ಮುಖೇಶ್ ಅಂಬಾನಿ ಟೋಟಲ್ ಆಸ್ತಿ: ಗಳಿಸಲಾಗಲ್ಲ ನಾವು ಹಿಡಿದ್ರೂ ಕುಸ್ತಿ!

By Web DeskFirst Published Jan 23, 2019, 12:07 PM IST
Highlights

ರಿಲಯನ್ಸ್ ಇಂಡಸ್ಟ್ರಿಸ್ ಒಡೆಯನ ಒಟ್ಟಾರೆ ಆಸ್ತಿ ಮೌಲ್ಯ ಎಷ್ಟು?| ಮುಖೇಶ್ ಅಂಬಾನಿ ದೌಲತ್ತಿಗೆ ವಿಶ್ವವೇ ಬೆರಗು| ಅಂಬಾನಿ ಒಟ್ಟು ಆಸ್ತಿ ಮೌಲ್ಯ ಭಾರತದ ಜಿಡಿಪಿಯ ಶೇ.1.7ರಷ್ಟಕ್ಕೆ ಸಮ| 11 ಸಾವಿರ ಕೋಟಿ ರೂ. ವೆಚ್ಚದ ಮನೆ| ಏಷ್ಯಾದ ಮೊದಲ ಮತ್ತು ವಿಶ್ವದ ೧೪ನೇ ಆಗರ್ಭ ಶ್ರೀಮಂತ ಮುಖೇಶ್ ಅಂಬಾನಿ

ನವದೆಹಲಿ(ಜ.23): ರಿಲಯನ್ಸ್ ಇಂಡಸ್ಟ್ರಿಸ್ ಒಡೆಯ ಮುಖೇಶ್ ಅಂಬಾನಿ ಆಗರ್ಭ ಶ್ರೀಮಂತರು ಎಂಬುದು ಎಲ್ಲರಿಗೂ ಗೊತ್ತು. ಅವರ ಒಟ್ಟು ಆಸ್ತಿ, ಮನೆ, ಕುಟುಂಬ, ಕಾರು, ಬಟ್ಟೆರ ಬರೆ, ಅವರ ಉದ್ಯಮ ಹೀಗೆ ಎಲ್ಲವನ್ನೂ ಎಲ್ಲರೂ ಬಲ್ಲರು.

ಆದರೆ ಮುಖೇಶ್ ಅಂಬಾನಿ ಒಟ್ಟಾರೆ ಆಸ್ತಿ ಮತ್ತು ಭಾರತದ ಪ್ರಸಕ್ತ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳಲ್ಲಿ ಅದೆಷ್ಟು ವ್ಯತ್ಯಾಸವಿದೆ ಎಂಬುದು ಬಹುಶಃ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.

ಏಷ್ಯಾದ ಮೊದಲ ಮತ್ತು ವಿಶ್ವದ 14ನೇ ಆಗರ್ಭ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಒಟ್ಟು ಆಸ್ತಿ ಮೌಲ್ಯ 45.3 ಬಿಲಿಯನ್ ಯುಎಸ್ ಡಾಲರ್. ಮುಖೇಶ್ ಕೇವಲ 2018ರಲ್ಲೇ 3.1 ಬಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 21,754 ಕೋಟಿ ರೂ. ಆಸ್ತಿ ಗಳಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರಿಸ್ ತ್ರೈಮಾಸಿಕ ವರದಿ ಪ್ರಕಾರ ಕಂಪನಿ ಸುಮಾರು ೬೫ ಸಾವಿರ ಕೋಟಿ ರೂ. ಲಾಭ ಗಳಿಸಿದೆ. ಅಲ್ಲದೇ ಸುಮಾರು 10 ಸಾವಿರ ಕೋಟಿ ರೂ. ಹೆಚ್ಚಿನ ಲಾಭ ಕೇವಲ ತ್ರೈಮಾಸಿಕ ಅವಧಿಯಲ್ಲೇ ಬಂದಿದೆ.

೨2018ರ ಕೊನೆಯ 3 ತಿಂಗಳಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಒಟ್ಟು 6 ಬಿಲಿಯನ್ ಯುಎಸ್ ಡಾಲರ್ ಲಾಭ ಗಳಿಸಿದೆ. ಮುಖೇಶ್ ಅಂಬಾನಿ ಕಂಪನಿಯ ಶೇ.40ರಷ್ಟು ಆಸ್ತಿಯ ಒಡೆಯರಾಗಿದ್ದಾರೆ.

ಮುಖೇಶ್ ಅವರ ಮುಂಬೈ ಮನೆ ANTILIA ಸುಮಾರು 400 ಮಿಲಿಯನ್ ಅಂದ್ರೆ 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಕಿಂಗ್ ಹ್ಯಾಮ್ ಅರಮನೆ ಬಳಿಕ ವಿಶ್ವದ ಅತ್ಯಂತ ದೊಡ್ಡ ಮನೆ ಎಂಬ ಹೆಗ್ಗಳಿಕೆಗೆ ANTILIA ಪಾತ್ರವಾಗಿದೆ.

ಇದಕ್ಕೂ ಅಚ್ಚರಿಯ ವಿಷಯ ಏನಂದ್ರೆ ಮುಖೇಶ್ ಅಂಬಾನಿ ಅವರ ಒಟ್ಟು ಆಸ್ತಿ ಮೌಲ್ಯ ಭಾರತದ ಜಿಡಿಪಿಯ ಶೇ. 1.7ರಷ್ಟಕ್ಕೆ ಸಮ.

ಮುಖೇಶ್ ಒಂದು ಮಾತಿಂದ ಅಮೆಜಾನ್ ಎದೆ ಢವಢವ!

ಫಾರಿನ್ ಡಾಟಾಗೆ ಟಾಟಾ, ಇನ್ಮೇಲೆ ಓನ್ಲಿ ಇಂಡಿಯನ್ ಡಾಟಾ: ಅಂಬಾನಿ!

click me!