ಕೇವಲ 39 ರೂಪಾಯಿ ISD ರೀಚಾರ್ಜ್ ಪ್ಲಾನ್ ಘೋಷಿಸಿದ ಜಿಯೋ, ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ!

By Chethan Kumar  |  First Published Oct 13, 2024, 3:09 PM IST

ಮುಕೇಶ್ ಅಂಬಾನಿ ಜಿಯೋ ಇದೀಗ ಅತ್ಯಂತ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 39 ರೂಪಾಯಿಯಲ್ಲಿ ಐಎಸ್‌ಡಿ ಪ್ಯಾಕ್ ಘೋಷಿಸಿದೆ. ಇದೀಗ ಅತೀ ಕಡಿಮೆ ಬೆಲೆಯಲ್ಲಿ ಯಾವುದೇ ದೇಶಕ್ಕೆ ಕರೆ ಮಾಡಲು ಸಾಧ್ಯ. ಮುಕೇಶ್ ಅಂಬಾನಿ ಹೊಸ ಪ್ಲಾನ್ ಇದೀಗ ಟೆಲಿಕಾಂ ಕ್ಷೇತ್ರದಲ್ಲೇ ಹೊಸ ಸಂಚಲನ ಸೃಷ್ಟಿಸಿದೆ.


ಮುಂಬೈ(ಅ.13) ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಈಗಾಗಲೇ ಹಲವು ಪ್ಲಾನ್ ಜಾರಿಗೆ ತಂದಿದೆ. ಕಡಿಮೆ ಬೆಲೆ, ಗರಿಷ್ಠ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದೆ. ಇದೀಗ ಹೊಸ ಐಎಸ್‌ಡಿ ಪ್ಯಾಕ್ ಪರಿಚಯಿಸಿದೆ. ಕೇವಲ 39 ರೂಪಾಯಿಂದ ರಿಚಾರ್ಜ್ ಪ್ಲಾನ್ ಆರಂಭಗೊಳ್ಳುತ್ತಿದೆ. ಈ ಮೂಲಕ ಜಿಯೋ ಗ್ರಾಹಕರು ಯಾವುದೇ ದೇಶಕ್ಕೆ ತೆರಳಿದರೂ ಅತೀ ಕಡಿಮೆ ದರದಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಲು ಸಾಧ್ಯವಿದೆ. ಅಮೆರಿಕ, ಕಡೆನಾ ಸೇರಿದಂತೆ ಭಾರತೀಯರು ಹೆಚ್ಚಾಗಿ ತೆರಳುವು ರಾಷ್ಟ್ರಗಳಿಂದ ಅತೀ ಕಡಿಮೆ ವೆಚ್ಚದಲ್ಲಿ ಅಂತಾರಾಷ್ಟ್ರೀಯ ರೋಮಿಂಗ್ ಕಾಲ್ ಮಾಡಲು ಸಾಧ್ಯವಿದೆ. ಇದಕ್ಕಾಗಿ ಕೇವಲ39 ರೂಪಾಯಿಯಿಂದ ಆರಂಭಗೊಳ್ಳುವ ಪ್ಲಾನ್ ಘೋಷಿಸಲಾಗಿದೆ.

ಅಕ್ಟೋಬರ 10 ರಿಂದ ಹೊಸ ಐಎಸ್‌ಡಿ ರಿಚಾರ್ಜ್ ಪ್ಲಾನ್ ಜಾರಿಯಾಗಿದೆ. ಅಮೆರಿಕ, ಕೆನಡಾ ತೆರಳುವ ಜಿಯೋ ಗ್ರಾಹಕರು ಕೇವಲ 39 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಕರೆ ಮಾಡಲು ಸಾಧ್ಯವಿದೆ. 39 ರೂಪಾಯಿ ರೀಚಾರ್ಜ್ ಮಾಡಿದರೆ 30 ನಿಮಿಷ ಕಾಲ ಉಚಿತ ಕರೆ ಮಾಡಲು ಸಾಧ್ಯವಿದೆ. ಇದೀಗ ಜಿಯೋ ಸಂಪೂರ್ಣ ಪ್ಲಾನ್ ಪಟ್ಟಿ ಬಿಡುಗಡೆ ಮಾಡಿದೆ. ಇನ್ನು ಬಾಂಗ್ಲಾದೇಶ ತೆರಳುವ ಜಿಯೋ ಗ್ರಾಹಕರು ಕೇವಲ 49 ರೂಪಾಯಿ ರೀಚಾರ್ಜ್ ಮಾಡಿದರೆ 20 ನಿಮಿಷಗಳ ಕಾಲ ಅಂತಾರಾಷ್ಟ್ರೀಯ ರೊಮಿಂಗ್ ಕಾಲ್ ಸೌಲಭ್ಯ ಪಡೆಯಲಿದ್ದಾರೆ. 

Tap to resize

Latest Videos

ಆಯುಧ ಪೂಜೆಗೆ ಜಿಯೋ ಧಮಾಕ, ಪ್ರತಿ ದಿನ 2.5 ಜಿಬಿ, ಅನ್‌ಲಿಮಿಟೆಡ್ ಕಾಲ್, 1 ವರ್ಷ ವ್ಯಾಲಿಟಿಡಿ!

ಸಿಂಗಾಪುರ, ಥಾಯ್‌ಲೆಂಡ್, ಮಲೇಷಿಯಾ ಹಾಂಕ್‌ಕಾಂಗ್ ಪ್ರವಾಸ ಮಾಡುವ ಜಿಯೋ ಗ್ರಾಹಕರು59 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು 15 ನಿಮಿಷಗಳ ಇಂಟರ್‌ನ್ಯಾಷನಲ್ ರೋಮಿಂಗ್ ಕಾಲ್ ಪಡೆಯಲಿದ್ದಾರೆ. ಇನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಐಎಸ್‌ಡಿ ಕಾಲ್‌ಗಾಗಿ 69 ರೂಪಾಯಿ, ಯುಕೆ, ಜರ್ಮನಿ, ಫ್ರಾನ್ಸ್, ಸ್ಪೇನ್ ಐಎಸ್‌ಡಿ ಕಾಲ್‌ಗೆ 79 ರೂಪಾಯಿ ಘೋಷಿಸಲಾಗಿದೆ. ಇನ್ನು ಚೀನಾ ಭೂತಾನ್ ಜಪಾನ್ ದೇಶಕ್ಕೆ ಐಎಸ್‌ಡಿ ಕಾಲ್ ರೇಟ್ 89 ರೂಪಾಯಿ ನಿಗದಿಪಡಿಸಲಾಗಿದ್ದರೆ, ಯುಎಇ, ಸೌದಿ ಅರೇಬಿಯಾ, ಟರ್ಕಿ, ಕುವೈಟ್, ಬಹ್ರೈನ್ ಐಎಸ್‌ಡಿ ಕಾಲ್ ರೇಟ್‌ನ್ನು 99 ರೂಪಾಯಿ ನಿಗದಿಪಡಿಸಲಾಗಿದೆ.

ಸಾಮಾನ್ಯವಾಗಿ ಅಂತಾರಾಷ್ಟ್ರೀಯ ರೋಮಿಂಗ್ ಕಾಲ್ ಮಾಡಲು ದುಬಾರಿ ಬೆಲೆಯಾಗಲಿದೆ. ಆದರೆ ಜಿಯೋ ಹೊಸ ಪ್ಲಾನ್ ಘೋಷಿಸಿದೆ. ಸುಲಭವಾಗಿ ಜಿಯೋ ಗ್ರಾಹಕರು ಅತೀ ಕಡಿಮೆ ರೀಚಾರ್ಜ್ ಪ್ಲಾನ್ ಮೂಲಕ ಕರೆ ಮಾಡಲು ಸಾಧ್ಯವಿದೆ. ಇದು ಕೇವಲ ಕರೆ ಮಾಡಲು ಮಾತ್ರ. ಈ ರೀಚಾರ್ಜ್ ಪ್ಲಾನ್‌ನಲ್ಲಿ ಯಾವುದೇ ಡೇಟಾ ಸೌಲಭ್ಯ ಇರುವುದಿಲ್ಲ.  

ಅನ್‌ಲಿಮಿಟೆಡ್ ಡೇಟಾ, ಉಚಿತ ಕಾಲ್, ಒಟಿಟಿ ಸೇರಿ ಭರ್ಜರಿ ಕೊಡುಗೆ, ಜಿಯೋ ದೀಪಾವಳಿ ಆಫರ್!
 

click me!