
ಬೆಂಗಳೂರು(ಅ.13) ರತನ್ ಟಾಟಾ ನಿಧನಕ್ಕೆ ದೇಶವೆ ಕಂಬನಿ ಮಿಡಿದಿದೆ. ರತನ್ ಟಾಟಾ ಹೂಡಿಕೆ ಮಾಡಿದ ಸಂಸ್ಥೆಗಳೆಲ್ಲವೂ ದೇಶದಲ್ಲಿ ಕೇವಲ ದುಡ್ಡಿನ ವ್ಯವಹಾರ ಮಾತ್ರವಲ್ಲ, ಭಾರತೀಯತೆ, ಮೇಕ್ ಇನ್ ಇಂಡಿಯಾ, ಯುವಕರಿಗೆ ಉದ್ಯೋಗವಕಾಶ, ದೇಶಭಕ್ತಿ ತುಂಬುವ ಕೆಲಸ ಮಾಡುತ್ತಿದೆ. ಹೀಗೆ ರತನ್ ಟಾಟಾ ಸಮೂಹ ಸಂಸ್ಥೆಗಳ ಭಾಗವಾಗಿರುವ ಝುಡಿಯೋ ಬಟ್ಟೆ ಹಾಗೂ ಫ್ಯಾಶನ್ ಉತ್ಪನ್ನಗಳ ಮಳಿಗೆ ಅತೀ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಜನರಿಗೆ ನೀಡುತ್ತಿದೆ. ಇದೀಗ ರತನ್ ಟಾಟಾ ಝುಡಿಯೋಗೆ ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಠಕ್ಕರ್ ನೀಡಿದೆ. ಬೆಂಗಳೂರಿನಲ್ಲಿ ರಿಲಯನ್ಸ್ ಯುಸ್ತಾ ಅನ್ನೋ ಹೊಸ ಮಳಿಗೆ ಆರಂಭಿಸಿದೆ. ಇಲ್ಲಿ ಕೇವಲ 499 ರೂಪಾಯಿ ಬೆಲೆಯಲ್ಲಿ ಖರೀದಿ ಸಾಧ್ಯ.
ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಫ್ಯಾಷನ್ ಬ್ರ್ಯಾಂಡ್ ರಿಟೇಲ್ ಮಳಿಗೆಯನ್ನು ರಿಲಯನ್ಸ್ ಆರಂಭಿಸಿದೆ. ಬೆಂಗಳೂರಿನ ಕೋರಮಂಗಲದಲ್ಲಿ ಈ ಮಳಿಗೆ ಆರಂಭಗೊಂಡಿದೆ. ಹೊಚ್ಚ ಹೊಸ ಫ್ಯಾಷನ್ ಬಟ್ಟೆಗಳು, ಉತ್ತಮ ಗುಣಮಟ್ಟ, ಹತ್ತು ಹಲವು ಆಯ್ಕೆಗಳು ಈ ಯುಸ್ತಾ ಮಳಿಗೆಯಲ್ಲಿ ಲಭ್ಯವಿದೆ.
ಕೇವಲ 39 ರೂಪಾಯಿ ISD ರೀಚಾರ್ಜ್ ಪ್ಲಾನ್ ಘೋಷಿಸಿದ ಜಿಯೋ, ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ!
ಯುಸ್ತಾ ತನ್ನ ಮಳಿಗೆಯನ್ನು ವಿಸ್ತರಿಸುತ್ತಿದೆ. ಇದೀಗ ಬೆಂಗಳೂರಿನ ಇತೆರೆಡೆ ಯುಸ್ತಾ ಮಳಿಗೆ ಆರಂಭಿಸಲು ರಿಲಯನ್ಸ್ ಸಜ್ಜಾಗಿದೆ. ಭಾರತದ 27 ನಗರಗಳಲ್ಲಿ ಯುಸ್ತಾ ಮಳಿಗೆ ಹೊಂದಿದೆ. ಕರ್ನಾಟ ಸೇರಿದಂತೆ, ಮಹಾರಾಷ್ಟ್ರ, ಗುಜರಾತ್, ಉತ್ತರ ಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳ, ಹರ್ಯಾಣ, ಕೇರಳದ ಪ್ರಮುಖ ನಗರಗಳಲ್ಲಿ ಯುಸ್ತಾ ಮಳಿಗೆ ಆರಂಭಗೊಂಡಿದೆ. ಮಳಿಗೆ ಮಾತ್ರವಲ್ಲ, ಆನ್‌ಲೈನ್ ಮೂಲಕ ಶಾಪಿಂಗ್ ಮಾಡಲು ಇಲ್ಲಿ ಅವಕಾಶವಿದೆ.
ಟ್ರೆಂಡಿ ಉಡುಪುಗಳು, ಯುನಿಸೆಕ್ಸ್ ಶೈಲಿ, ವಿವಿಧ ಆಯ್ಕೆ, ಹೊಸ ಫ್ಯಾಶನ್ ಉತ್ಪನ್ನಗಳು ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದೆ. ಹೆಚ್ಚಿನ ಉತ್ಪನ್ನಗಳು ಕೇವಲ 499 ರೂಪಾಯಿ ಬೆಲೆಯಲ್ಲಿ ಲಭ್ಯವಿದೆ. ಯುಸ್ಟಾ ಕೈಗೆಟುಕುವ ಬೆಲೆಯ ಆಫರ್ ಜೊತೆಗೆ ಯುವ ಫ್ಯಾಷನ್ ಲೋಕದಲ್ಲಿ ಬಿರುಗಾಳಿ ರೀತಿಯಲ್ಲಿ ತನ್ನ ಆನ್-ಟ್ರೆಂಡ್ ಉಡುಪುಗಳನ್ನು ತಂದಿದೆ. ಬೆಂಗಳೂರು ಯುವ ಶಕ್ತಿ ಮತ್ತು ಸೃಜನಶೀಲತೆಯ ಕೇಂದ್ರವಾಗಿದ್ದು, ಈ ಮಳಿಗೆಯು ಫ್ಯಾಷನ್‌ನ ಭವಿಷ್ಯವನ್ನು ರೂಪಿಸುವ ಟ್ರೆಂಡ್‌ಸೆಟರ್‌ಗಳಿಗೆ ಪ್ರಮುಖ ತಾಣವಾಗಲಿದೆ ಎಂದು ರಿಲಯನ್ಸ್ ರಿಟೇಲ್ ಫ್ಯಾಶನ್ ಹೇಳಿದೆ. ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರು ಉತ್ತಮ ಬ್ರ್ಯಾಂಡ್ ಬಟ್ಟೆಗಳ ಖರೀದಿಸಲು ಇಲ್ಲಿ ಸಾಧ್ಯವಿದೆ ಎಂದಿದ್ದಾರೆ.
ಕೇವಲ 13 ಸಾವಿರ ರೂಗೆ ಜಿಯೋಬುಕ್ 11 ಲ್ಯಾಪ್‌ಟಾಪ್, ಇದು ದೀಪಾವಳಿ ಆಫರ್!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.