ರಿಲಯನ್ಸ್ ನಿವ್ವಳ ಲಾಭ ಏರಿಕೆ: 30 ಕೋಟಿ ದಾಟಿದ ಜಿಯೋ ಗ್ರಾಹಕರು!

By Web DeskFirst Published Jul 20, 2019, 4:39 PM IST
Highlights

ರಿಲಯನ್ಸ್ ನಿವ್ವಳ ಲಾಭದಲ್ಲಿ ಗಮನಾರ್ಹ ಏರಿಕೆ| 30 ಕೋಟಿ ಗಡಿ ದಾಟಿದ ಜಿಯೋ ಗ್ರಾಹಕರು| ಜುಲೈ ತಿಂಗಳಲ್ಲಿ 10,104 ಕೋಟಿರೂ. ನಿವ್ವಳ ಲಾಭ| ಶೇ. 6.8%  ರಷ್ಟು ನಿವ್ವಳ ಲಾಭ ಏರಿಕೆ| ರಿಲಯನ್ಸ್ ರೀಟೆಲ್ ಮತ್ತು ಡಿಜಿಟಲ್ ಸೇವೆಗಳ ಪ್ರಮುಖ ಕೊಡುಗೆ|ಸಂಸ್ಥೆಯ ಒಟ್ಟು ಆದಾಯ 172,956 ಕೋಟಿ ರೂ.| 6,700 ಕ್ಕೂಹೆಚ್ಚು ನಗರಗಳಲ್ಲಿ 10,644 ಚಿಲ್ಲರೆ ಅಂಗಡಿಗಳು|

ಬೆಂಗಳೂರು(ಜು.20): ಜುಲೈ 19,2019ಕ್ಕೆ ಅಂತ್ಯವಾದ 201920ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್'ಗೆ 10,104  ಕೋಟಿರೂ. ನಿವ್ವಳ  ಲಾಭವಾಗಿದ್ದು, ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 6.8% ರಷ್ಟು ಏರಿಕೆ ಕಂಡಿದೆ. 

ಈ ಏರಿಕೆಗೆ ರಿಲಯನ್ಸ್ ರೀಟೆಲ್ ಮತ್ತು ಡಿಜಿಟಲ್ ಸೇವೆಗಳು ಪ್ರಮುಖ ಕೊಡುಗೆ ನೀಡಿದೆ. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 172,956 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಹೋಲಿಕೆಯಲ್ಲಿ ಇದು ಶೇ. 22.1 ರಷ್ಟು ಹೆಚ್ಚು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ರಿಲಯನ್ಸ್ ಸಮೂಹದ ಅಂಗಸಂಸ್ಥೆ ರಿಲಯನ್ಸ್ ಜಿಯೋ ಇನ್ಫೋಕಾಮ್, ಈ ಬಾರಿಯ ತ್ರೈ ಮಾಸಿಕದಲ್ಲಿ ಬಹಳಷ್ಟು ಲಾಭವನ್ನು ಗಳಿಕೆ ಮಾಡಿದೆ. ಈ ಅವಧಿಯಲ್ಲಿ ರಿಲಯನ್ಸ್ ಜಿಯೋ  ಇನ್ಫೋಕಾಮ್ 891 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಕೊನೆಯ ತ್ರೈಮಾಸಿಕದೊಡನೆ ಹೋಲಿಸಿದರೆ ಈ ಸಂಖ್ಯೆಯಲ್ಲಿ ಶೇ. 6.1% ರಷ್ಟು ಹೆಚ್ಚಳವಾಗಿದೆ. 

ಜಿಯೋ ಚಂದಾದಾರರ ಸಂಖ್ಯೆ ಈ ಅವಧಿಯಲ್ಲಿ 30 ಕೋಟಿಯ ಗಡಿ ದಾಟಿ ಒಟ್ಟು 33.1 ಕೋಟಿಗೆ ತಲುಪಿದೆ. 

ಜಿಯೋ ಗ್ರಾಹಕರು ಈ ತ್ರೈಮಾಸಿಕದಲ್ಲಿ 1,090 ಕೋಟಿ ಜಿಬಿಯಷ್ಟು ಡೇಟಾ ಬಳಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. 

ಗ್ರಾಹಕರ ಡೇಟಾ ಬಳಕೆಯ ಮಾಸಿಕ ಪ್ರಮಾಣ ತಲಾ 11.4 ಜಿಬಿ ತಲುಪಿದ್ದು ಈ ಪ್ರಮಾಣ ಕ್ಷಿಪ್ರವಾಗಿ ಹೆಚ್ಚುತ್ತಿದೆ.  ಅಲ್ಲದೇ ಜಿಯೋ ಬಳಕೆದಾರರು ಒಟ್ಟು 78,597 ಕೋಟಿ ನಿಮಿಷಗಳ ಕಾಲ ಕರೆಯನ್ನು ಮಾಡಿದ್ದಾರೆ.

ಈ ಅವಧಿಯಲ್ಲಿ ರಿಲಯನ್ಸ್ ರೀಟೇಲ್ ಕೂಡ ದಾಖಲೆಯ ಸಾಧನೆ ಮಾಡಿದ್ದು, ಈ ವಿಭಾಗದ ಆದಾಯ ಕಳೆದ ವರ್ಷದ ಹೋಲಿಕೆಯಲ್ಲಿ ಶೇ.47.5ರಷ್ಟು ಏರಿಕೆ ಕಂಡು 38196 ಕೋಟಿ ರೂ.  ತಲುಪಿದೆ. 

ತ್ರೈಮಾಸಿಕದಲ್ಲಿ ರಿಲಯನ್ಸ್ ಬ್ರಾಂಡ್ಸ್ ಬ್ರಿಟಿಷ್ಟಾಯ್ ಚಿಲ್ಲರೆ ವ್ಯಾಪಾರಿ ಹ್ಯಾಮ್ಲೀಸ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು ಮತ್ತು ಬ್ರಿಟಿಷ್ ಫುಟ್‌ವೇರ್ ಮತ್ತು ಹ್ಯಾಂಡ್ಬ್ಯಾಗ್ ಕರ್ಟ್ ಗೀಗರ್ ಅವರೊಂದಿಗೆ ವಿಶೇಷ ಪಾಲುದಾರಿಕೆಯನ್ನು ಹೊಂದಿದೆ. 

ರಿಲಯನ್ಸ್ ಚಿಲ್ಲರೆ ತ್ರೈಮಾಸಿಕದಲ್ಲಿ 265ಮಳಿಗೆಗಳನ್ನು ತೆರೆಯುವುದರೊಂದಿಗೆ ಹೊಸ ಮಳಿಗೆಗಳನ್ನು ಸೇರಿಸುತ್ತಲೇ ಇದೆ. 

ಇದಲ್ಲದೆ ರಿಲಯನ್ಸ್ ರಿಟೇಲ್ 6,700 ಕ್ಕೂ ಹೆಚ್ಚು ನಗರಗಳಲ್ಲಿ 10,644 ಚಿಲ್ಲರೆ ಅಂಗಡಿಗಳನ್ನು 23 ದಶಲಕ್ಷ ಚದರ ಅಡಿ ಮತ್ತು 516 ಪೆಟ್ರೋ ಚಿಲ್ಲರೆ ಮಾರಾಟ ಮಳಿಗೆಗಳನ್ನು ಹೊಂದಿದೆ.

click me!