
ನಿವೃತ್ತಿ ಸಮಯದಲ್ಲಿ ಸಾಕಷ್ಟು ಉಳಿತಾಯ ಇಲ್ಲದಿದ್ದರೆ ಕಷ್ಟ. ಖರ್ಚುಗಳನ್ನು ನಿಭಾಯಿಸಲು ಕಷ್ಟವಾಗುತ್ತದೆ. ಹಾಗಾಗಿ, ನಿವೃತ್ತಿಗೆ ಮುಂಚಿತವಾಗಿ ಯೋಜನೆ ರೂಪಿಸಿಕೊಳ್ಳುವುದು ಮುಖ್ಯ. ನಿವೃತ್ತಿ ಯೋಜನೆ ರೂಪಿಸುವಾಗ ಏನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು?
ತುರ್ತು ನಿಧಿ
ನಿವೃತ್ತಿ ಸಮಯಕ್ಕೆ ತುರ್ತು ನಿಧಿ ಇಟ್ಟುಕೊಳ್ಳುವುದು ಒಳ್ಳೆಯದು. ಅನಿರೀಕ್ಷಿತ ಖರ್ಚುಗಳನ್ನು ನಿಭಾಯಿಸಲು ಇದು ಸಹಾಯ ಮಾಡುತ್ತದೆ.
ಸಾಲ ತೀರಿಸಿ
ನಿವೃತ್ತಿ ನಂತರ ಸ್ಥಿರ ಆದಾಯ ಇರುವುದಿಲ್ಲ. ಆಗ ಸಾಲ ತೀರಿಸಲು ಕಷ್ಟವಾಗಬಹುದು. ಸಾಲ ಮುಂಚಿತವಾಗಿ ತೀರಿಸಿದರೆ ಬಡ್ಡಿ ಕಡಿಮೆ ಆಗುತ್ತದೆ.
ಆರೋಗ್ಯ ವಿಮೆ
ನಿವೃತ್ತಿ ಸಮಯದಲ್ಲಿ ಆರೋಗ್ಯಕ್ಕೆ ಹೆಚ್ಚು ಖರ್ಚಾಗುತ್ತದೆ. ಆಸ್ಪತ್ರೆ ಖರ್ಚು ಜಾಸ್ತಿ ಇರುತ್ತದೆ. ಹಾಗಾಗಿ ಆರೋಗ್ಯ ವಿಮೆ ಮುಖ್ಯ.
ಬದುಕಿಗೆ ಸ್ಪೂರ್ತಿ ನೀಡುವ ಕತ್ತೆ ಕಥೆ; ಜನ ಏನ್ ಅಂತಾರೆ ಅನ್ನೋದನ್ನ ಬಿಟ್ಟುಬಿಡಿ!
ನಿವೃತ್ತಿ ಆದಾಯ
ನಿವೃತ್ತಿ ನಂತರ ನಿಮಗೆ ಎಷ್ಟು ಆದಾಯ ಬರುತ್ತದೆ? ಹೂಡಿಕೆಯಿಂದ ಆದಾಯ ನಿಶ್ಚಿತವಾಗಿದ್ದರೆ ಎಷ್ಟು ಎಂದು ತಿಳಿದಿರಬೇಕು. ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿ ಸಿಗುವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಷೇರುಗಳು, ಬಾಂಡ್‌ಗಳು, ರಿಯಲ್ ಎಸ್ಟೇಟ್ ಮುಂತಾದವುಗಳಲ್ಲಿ ಹೂಡಿಕೆ ಮಾಡಿ ಆದಾಯ ಗಳಿಸಬಹುದು.
ಪ್ರತಿದಿನ ಕೆಲಸಕ್ಕೆ 600 ಕಿ.ಮೀ ವಿಮಾನದಲ್ಲೇ ಹೋಗಿ ಬರ್ತಾರೆ ಈ ಸೂಪರ್‌ಮಾಮ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.