
ನವದೆಹಲಿ (ಮೇ 31): ಸಂಕಟ ಬಂದಾಗ ವೆಂಕಟರಮಣ ಎನ್ನುವಂತೆ ಕಷ್ಟಗಳು ಬಂದಾಗ ಮಾತ್ರ ದೇವರನ್ನು ನೆನೆಯುವವರೇ ಜಾಸ್ತಿ. ಕೋವಿಡ್ ಸಂಕಷ್ಟ ದೇಶಕ್ಕೆ ಯುದ್ಧ ಕಾಲಕ್ಕಿಂತಲೂ ಸಂದಿಗ್ಧ ಪರಿಸ್ಥಿತಿಯನ್ನು ತಂದೊಡ್ಡಿತ್ತು. ಭಾರತ ಸೇರಿದಂತೆ ಜಗತ್ತಿನ ಬಹುತೇಕ ರಾಷ್ಟ್ರಗಳು ಕೊರೋನಾ ಮಹಾಮಾರಿಯಿಂದ ತತ್ತರಿಸಿ ಹೋಗಿದ್ದವು. ಇಂಥಹ ಕಷ್ಟದ ಕಾಲದಲ್ಲಿ ಜನರು ದೇವರೆ ಮೊರೆ ಹೋದಂತೆ ತೋರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಕೊರೋನಾ ಅವಧಿಯಲ್ಲಿ, ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾಗ, ದೇಶದಲ್ಲಿ ಅಗರಬತ್ತಿಗಳ ಮಾರಾಟ ಹೆಚ್ಚಾಗಿದೆ.
ಕೊರೋನಾ ಕಾಲದಲ್ಲಿ ಅಗರಬತ್ತಿ ಉದ್ಯಮದ ಮಾರಾಟದಲ್ಲಿ 30 ಪ್ರತಿಶತದಷ್ಟು ಜಿಗಿತ ಕಂಡುಬಂದಿತ್ತು ಎಂದು ತಜ್ಞರು ಹೇಳಿದ್ದಾರೆ. ಆದರೆ ಕೊರೊನಾ ಸೋಂಕು ತಗ್ಗುತ್ತಿದ್ದಂತೆಯೇ ಜನರು ಕಚೇರಿಗೆ ತೆರಳಲಾರಂಭಿಸಿದ್ದು ಇದರೊಂದಿಗೆ ಅಗರಬತ್ತಿಗಳ ಮಾರಾಟದ ಬೆಳವಣಿಗೆಯೂ ಒಂದೇ ಅಂಕೆಗೆ ಇಳಿದಿದೆ. ಹೆಚ್ಚಿನ ಅಗರಬತ್ತಿಗಳ ವ್ಯಾಪಾರ ಅಸಂಘಟಿತ ವಲಯದಲ್ಲಿದೆ ಎಂಬುದು ಉಲ್ಲೇಖನೀಯ.
ಅಖಿಲ ಭಾರತ ಅಗರಬತ್ತಿ ತಯಾರಕರ ಸಂಘದ ಅಧ್ಯಕ್ಷ ಅರ್ಜುನ್ ರಂಗ ಮಾತನಾಡಿ, ಕೊರೊನಾ ಸೋಂಕು (Covid 19) ಹರಡುವ ಮೊದಲು ಮನೆಯಲ್ಲಿ ಪೂಜೆ ಮಾಡುವ ಸಮಯವನ್ನು ನಿಗದಿಪಡಿಸಲಾಗಿತ್ತು. ಆದರೆ ಲಾಕ್‌ಡೌನ್ ತೆರವು ಮತ್ತು ಪೂರೈಕೆ ಸರಪಳಿಯ ಸವಾಲುಗಳ ನಂತರ, ಪೂಜೆಯ ಸಮಯ ಬದಲಾಗಿದೆ.
ಇದನ್ನೂ ಓದಿ: ದೇಶದಲ್ಲಿ ನಕಲಿ ನೋಟು ಪ್ರಮಾಣ ಭಾರೀ ಏರಿಕೆ!
ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಮತ್ತು ಅವರು ಯಾವುದೇ ಸಮಯದಲ್ಲಿ ಪೂಜೆ ಮಾಡಬಹುದಾಗಿತ್ತು. ಈಗ ಅಗರಬತ್ತಿಗಳ ಬಹು ಬಳಕೆ ಕಡಿಮೆಯಾಗಿದೆ. ಈಗ ಉದ್ಯಮದ ವಾರ್ಷಿಕ ಬೆಳವಣಿಗೆ ಶೇ.5-6ಕ್ಕೆ ಇಳಿದಿದೆ. ಸಾಂಕ್ರಾಮಿಕ ರೋಗದ ನಂತರ, ಅಗರಬತ್ತಿಗಳನ್ನು ಖರೀದಿಸುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು ಎಂದು ರಂಗ ಹೇಳಿದ್ದಾರೆ.
ಅದಕ್ಕಾಗಿಯೇ ಅದರ ಬೇಡಿಕೆಯಲ್ಲಿ ಜಿಗಿತ ಕಂಡುಬಂದಿತ್ತು. ದೇಶದಾದ್ಯಂತ ಇದರ ಮಾರಾಟ ಸುಮಾರು 80 ಪ್ರತಿಶತದಷ್ಟಿದೆ. ಈ ದೃಷ್ಟಿಯಿಂದ ಐದರಿಂದ ಆರರಷ್ಟು ಬೆಳವಣಿಗೆಯೂ ಉತ್ತಮವಾಗಿದೆ ಎಂದು ಅವರು ಹೇಳಿದ್ದಾರೆ.
ಯಾವ ಅಗರಬತ್ತಿಗಳಿಗೆ ಹೆಚ್ಚು ಬೇಡಿಕೆ?: ಮೈಸೂರು ಡೀಪ್ ಪರ್ಫ್ಯೂಮರಿ ಹೌಸ್ (MDPH)ನ ವ್ಯವಸ್ಥಾಪಕ ಪಾಲುದಾರ ಅಂಕಿತ್ ಅಗರ್ವಾಲ್, ಕೋರೋನಾ ಮೊದಲ ಅಲೆಯ ನಂತರ, ಅಗರಬತ್ತಿ ಉದ್ಯಮದ ಬೇಡಿಕೆಯಲ್ಲಿ 30 ಪ್ರತಿಶತದಷ್ಟು ಜಿಗಿತವಾಗಿದೆ ಎಂದು ಹೇಳಿದರು.
ಜನರು ಮನೆಯಿಂದ ಕೆಲಸ ಮಾಡುತ್ತಿದ್ದರು (Work From Home) ಮತ್ತು ಪೂಜೆ ಮಾಡಲು ಪೂರ್ಣ ಸಮಯವನ್ನು ಹೊಂದಿದ್ದರು. ಸಾಂಕ್ರಾಮಿಕ ರೋಗವು ಜನರ ನಡವಳಿಕೆಯಲ್ಲಿ ಬದಲಾವಣೆಯನ್ನು ತಂದಿದೆ ಮತ್ತು ಇದು ಅಗರಬತ್ತಿಯ ವಿಷಯದಲ್ಲೂ ಕಂಡುಬಂದಿದೆ ಎಂದು ಅಗರ್ವಾಲ್ ಹೇಳಿದರು. ಗುಲಾಬಿ ಮತ್ತು ಶ್ರೀಗಂಧದ ಪರಿಮಳವನ್ನು ಹೊಂದಿರುವ ಅಗರಬತ್ತಿಗಳಿಗೆ ಇನ್ನೂ ಹೆಚ್ಚಿನ ಬೇಡಿಕೆಯಿದೆ. ಅಲ್ಲದೇ ಅನಾನಸ್, ಹಸಿರು ಸೇಬು, ಕಲ್ಲಂಗಡಿಗಳ ಪರಿಮಳವಿರುವ ಅಗರಬತ್ತಿಗಳಿಗೆ ಬೇಡಿಕೆಯೂ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ: 4 ಅಂಕೆಯ ಎಟಿಎಂ ಪಿನ್ ಹುಟ್ಟಿನ ಹಿಂದಿದೆ ಪತ್ನಿಯ ಮರೆವಿನ ಕಥೆ!
ಆದಾಗ್ಯೂ, ವೈಯಕ್ತಿಕ ಬ್ರಾಂಡ್‌ಗಳ ಕಾರ್ಯಕ್ಷಮತೆ ಇದರಲ್ಲಿ ಉತ್ತಮವಾಗಿತ್ತು. ಐಟಿಸಿಯ ಮುಖ್ಯ ಕಾರ್ಯನಿರ್ವಾಹಕ (ಧೂಪದ್ರವ್ಯ ಮತ್ತು ಬೆಂಕಿಕಡ್ಡಿಗಳು) ಗೌರವ್ ತಯಾಲ್ ಅವರು ಕಂಪನಿಯ ಪ್ರಮುಖ ಬ್ರ್ಯಾಂಡ್ ಮಂಗಳದೀಪ್ ಮಾರಾಟವು ಕಳೆದ ಎರಡು ವರ್ಷಗಳಲ್ಲಿ 12 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಐಟಿಸಿಯ ತಯಾಲ್ ಅವರು ಕೋರೋನಾ ಅವಧಿಯಲ್ಲಿ, ಮನೆಯಲ್ಲಿ ಹೆಚ್ಚು ಸುವಾಸನಯಿಂದ ಕೂಡಿರುವ ಅಗತ್ಯವಿತ್ತು ಎಂದು ಹೇಳಿದರು. ಆದ್ದರಿಂದ ಐಟಿಸಿ ಉಪವೇದ ( UpaVeda) ಶ್ರೇಣಿಯನ್ನು ಪ್ರಾರಂಭಿಸಿತು. ಅದು ಕರ್ಪೂರ ಮತ್ತು ತುಳಸಿಯ ಪರಿಮಳವನ್ನು ಹೊಂದಿತ್ತು. ದೇಶದಲ್ಲಿ ಅಗರಬತ್ತಿ ಉದ್ಯಮದ ಒಟ್ಟು ವ್ಯವಹಾರ 10 ರಿಂದ 12 ಸಾವಿರ ಕೋಟಿ. ಇದರಲ್ಲಿ ಅಸಂಘಟಿತ ವಲಯವೂ ಸೇರಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.