
ಬೆಂಗಳೂರು(ಜೂ.19) ಭಾರತ ಯುವ ಹಾಗೂ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸಹೋದರರಾದ ನಿತಿನ್ ಕಾಮತ್ ಹಾಗೂ ನಿಖಿಲ್ ಕಾಮತ್ ಬಾಲ್ಯ, ಕಾಲೇಜು ದಿನ ಹಾಗೂ ವೃತ್ತೀ ಜೀವನ ಆರಂಭಿಸುವವರೆಗಿನ ಆಹಾರ ಪದ್ಧತಿ ಹೇಗಿತ್ತು ಅನ್ನೋದನ್ನು ತಾಯಿ ರೇವತಿ ಕಾಮತ್ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ರೇವತಿ ಕಾಮತ್ ಇಬ್ಬರು ಮಕ್ಕಳ ಬೆಳೆಸಿದ ರೀತಿ ಸೇರಿದಂತೆ ಹಲವು ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ನಿಖಿಲ್-ನಿತಿನ್ ಕಾಮತ್‌ಗೆ ನೀಡುತ್ತಿದ್ದ ಆಹಾರ ಯಾವುದು?
ನಿಖಿಲ್ ಹಾಗೂ ನಿತಿನ್ ಕಾಮತ್ ಇಬ್ಬರೂ ಮಕ್ಕಳ ಪಾಲನೆ ಕುರಿತು ಮಾತನಾಡಿದ್ದ ರೇವತಿ ಕಾಮತ್, ಇಬ್ಬರು ಮಕ್ಕಳಿಗೆ ಬಾಲ್ಯದಿಂದ ವೃತ್ತಿ ಜೀವನ ಆರಂಭಿಸುವವರೆಗೆ ಹೊರಗಡೆಯಿಂದ ಫುಡ್ ಆರ್ಡರ್ ಮಾಡಿ ಕೊಟ್ಟಿಲ್ಲ ಎಂದಿದ್ದಾರೆ. ಪ್ರತಿ ಬಾರಿ ಮನೆಯಲ್ಲೇ ತಯಾರಿಸಿದ ಆಹಾರ ನೀಡುತ್ತಿದ್ದೆ. ಏನೇ ಆದರೂ ಸರಿ ಮನೆಯಲ್ಲೇ ಪೌಷ್ಠಿಕಾಂಶದ ಆಹಾರ ತಯಾರಿ ನೀಡುತ್ತಿದ್ದೆ. ಬೆಳಗಿನ ಉಪಹಾರ, ಮಧ್ಯಾಹ್ನ ಊಟ, ರಾತ್ರಿ ಸೇರಿದಂತೆ ಆಹಾರ ವಿಚಾರದಲ್ಲಿ ಹೊರಗಡೆ ಆರ್ಡರ್ ಮಾಡುವುದು, ತರಿಸಿಕೊಳ್ಳುವ ಪದ್ಧತಿಯೇ ಇರಲಿಲ್ಲ ಎಂದಿದ್ದಾರೆ.
ಜ್ಯೂಸ್ ಬೇಕು ಎಂದರೂ ಮನೆಯಲ್ಲೇ ತಯಾರಿಸಿ ಕೊಡುತ್ತಿದ್ದೆ. ಟೀ, ಕಾಫಿ ಸೇರಿದಂತೆ ಎಲ್ಲವೂ ಮನೆಯಲ್ಲೇ ಮಾಡಿಕೊಡುತ್ತಿದ್ದೆ. ವೃತ್ತಿ ಜೀವನ ಆರಂಭಿಸುವವರೆಗೆ ಹೊರಗಿನ ಆಹಾರ ನೀಡುತ್ತಿರಲಿಲ್ಲ. ಫ್ರೆಶ್ ಹಣ್ಣುಗಳನ್ನು ನೀಡುತ್ತಿದ್ದೆ. ಇದು ಹೆಚ್ಚಿನ ಖರ್ಚಾಗುತ್ತಿತ್ತು. ಕೆಲ ಆಹಾರಗಳನ್ನು, ಜ್ಯೂಸ್ ಹೊರಗಡೆಯಿಂದ ತರಿಸಿದರೆ ಕಡಿಮೆ ಖರ್ಚಿನಲ್ಲಿ ಆಗುತ್ತಿತ್ತು. ಆದರೆ ಎಷ್ಟೇ ಖರ್ಚಾದರೂ, ಸಮಯ ತೆಗೆದುಕೂಂಡರೂ ಹೊರಗಿನ ಜ್ಯೂಸ್ ಸೇರಿದಂತೆ ಯಾವುದೇ ಆಹಾರ ನೀಡುತ್ತಿರಲಿಲ್ಲ ಎಂದು ರೇವತಿ ಕಾಮತ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರೇವತಿ ಕಾಮತ್ ಮಕ್ಕಳ ಪಾಲನೆ ಕುರಿತು ಪೋಷಕರಿಗೆ ತಿಳಿ ಹೇಳಿದ್ದಾರೆ. ಹಲವು ಸವಾಲುಗಳ ನಡುವೆ ರೇವತಿ ಕಾಮತ್ ಮಕ್ಕಳ ಪಾಲನೆ ಮಾಡಿದ್ದರೆ. ಇದೀಗ ನಿಖಿಲ್ ಕಾಮತ್ ಹಾಗೂ ನಿತಿಮ್ ಕಾಮತ್ ಇಬ್ಬರು ಶ್ರೀಮಂತ ಉದ್ಯಮಗಳಾಗಿ ಮಿಂಚಿದ್ದಾರೆ. ಈ ಪೈಕಿ ನಿಖಿಲ್ ಕಾಮತ್, ಪಾಡ್ ಕಾಸ್ಟ್ ಮೂಲಕವೂ ಭಾರಿ ಜನಪ್ರಿಯತೆ ಗಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರ ವ್ಯಕ್ತಿಯನ್ನು ಪಾಡ್ ಕಾಸ್ಟ್ ಮೂಲಕ ಮಾತನಾಡಿಸಿದ್ದಾರೆ.
ಹಲವು ಉದ್ಯಮಗಳಲ್ಲಿ ಕಾಮತ್ ಹೂಡಿಕೆ
ಉದ್ಯಮಿ, ಹೂಡಿಕೆದಾರ ನಿಖಿಲ್ ಕಾಮತ್ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇತ್ತೀಚೆಗೆ ಒನ್ ಹ್ಯಾಂಡ್ ಕ್ಲಾಪ್ ಮೀಡಿಯಾದಲ್ಲೂ ಭಾರಿ ಪ್ರಮಾಣದ ಹೂಡಿಕೆ ಮಾಡಿದ್ದಾರೆ. ಈ ಹಿಂದೆ ಆಲ್ ಇಂಡಿಯಾ ಬಕ್ಚೋದ್ (ಎಐಬಿ) ಹುಟ್ಟು ಹಾಕಿದ್ದ ಆಕಾಶ್ ಹಾಗೂ ನವೀದ್ ಮನಕೊಡನ್ ಈ ಮೀಡಿಯಾ ಎಜೆನ್ಸಿ ಹುಟ್ಟು ಹಾಕಿದ್ದಾರೆ. ಇದರಲ್ಲಿ ನಿಖಿಲ್ ಕಾಮತ್ ಹೂಡಿಕೆ ಮಾಡಿದ್ದಾರೆ. ಎಷ್ಟು ಹೂಡಿಕೆ ಮಾಡಿದ್ದಾರೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ನಿಖಿಲ್ ಹಾಗೂ ನಿತಿಮ್ ಕಾಮತ್ ಜೆರೋಧ ಸಂಸ್ಥೆ ಹುಟ್ಟು ಹಾಕಿ ಭಾರತದಲ್ಲಿ ಷೇರು ಮಾರುಕಟ್ಟೆ ಹಾಗೂ ಹೂಡಿಕೆಯಲ್ಲಿ ಜನಸಾಮಾನ್ಯರನ್ನು ತೊಡಗಿಸಿಕೊಳ್ಳುವಂತೆ ಮಾಡಿದ್ದಾರೆ. ಈ ಜೆರೋಧಾ ಮೂಲಕ ಕಾಮತ್ ಸಹೋದರರು ಶ್ರೀಮಂತ ಉದ್ಯಮಿಗಳಾಗಿ ಹೊರಹೊಮ್ಮಿದ್ದಾರೆ. ಇದರ ಬೆನ್ನಲ್ಲೇ ಹಲವು ಸಂಸ್ಥೆಗಳು, ಸ್ಟಾರ್ಟ್ಅಪ್‌ಗಳಲ್ಲಿ ಕಾಮತ್ ಸಹೋದರರು ಹೂಡಿಕೆ ಮಾಡಿದ್ದಾರೆ.
ಇತ್ತೀಚೆಗೆ ರೇವತಿ ಕಾಮತ್ ತಮ್ಮ ಮೊಮ್ಮಗನ ಮೃದಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಕುರಿತು ಕೆಲ ಫೋಟೋ ಹಾಗೂ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.