ಸೇನಾಪತಿ ಗೋಪಾಲಕೃಷ್ಣ. ಕ್ರಿಸ್ ಎಂದೇ ಜನಪ್ರಿಯವಾಗಿರುವ ಗೋಪಾಲಕೃಷ್ಣ 225 ಕೋಟಿ ರೂಪಾಯಿ ಹಣವನ್ನು ದಾನ ಮಾಡಿದ್ದಾರೆ. ಬೆಂಗಳೂರಿನ ಮೆದುಳು ಸಂಶೋಧನೆ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗೆ ಈ ಮೊತ್ತ ದಾನ ಮಾಡಿದ್ದಾರೆ. ಅಷ್ಟಕ್ಕು ಈ ಕ್ರಿಸ್ ಯಾರು? ಇವರ ಆದಾಯವೆಷ್ಟು?
ಬೆಂಗಳೂರು(ನ.01) ಸೇನಾಪತಿ ಗೋಪಾಲಕಷ್ಣ ಭಾರತದಲ್ಲಿ ಅತ್ಯಂತ ಜನಪ್ರಿಯ ಹೆಸರು. ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಗೋಪಾಲಕೃಷ್ಣ, ಹಲವು ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಇದಕ್ಕೂ ಮುಖ್ಯವಾಗಿ, ಬರೋಬ್ಬರಿ 5.65 ಲಕ್ಷ ಕೋಟಿ ರೂಪಾಯಿ ಮೌಲ್ಯದ ಇನ್ಫೋಸಿಸ್ ಸಂಸ್ಥೆಯ ಸಹ ಸಂಸ್ಥಾಪಕ. ಇದೀಗ ಗೋಪಾಲಕೃಷ್ಣ 225 ಕೋಟಿ ರೂಪಾಯಿ ಹಣವನ್ನು ಬೆಗಳೂರಿನ ಮೆದಳು ಸಂಶೋಧನಾ ಕೇಂದ್ರ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಗೆ ದಾನ ಮಾಡಿದ್ದಾರೆ.
ನಾರಾಯಣಮೂರ್ತಿ ಜೊತೆ 6 ಮಂದಿ ಪಾರ್ಟ್ನರ್ ಇನ್ಫೋಸಿಸ್ ಸಂಸ್ಥೆಯನ್ನು ಕಟ್ಟಿದ್ದಾರೆ. ಈ ಪೈಕಿ ಸೇನಾಪತಿ ಗೋಪಾಲಕೃಷ್ಣ ಕೂಡ ಒಬ್ಬರು. ಇದೀಗ ಇನ್ಫೋಸಿಸ್ 5,65,000 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತಿದೆ. 2014ರಲ್ಲಿ ಸೇನಾಪತಿ ಗೋಪಾಲಕೃಷ್ಣ ಇನ್ಫೋಸಿಸ್‌ನಿಂದ ನಿವೃತ್ತಿಯಾಗಿದ್ದಾರೆ. 2011ರಿಂದ 14ರ ವರೆಗೆ ಇನ್ಫೋಸಿಸ್ ವೈಸ್ ಚೇರ್ಮೆನ್ ಆಗಿ ಸೇವೆ ಸಲ್ಲಿಸಿದ್ದಾರೆ.2007 ರಿಂದ 2011ರ ವರೆಗೆ ಇನ್ಫೋಸಿಸ್ ಮ್ಯಾನೇಜಿಂಗ್ ಡೈರೆಕ್ಟರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
ಮುಕೇಶ್ ಅಂಬಾನಿ ನಂಬಿಕಸ್ಥ, ಇನ್ಫೋಸಿಸ್ ನಾರಾಯಣ ಮೂರ್ತಿ ಬಲಗೈನಂತಿದ್ದ ಕರಾವಳಿ ಮೂಲದ ವ್ಯಕ್ತಿ!
ಸದ್ಯ ಆ್ಯಕಿಲೇಟರ್ ವೆಂಚರ್ ಚೇರ್ಮೆನ್ ಆಗಿರುವ ಗೋಪಾಲಕೃಷ್ಣ, ಕಿ ಮೊಬಿಲಿಟಿ ಸೇರಿದಂತೆ ಹಲವು ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಗೋಪಾಲಕೃಷ್ಣ ಅವರ ಒಟ್ಟು ಆಸ್ತಿ 24,972 ಕೋಟಿ ರೂಪಾಯಿ. ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಒಲವು ತೋರಿಸುವ ಸೇನಾಪತಿ ಇದೀಗ ಆರೋಗ್ಯ ಕ್ಷೇತ್ರದ ಮಹತ್ತರ ಸಂಸ್ಥೆಗೆ ಬರೋಬ್ಬರಿ 225 ಕೋಟಿ ರೂಪಾಯಿ ದಾನ ಮಾಡಿದ್ದಾರೆ.
ನಮ್ಮ ದೇಶದಲ್ಲಿ ವೈದ್ಯರ ಸಂಖ್ಯೆ ಅಗತ್ಯವಿರುವುದಕ್ಕಿಂತ ಗಣನೀಯವಾಗಿ ಕಡಿಮೆ ಇದೆ. ತುರ್ತಾಗಿ ಅಷ್ಟುವೈದ್ಯರನ್ನು ಸೃಷ್ಟಿಸುವುದು ಸಾಧ್ಯವಿಲ್ಲದಿರುವುದರಿಂದ, ವೈದ್ಯಕೀಯ ಕ್ಷೇತ್ರದಲ್ಲಿ ಕಂಪ್ಯೂಟರ್ ಆಧಾರಿತ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸಿ)ಯನ್ನು ಬಳಸುವುದು ಅನಿವಾರ್ಯವಾಗಿದ್ದು, ಈ ಬಗ್ಗೆ ನಡೆಯುತ್ತಿರುವ ಸ್ಟಾರ್ಟ್ ಅಪ್ ಗಳು ಆಶಾದಾಯಕವಾಗಿವೆ ಎಂದು ಸೇನಾಪತಿ ಗೋಪಾಲಕೃಷ್ಣನ್ ಇತ್ತೀಚೆಗೆ ಹೇಳಿದ್ದರು.
ಈ ಐಐಟಿ ಪದವೀಧರನಿಗೆ ದಿನಕ್ಕೆ 15 ಲಕ್ಷಕ್ಕೂ ಹೆಚ್ಚು ಸಂಬಳ: ಬೆಂಗಳೂರಿನ ಪ್ರಮುಖ ಐಟಿ ಕಂಪನಿ ಸಿಇಒ ಇವ್ರೇ!
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 1000 ಮಂದಿಗೆ 2 ವೈದ್ಯರ ಅಗತ್ಯ ಇದೆ. ಅಮೆರಿಕದಲ್ಲಿ 1000 ಮಂದಿಗೆ 2.5 ವೈದ್ಯರಿದ್ದಾರೆ, ಚೀನಾದಲ್ಲಿ 1.5 ವೈದ್ಯರಿದ್ದಾರೆ. ಆದರೆ ಭಾರತದಲ್ಲಿ ಮಾತ್ರ 0.6 ವೈದ್ಯರಿದ್ದಾರೆ. ನಮ್ಮ ದೇಶದ ಜನಸಂಖ್ಯೆಗೆ 2 ಮಿಲಿಯನ್ ವೈದ್ಯರ ಅಗತ್ಯ ಇದೆ ಎಂದು ಸೇನಾಪತಿ ಹೇಳಿದ್ದರು.