ಚಿಲ್ಲರೆ ಹಣದುಬ್ಬರ ಡಿಸೆಂಬರ್‌ನಲ್ಲಿ ವರ್ಷದಲ್ಲಿಯೇ ಅತ್ಯಂತ ಕಡಿಮೆ!

By Santosh Naik  |  First Published Jan 12, 2023, 7:21 PM IST

ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ನವೆಂಬರ್ 2022 ರಲ್ಲಿ 5.88 ಶೇಕಡಾ ಮತ್ತು ಡಿಸೆಂಬರ್ 2021 ರಲ್ಲಿ ಶೇಕಡಾ 5.66 ರಷ್ಟಿತ್ತು. ಅದರೊಂದಿಗೆ ಸತತ ಮೂರನೇ ತಿಂಗಳು ಚಿಲ್ಲರೆ ಹಣದುಬ್ಬರದಲ್ಲಿ ಇಳಿಕೆ ಆದಂತಾಗಿದೆ.


ನವದೆಹಲಿ (ಜ.12): ಆಹಾರ ಪದಾರ್ಥಗಳ ಬೆಲೆಗಳು ಇಳಿಕೆಯಾಗಿರುವುದರಿಂದ ಡಿಸೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರವು ಒಂದು ವರ್ಷದ ಕನಿಷ್ಠ 5.72 ಶೇಕಡಾಕ್ಕೆ ಕುಸಿದಿದೆ ಎಂದು ಅಧಿಕೃತ ಅಂಕಿಅಂಶಗಳು ಬುಧವಾರ ತಿಳಿಸಿವೆ. ಡಿಸೆಂಬರ್ ಸತತ 2ನೇ ತಿಂಗಳಾಗಿದ್ದು, ಚಿಲ್ಲರೆ ಹಣದುಬ್ಬರವು ಆರ್‌ಬಿಐಯ ಟಾಲರೆನ್ಸ್‌ ಬ್ಯಾಂಡ್ 4 (+/- 2) ರಷ್ಟು ಒಳಗೆ ಬಂದಿದೆ. ಚಿಲ್ಲರೆ ಹಣದುಬ್ಬರವು ಪ್ರಾಥಮಿಕವಾಗಿ ಆಹಾರ ಮತ್ತು ಪಾನೀಯಗಳ ಹಣದುಬ್ಬರ ದರದ ಕುಸಿತದಿಂದಾಗಿ ಇಳಿಕೆಯಾಗಿದೆ. ಇದು ಭಾರತದ ಗ್ರಾಹಕ ಬೆಲೆ ಸೂಚ್ಯಂಕ (CPI) ಬಾಸ್ಕೆಟ್‌ನ 46% ನಷ್ಟಿದೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧಾರಿತ ಚಿಲ್ಲರೆ ಹಣದುಬ್ಬರವು ಅಕ್ಟೋಬರ್ 2022 ರಲ್ಲಿ 6.77 ಶೇಕಡಾ ಮತ್ತು ನವೆಂಬರ್‌ನಲ್ಲಿ 5.88 ಶೇಕಡಾದಷ್ಟಿತ್ತು. ಗ್ರಾಮೀಣ ಪ್ರದೇಶಗಳಲ್ಲಿನ ಸಿಪಿಐ ಹಣದುಬ್ಬರವು ನವೆಂಬರ್‌ನಲ್ಲಿ 6.09% ರಿಂದ ಡಿಸೆಂಬರ್‌ನಲ್ಲಿ 6.05% ಕ್ಕೆ ಇಳಿದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಚಿಲ್ಲರೆ ಹಣದುಬ್ಬರವು ನಗರ ಪ್ರದೇಶಗಳಲ್ಲಿ 5.39% ಕ್ಕೆ ಹೋಲಿಸಿದರೆ 6.05% ರಷ್ಟಿದೆ.

click me!