಗೆ ಇಂದು ಊಟ ಮಾಡಬೇಕೆ ಅಥವಾ ಬೇಡವೇ ಎಂಬುದನ್ನು ಮಾರಾಟವು ನಿರ್ಧರಿಸುತ್ತದೆ. ಆದ್ದರಿಂದ ಶ್ರೀಮಂತ ತಂದೆ, ಪೂರ್ವಜರ ಆಸ್ತಿ ಹೊಂದಿರುವ ಜನರು ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸುತ್ತಾರೆ ಮತ್ತು ಸಾಮಾನ್ಯ ವ್ಯಕ್ತಿ ಕೂಡ ಸ್ಟಾರ್ಟ್‌ಅಪ್ ಅನ್ನು ಪ್ರಾರಂಭಿಸುತ್ತಾರೆ ಆದರೆ ಸೌಂದರ್ಯ ಮತ್ತು ಮುದ್ದಾದ ವ್ಯಕ್ತಿಗಳು ಜನರನ್ನು ಆಕರ್ಷಿಸುತ್ತಾರೆ ಎಂದು ಒಬ್ಬರು ಬರೆದಿದ್ದಾರೆ. ಒಳ್ಳೆಯ ಪೇರೆಂಟಿಗ್‌ನ ಒಳ್ಳೇ ನಿದರ್ಶನವಿದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

 

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

Explainer: ವಿಶ್ವದ ಅತಿದೊಡ್ಡ ಏರ್‌ಲೈನ್ಸ್‌ ಸ್ಮಶಾನವಾದ ಭಾರತ, ದೇಶದಲ್ಲಿ ವಿಮಾನ ಕಂಪನಿ ಬದುಕೋದು ಯಾಕೆ ಕಷ್ಟ?
ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!