ಶುಂಠಿ ಬೆಳೆಗಾರರಿಗೆ ಬ್ಯಾಡ್ ನ್ಯೂಸ್

Published : Jul 20, 2019, 09:22 AM IST
ಶುಂಠಿ ಬೆಳೆಗಾರರಿಗೆ ಬ್ಯಾಡ್ ನ್ಯೂಸ್

ಸಾರಾಂಶ

ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಶುಂಠಿ ಬೆಳೆಗಾರರಿಗೆ ಇಲ್ಲಿದೆ ಬ್ಯಾಡ್ ನ್ಯೂಸ್ ಏನದು?

ಬೆಂಗಳೂರು [ಜು.20] : ರಾಜ್ಯದ ಮಾರುಕಟ್ಟೆಯಲ್ಲಿ ಕ್ವಿಂಟಲ್ ಗೆ 10 ಸಾವಿರ ರು. ಗಡಿ ದಾಟಿದ್ದ ಶುಂಠಿ ಬೆಲೆ, ಈಗ ಹೊಸ ಬೆಳೆ ಬಂದಿರುವ ಹಿನ್ನೆಲೆಯಲ್ಲಿ ಕಡಿಮೆಯಾಗಿದೆ. ಪ್ರಸ್ತುತ ಹಳೆಯ ಶುಂಠಿ 60 ಕೆ.ಜಿ.ಗೆ 8000 ರಿಂದ 8500 ರು, ಹೊಸ ಶುಂಠಿ (ಸಾಧಾರಣ) 60 ಕೆ.ಜಿ.ಗೆ 4500 ರಿಂದ 4300 ರು.ಗೆ ಮಾರಾಟವಾಗುತ್ತಿದೆ. 

ಇತ್ತೀಚಿನ ದಿನಗಳಲ್ಲಿ ಮಳೆ ಕೊರತೆ, ಕೊಳೆ ರೋಗ, ಹವಾಮಾನ ವೈಪರೀತ್ಯ, ಬೆಲೆ ಕುಸಿತದಂತಹ ಕಾರಣಗಳಿಂದಾಗಿ ಶುಂಠಿ ಬೆಳೆಗಾರರು ನಷ್ಟಕ್ಕೆ ಒಳಗಾಗುತ್ತಿದ್ದ ಕಾರಣದಿಂದ ಕೆಲವು ಬೆಳೆಗಾರರು ಶುಂಠಿ ಕೃಷಿ ಸಹ ತ್ಯಜಿಸಿದ್ದರು. ಇದರಿಂದಾಗಿ ಉತ್ಪಾದನೆಯಲ್ಲಿ ಕುಸಿತವಾಗಿತ್ತು. ಕಳೆದ ಮೇ ಅಂತ್ಯಕ್ಕೆ ಕನಿಷ್ಠ 5200 ರಿಂದ ಗರಿಷ್ಠ 9000 ದವರೆಗೆ ತಲುಪಿತ್ತು. ಚಿಲ್ಲರೆ ಹಾಗೂ ಸಗಟು ಮಾರುಕಟ್ಟೆಗಳಲ್ಲೂ ಕೆ.ಜಿ.ಗೆ
ಶೇ.20 - 30ರಷ್ಟು ಬೆಲೆ ಏರಿಕೆಯಾಗಿತ್ತು. ನಂತರ ದಿನಗಳಲ್ಲಿ ಧಾರಣೆ ದ್ವಿಗುಣಗೊಂಡು 13  ಸಾವಿರ ತಲುಪಿತ್ತು. ಈಗ ಹೊಸ ಶುಂಠಿ ಬೆಳೆ ಬಂದಿರುವುದರಿಂದ ಬೆಲೆ ಇಳಿಕೆಯಾಗಿದೆ.

ಕರ್ನಾಟಕದಿಂದ ರಾಜಸ್ತಾನ, ಅಮೃತ್‌ಸರ, ಜೈಪುರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಗೆ ಶುಂಠಿ ಸರಬರಾಜಾಗುತ್ತದೆ. ಪ್ರಮುಖ ಮಾರಾಟ ಕೇಂದ್ರಗಳಾದ ಹಾಸನ, ಶಿವಮೊಗ್ಗದ ಶಿಕಾರಿಪುರ ಮಾರುಕಟ್ಟೆಯಲ್ಲಿ 60 ಕೆ.ಜಿ. ಚೀಲಕ್ಕೆ (ಸ್ವಚ್ಚಗೊಳಿಸಿದ ಕಚ್ಚಾ ಹೊಸ ಶುಂಠಿ) 4200 - 4300 ರು. ಇದೆ. ಈ ಹಿಂದೆ 5500 ರಿಂದ 6000ಕ್ಕೆ ಖರೀದಿಯಾಗಿತ್ತು. ಹಳೆಯ ಶುಂಠಿ ಗುಣಮಟ್ಟದ್ದು 8000 ರಿಂದ 8500 ರು., ವಿವಿಧ ಗುಣಮಟ್ಟದ ಪೂರ್ಣ ಒಣ ಶುಂಠಿ 10 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ ಎಂದು ಹಾಸನ ಕಿಸಾನ್ ಟ್ರೇಡರ್ಸ್‌ ಮಾಲೀಕರಾದ ರಾಜಗೋಪಾಲ್ ತಿಳಿಸಿದರು. 

ಕೇರಳ ವ್ಯಾಪಾರಿಗಳು ಕರ್ನಾಟಕದಲ್ಲಿ ಜಮೀನು ಗುತ್ತಿಗೆಗೆ ಪಡೆದು ಬೆಳೆಯುತ್ತಿದ್ದಾರೆ. ಹಾಸನ, ಶಿವಮೊಗ್ಗದಲ್ಲಿ ರಿಗೋಡಿ, ಹಿಮಾಚಲ್ (ಮೈಮಾ) ತಳಿ ಬೆಳೆಯಲಾಗುತ್ತದೆ. ರಿಗೋಡಿ ತಳಿಗೆ ಹೆಚ್ಚಿನ ಬೇಡಿಕೆ ಇದೆ. ರೈತರಿಗೂ ಉತ್ತಮ ಬೆಲೆ ಸಿಗುತ್ತಿದೆ. ಹೊಸ ಶುಂಠಿ (ಸಾಧಾರಣ) ಹೋಟೆಲ್, ಸ್ಥಳೀಯ ಮಾರುಕಟ್ಟೆಗಳಲ್ಲಿ ಬಳಕೆಯಾಗುತ್ತದೆ. ಹಾಸನ ಜಿಲ್ಲೆಯಲ್ಲಿ ಶೇ. 40 ರಷ್ಟು, ಶಿಕಾರಿಪುರದಲ್ಲಿ ಶೇ. 60 ರಷ್ಟು ಬೆಳೆ ಬಿತ್ತನೆಯಾಗಿದೆ. ಉತ್ತಮ ಮಳೆಯಾದಲ್ಲಿ ಇಳುವರಿ ಸಹ ಚೆನ್ನಾಗಿ ಬರಲಿದೆ ಎಂದು ವ್ಯಾಪಾರಿಗಳು ತಿಳಿಸಿದರು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Bengaluru: ವಿಜಯಾನಂದ ಟ್ರಾವೆಲ್ಸ್ ನಿಂದ ಹೊಸ ದಾಖಲೆ: ಸಾರಿಗೆಯಲ್ಲಿ ನೂತನ ಮೈಲಿಗಲ್ಲು
HDFC ಬಳಿಕ ICICI Bank ಮೇಲೆ LIC ಕಣ್ಣು; ನಾಳೆ ಈ ಎರಡೂ ಷೇರುಗಳ ಮೇಲೆ ಹೂಡಿಕೆದಾರರ ಗಮನ!