
ಮುಂಬೈ(ಜ.18): ರಿಲಯನ್ಸ್ ಅಧಿಪತಿ ಮುಖೇಶ್ ಅಂಬಾನಿ ಮೈಕ್ ಹಿಡಿದು ಮಾತಾಡ್ತಾರೆ ಅಂದ್ರೆ ಭಾರತದ ಉದ್ಯಮ ಕ್ಷೇತ್ರದ ಮೈಯೆಲ್ಲಾ ಕಣ್ಣಾಗಿ ಬಿಡುತ್ತದೆ. ಮುಖೇಶ್ ಈಗೇನು ಹೊಸ ಯೋಜನೆ ಘೋಷಿಸುತ್ತಾರೋ, ಅದರಿಂದ ಯಾವ ಉದ್ಯಮಕ್ಕೆ ಹೊಡೆತ ಬೀಳುತ್ತೋ ಎಂಬ ಕುತೂಹಲ ವಾಣಿಜ್ಯ ಕ್ಷೇತ್ರವನ್ನು ಆವರಿಸಿರುತ್ತದೆ.
ಅದರಂತೆ ಭಾರತದಲ್ಲಿ ಅಮೆಜಾನ್ ಮತ್ತು ವಾಲ್ ಮಾರ್ಟ್ ನ ಫ್ಲಿಪ್ ಕಾರ್ಟ್ ಗೆ ಪ್ರತಿಸ್ಪರ್ಧಿಯಾಗಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹೊಸ ಆನ್ ಲೈನ್ ಶಾಪಿಂಗ್ ತಾಣ ಆರಂಭಿಸುವುದಕ್ಕೆ ಭರ್ಜರಿ ಸಿದ್ಧತೆ ನಡೆಸಿದೆ.
ಗುಜರಾತ್‌ನ್ನು ಕೇಂದ್ರವಾಗಿರಿಸಿಕೊಂಡು ರಿಲಯನ್ಸ್ ಇ-ಕಾಮರ್ಸ್ ಪ್ರಾರಂಭಿಸಲು ಸಿದ್ಧತೆ ನಡೆಸಿದೆ. ಅಲ್ಲಿನ ಸುಮಾರು 12 ಲಕ್ಷ ಸಣ್ಣ ವ್ಯಾಪಾರಿಗಳನ್ನು ಒಗ್ಗೂಡಿಸಿ ರಿಲಯನ್ಸ್ ರಿಟೇಲ್ ಹೊಸ ವಾಣಿಜ್ಯ ವೇದಿಕೆ ಪ್ರಾರಂಭಿಸಲು ಯೋಜನೆ ಸಿದ್ಧವಾಗಿದೆ.
ಮುಖೇಶ್ ಅವರ ಈ ನಿರ್ಧಾರದಿಂದಾಗಿ ಭಾರತದ ಇ-ಕಾಮರ್ಸ್ ಕ್ಷೇತ್ರವನ್ನು ಆಳುತ್ತಿರುವ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಗಲಿಬಿಲಿಗೊಂಡಿದ್ದು, ವೈಬ್ರೆಂಟ್ ಗುಜರಾತ್ ಸಮಾವೇಶದಲ್ಲಿ ಭಾರತೀಯ ಕಂಪನಿಗಳ ಉತ್ತೇಜನ ಕುರಿತು ಮಾತನಾಡಿದ್ದ ಮುಖೇಶ್ ಇದೀಗ ಇ-ಕಾಮರ್ಸ್ ಕ್ಷೇತ್ರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಫಾರಿನ್ ಡಾಟಾಗೆ ಟಾಟಾ, ಇನ್ಮೇಲೆ ಓನ್ಲಿ ಇಂಡಿಯನ್ ಡಾಟಾ: ಅಂಬಾನಿ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.