ಎಸ್ ಬಿಐ ಕಾರ್ಡ್ ಜೊತೆಗೆ ರಿಲಯನ್ಸ್ ರಿಟೇಲ್ ಒಪ್ಪಂದ; ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಬಿಡುಗಡೆ

By Suvarna NewsFirst Published Nov 1, 2023, 5:38 PM IST
Highlights

ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸುವ ಉದ್ದೇಶದಿಂದ ರಿಲಯನ್ಸ್ ರಿಟೇಲ್ ಎಸ್ ಬಿಐ ಕಾರ್ಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಎರಡೂ ಸಂಸ್ಥೆಗಳು ತಮ್ಮ ವಹಿವಾಟುಗಳನ್ನು ವಿಸ್ತರಿಸಿಕೊಳ್ಳಲು ಪರಸ್ಪರ ಸಹಕಾರ ನೀಡಲಿವೆ. 

ನವದೆಹಲಿ (ನ.11): ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಕ್ರೆಡಿಟ್ ಕಾರ್ಡ್ ವಿತರಣಾ ಸಂಸ್ಥೆಯಾದ ಎಸ್ ಬಿಐ ಕಾರ್ಡ್ ಹಾಗೂ ರಿಲಯನ್ಸ್ ರಿಟೇಲ್ ನಡುವೆ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿ ಒಪ್ಪಂದ ಏರ್ಪಟ್ಟಿದೆ. ಇದರ ಅನ್ವಯ ಈ ಎರಡೂ ಸಂಸ್ಥೆಗಳು ಜೊತೆಯಾಗಿ ರಿಲಯನ್ಸ್ ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಬಿಡುಗಡೆ ಮಾಡಲಿವೆ. ಭಾರತದ ಸಾರ್ವಜನಿಕ ವಲಯದ ಅತೀದೊಡ್ಡ ಬ್ಯಾಂಕ್ ಹಾಗೂ ಆದಾಯದಲ್ಲಿ ಅತೀದೊಡ್ಡ ಕಂಪನಿಯ ನಡುವೆ ಇದು ಎರಡನೇ ಸಹಭಾಗಿತ್ವವಾಗಿದೆ. ಈ ಬಗ್ಗೆ ಎಸ್ ಬಿಐ ಕಾರ್ಡ್ ಸಿಇಒ ಅಭಿಜಿತ್ ಚಕ್ರವರ್ತಿ ಮಾಹಿತಿ ನೀಡಿದ್ದಾರೆ. ಈ ಕಾರ್ಡನ್ನು ರಿಲಯನ್ಸ್ ರಿಟೇಲ್ ಮಳಿಗೆಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ನೀಡಲಾಗುತ್ತದೆ. ಹಾಗೆಯೇ ಆನ್ ಲೈನ್ ಅರ್ಜಿ ಸಲ್ಲಿಕೆಯನ್ನು ಕೂಡ ಸ್ವೀಕರಿಸಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಆದರೆ, ಈ ಕಾರ್ಡ್ ಪಡೆಯಲು ಅರ್ಹತೆ ಹೊಂದಲು ಯಾವ ಮಾನದಂಡಗಳು ಅಗತ್ಯ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. 

'ಸುಸ್ಥಿರ ಸಹಭಾಗಿತ್ವ ಸ್ಥಾಪಿಸಲು ರಿಲಯನ್ಸ್ ನೆರವು ನೀಡಲಿದೆ ಎಂದು ನಾವು ಬಯಸುತ್ತೇವೆ. ಮೌಲ್ಯ ಹಾಗೂ ರಿವಾರ್ಡ್ಸ್ ಜೊತೆಗೆ ಡಿಸ್ಕೌಂಟ್ಸ್ ನೀಡುವ ಮೂಲಕ ನೆರವಾಗುವ ವಿಶ್ವಾಸವಿದೆ. ಟೈರ್ 1 ಹಾಗೂ ಟೈರ್ 2 ನಗರಗಳ ಆಚೆಗೂ ಎಸ್ ಬಿಐ ಹಾಗೂ ರಿಲಯನ್ಸ್ ರಿಟೇಲ್ ತಲುಪುವಂತೆ ನಾವು ಮಾಡಬಹುದು' ಎಂದು ಚಕ್ರವರ್ತಿ ಹೇಳಿದರು. ಈ ಹೊಸ ಸಹಭಾಗಿತ್ವದಿಂದ ಕಂಪನಿಯ ಟಾರ್ಗೆಟ್ ಎಷ್ಟಿದೆ ಎಂಬ ಬಗ್ಗೆ ಕೂಡ ಅವರು ಮಾಹಿತಿ ನೀಡಿಲ್ಲ.

18 ಮಿಲಿಯನ್ಸ್ ಕಾರ್ಡ್ ಗಿಂತಲೂ ಅಧಿಕ ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿರುವ ಎಸ್ ಬಿಐ ಕಾರ್ಡ್ ಎರಡನೇ ಅತೀದೊಡ್ಡ ಕ್ರೆಡಿಟ್ ಕಾರ್ಡ್ ವಿತರಕ ಸಂಸ್ಥೆಯಾಗಿದೆ. ಪ್ರಸ್ತುತ ಎಸ್ ಬಿಐ ಕಾರ್ಡ್ ಇಂಥ 14ಕೋ -ಬ್ರ್ಯಾಂಡ್ ಸಹಭಾಗಿತ್ವ ಹೊಂದಿದೆ. ರಿಲಯನ್ಸ್ ಜೊತೆಗಿನ ಈ ಕೋ-ಬ್ರ್ಯಾಂಡೆಂಡ್ ಕಾರ್ಡ್ ಎರಡು ವಿಧಗಳಲ್ಲಿ ಬಿಡುಗಡೆ ಮಾಡಲಾಗಿದೆ-ರಿಲಯನ್ಸ್ ಎಸ್ ಬಿಐ ಕಾರ್ಡ್ ಹಾಗೂ ರಿಲಯನ್ಸ್ ಎಸ್ ಬಿಐ ಕಾರ್ಡ್ ಪ್ರೈಮ್. ಇವೆರಡಕ್ಕೂ ಕ್ರಮವಾಗಿ 500ರೂ. ಹಾಗೂ 3000ರೂ. ವಾರ್ಷಿಕ ಶುಲ್ಕವಿದೆ. 

ಇಂಗ್ಲೆಂಡ್ ಮೂಲದ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್ ಖರೀದಿಗೆ ಇಶಾ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಸಜ್ಜು

ಪ್ರೈಮ್ ಕಾರ್ಡ್ ನಲ್ಲಿ ವಾರ್ಷಿಕ 3ಲಕ್ಷ ರೂ. ತನಕದ ವೆಚ್ಚಕ್ಕೆ ಶುಲ್ಕವನ್ನು ರದ್ದುಗೊಳಿಸಲಾಗಿದೆ. ಹಾಗೆಯೇ ಎಸ್ ಬಿಐ ಕಾರ್ಡ್ ಮೇಲೆ ವಾರ್ಷಿಕ 1ಲಕ್ಷ ರೂ. ವೆಚ್ಚಕ್ಕೆ ಯಾವುದೇ ಶುಲ್ಕವಿಲ್ಲ.

'ಎರಡು ವಲಯಗಳ  ಎರಡು ಅತೀದೊಡ್ಡ ಸಂಸ್ಥೆಗಳು ಜೊತೆಯಾದಾಗ ಅದರ ಫಲಿತಾಂಶ ಕೂಡ ದೊಡ್ಡದಿರುತ್ತದೆ. ಇಂಥ ಇನ್ನೂ ಅನೇಕ ಸಹಭಾಗಿತ್ವಗಳಿಗೆ ಇದು ಚಿಕ್ಕ ಆರಂಭ ಎಂದು ನಾವು ಭಾವಿಸುತ್ತೇವೆ' ಎಂದು ಎಸ್ ಬಿಐ ಡೆಪ್ಯೂಟಿ ಮ್ಯಾನೇಜಿಂಗ್ ಡೈರೆಕ್ಟರ್ ವಿನಯ್ ಟೊನ್ಸೆ ಭರವಸೆ ವ್ಯಕ್ತಪಡಿಸಿದ್ದಾರೆ.

ನಗರೀಕರಣ, ಶಿಕ್ಷಿತ ಮಧ್ಯಮ ವರ್ಗ, ಉದ್ಯೋಗಗಳಲ್ಲಿ ಮಹಿಳೆಯ ಪ್ರಮಾಣದಲ್ಲಿ ಹೆಚ್ಚಳ ಹಾಗೂ ಯುವಜನಾಂಗದ ಪ್ರಮಾಣ ಹೆಚ್ಚಿರೋದು ದೇಶದಲ್ಲಿ ಉತ್ಪನ್ನ ಹಾಗೂ ಸೇವೆಗಳ ಬಳಕೆ ಪ್ರಮಾಣದ ಏರಿಕೆಗೆ ಉತ್ತೇಜನ ನೀಡಲಿವೆ ಎಂದು ರಿಲಯನ್ಸ್ ನಿರ್ದೇಶಕ ವಿ. ಸುಬ್ರಮಣಿಯಂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ರಿಲಯನ್ಸ್ ನಲ್ಲಿ ಹೊಸ ಯುಗಾರಂಭ; ನಿರ್ದೇಶಕರ ಮಂಡಳಿಗೆ ಇಶಾ, ಆಕಾಶ್, ಅನಂತ್ ಸೇರ್ಪಡೆಗೆ ಷೇರುದಾರರ ಗ್ರೀನ್ ಸಿಗ್ನಲ್

'ನಾವು 18,600 ಮಳಿಗೆಗಳನ್ನು ಹೊಂದಿದ್ದೇವೆ. ಇವು ದಿನವೊಂದಕ್ಕೆ 3.5 ಲಕ್ಷ ವಹಿವಾಟುಗಳನ್ನು ನಡೆಸುತ್ತವೆ. ಎಸ್ ಬಿಐ 18 ಮಿಲಿಯನ್ ಕಾರ್ಡ್ ದಾರರನ್ನು ಹೊಂದಿದೆ. ಒಂದು ವೇಳೆ ಇದಕ್ಕೆ ನಾವು ನಮ್ಮ ಗ್ರಾಹಕರನ್ನು ಸೇರಿಸಿದರೆ ನಾವು ದೊಡ್ಡ ಕ್ರೆಡಿಟ್ ಕಾರ್ಡ್ ವ್ಯವಸ್ಥೆಯನ್ನೇ ನಿರ್ಮಿಸಬಹುದು. ಇದರಲ್ಲಿ ಭಾರತದಲ್ಲಿ ಇನ್ನೂ ಕ್ರೆಡಿಟ್ ಕಾರ್ಡ್ ತಲುಪದ ಜನರನ್ನು ತಲುಪಬಹುದು ಎಂದು ಸುಬ್ರಮಣಿಯಂ ತಿಳಿಸಿದ್ದಾರೆ. 

click me!