ದೀಪಾವಳಿಗೆ ಜಿಯೋದಿಂದ ಬಿಗ್ ಆಫರ್- ಒಂದು ವರ್ಷದವರೆಗೆ ಇಂಟರ್‌ನೆಟ್ ಫ್ರೀ

By Mahmad Rafik  |  First Published Oct 30, 2024, 3:40 PM IST

1 ವರ್ಷದವರೆಗೆ  ಗ್ರಾಹಕರು ಡೇಟಾವನ್ನು ಉಚಿತವಾಗಿ ಬಳಸಬಹುದಾಗಿದೆ.   5G ಡೇಟಾ ಜೊತೆಯಲ್ಲಿ ಗ್ರಾಹಕರಿಗೆ ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯವೂ ಸಿಗಲಿದೆ. 


ಮುಂಬೈ: ಭಾರತದಲ್ಲಿ ಅತಿಹೆಚ್ಚು ಬಳಕೆದಾರರನ್ನು ಹೊಂದುವ ಮೂಲಕ ನಂಬರ್ 1 ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ದೀಪಾವಳಿಯ ಆಫರ್ ನೀಡುತ್ತಿದೆ. ಈಗಾಗಲೇ ಹಲವು ಆಫರ್ ಘೋಷಣೆ ಮಾಡಿರುವ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ, ಇದೀಗ ಒಂದು ವರ್ಷದವರೆಗೆ ಉಚಿತ ಇಂಟರ್‌ನೆಟ್ ನೀಡುವದಾಗಿ ಮಹತ್ವದ ಘೋಷಣೆಯನ್ನು ಮಾಡಿದೆ. ಬೆಲೆ ಏರಿಕೆಯಿಂದ ಬಳಕೆದಾರರನ್ನು ಕಳೆದುಕೊಳ್ಳುತ್ತಿರುವ ಜಿಯೋ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಸೇವೆಯನ್ನು ಒದಗಿಸುವ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಇಂಟರ್‌ನೆಟ್ ಬಳಕೆದಾರರಿಗಾಗಿ ದೀಪಾವಳಿ ಸಂದರ್ಭದಲ್ಲಿ ಹೊಸ ಆಫರ್ ಹೊರ ತಂದಿದೆ. ಈ ಆಫರ್ ಅಡಿಯಲ್ಲಿ ಗ್ರಾಹಕರು ಡೇಟಾವನ್ನು ಉಚಿತವಾಗಿ ಬಳಸಬಹುದಾಗಿದೆ. ಅನ್‌ಲಿಮಿಟೆಡ್  5G ಡೇಟಾ ಜೊತೆಯಲ್ಲಿ ಗ್ರಾಹಕರಿಗೆ ಹೈಸ್ಪೀಡ್ ಇಂಟರ್‌ನೆಟ್ ಸೌಲಭ್ಯವೂ ಸಿಗಲಿದೆ.

Tap to resize

Latest Videos

undefined

ದೀಪಾವಳಿಯ ಆಫರ್ ಅಡಿಯಲ್ಲಿ ಜಿಯೋ ಗ್ರಾಹಕರಿಗೆ 1 ವರ್ಷದವರೆಗೆ ಉಚಿತ ಅನ್‌ಲಿಮಿಟೆಡ್ ಇಂಟರ್‌ನೆಟ್ ಸಿಗಲಿದೆ. ಈ ಆಫರ್ ನಿಮ್ಮದಾಗಬೇಕಾದ್ರೆ ಗ್ರಾಹಕರು 20 ಸಾವಿರ ರೂ.ಯವರೆಗೆ ಶಾಪಿಂಗ್ ಮಾಡಬಹುದು. ಜಿಯೋ ದೀಪಾವಳಿ ಆಫರ್ ಪಡೆಯಲು ಗ್ರಾಹಕರು My Storeನಿಂದ 20 ಸಾವಿರ ರೂಪಾಯಿ ಮೌಲ್ಯದ ಖರೀದಿ ಮಾಡಿದ್ರೆ 1 ವರ್ಷದ ಉಚಿತ ಇಂಟರ್‌ನೆಟ್ ಆಫರ್ ಆಕ್ಟಿವೇಟ್ ಅಗುತ್ತದೆ. ವರದಿಗಳ ಪ್ರಕಾರ, ಈ 1 ವರ್ಷದವರೆಗಿನ ಆಫರ್ ನವೆಂಬರ್ 3ರವರೆಗೆ ಮಾತ್ರ ಸಿಗಲಿದೆ. ನವೆಂಬರ್ 3ಕ್ಕೂ ಮೊದಲೇ My Storeನಿಂದ 20 ಸಾವಿರ ರೂಪಾಯಿಯ ಖರೀದಿ ಮಾಡಬೇಕಾಗುತ್ತದೆ. ಇಲ್ಲಿ ಶಾಪಿಂಗ್ ಮಾಡಿ ವಿಶೇಷ ಆಫರ್ ನಿಮ್ಮದಾಗಿಸಿಕೊಳ್ಳಬಹುದು. 

ಗ್ರಾಹಕರಿಗಾಗಿ ಹೊಸ 7 ಸೇವೆ ಬಿಡುಗಡೆಗೊಳಿಸಿದ ಬಿಎಸ್‌ಎನ್‌ಎಲ್: ಪತರಗುಟ್ಟಿದ ಜಿಯೋ, ಏರ್‌ಟೆಲ್

ಇಷ್ಟು ಮಾತ್ರವಲ್ಲದೇ ದೀಪಾವಳಿ ವಿಶೇಷ ಆಫರ್ ಅಡಿಯಲ್ಲಿ ಗ್ರಾಹಕರಿಗೆ Air Fiber plan ನೀಡಲಾಗುತ್ತಿದೆ. ಗ್ರಾಹಕರು ಯಾವುದೇ ಶುಲ್ಕ ಪಾವತಿಸದೇ 3 ತಿಂಗಳದ ಪ್ಯಾಕೇಜ್ ನೀಡಲಾಗುತ್ತಿದೆ. ಹೊಸ ಗ್ರಾಹಕರಿಗೆ ಉಚಿತ ಇಂಟೆರ್‌ನೆಟ್ ಸೌಲಭ್ಯವನ್ನು ಸಹ ಲಭ್ಯವಾಗುತ್ತಿದೆ. ಜಿಯೋ ಸಾವನ್ ಮ್ಯೂಸಿಕ್‌ ನಿಂದಲೂ ಮೂರು ತಿಂಗಳ ಉಚಿತ ಆಫರ್ ಬಿಡುಗಡೆ ಮಾಡಲಾಗಿದೆ.

699 ರೂಗೆ ಜಿಯೋ ಭಾರತ್ 4ಜಿ ಫೋನ್
ಜಿಯೋ ತನ್ನ ಭಾರತ್ 4ಜಿ ಫೋನ್ ಬೆಲೆಯಲ್ಲಿ ಭಾರಿ ಕಡಿತ ಮಾಡಿದೆ. ಇದರ ಪರಿಣಾಮ ಕೇವಲ 699 ರೂಪಾಯಿಗೆ ಇದೀಗ ಜಿಯೋ ಭಾರತ್ 4ಜಿ ಫೋನ್ ಲಭ್ಯವಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಜಿಯೋ ಭಾರತ್ 4ಜಿ ಫೋನ್ ಬೆಲೆಗಳ ಮೇಲ ಶೇಕಡಾ 30 ರಷ್ಟು ಕಡಿತಗೊಳಿಸಲಾಗಿದೆ.  ಇದು ಲಿಮಿಟೆಡ್ ಪಿರೆಡ್ ಕೊಡುಗೆಯಾಗಿದೆ. 

ಫ್ರೀ ಫ್ರೀ ಫ್ರೀ, ದೀಪಾವಳಿಗೆ ಜಿಯೋದಿಂದ ಮೂರು ತಿಂಗಳು ಉಚಿತ ಸಬ್‌ಸ್ಕ್ರಿಪ್ಷನ್; ಕೋಟ್ಯಂತರ ಬಳಕೆದಾರರಿಗೆ ಗಿಫ್ಟ್

click me!