
ನವದೆಹಲಿ(ಫೆ. 04): 'ಕಾರ್ಬನ್ ನ್ಯೂಟ್ರಲ್ ಆಯಿಲ್"ನ ವಿಶ್ವದ ಮೊದಲ ಸರಕು ಯು.ಎಸ್. ನಿಂದ ಶತಕೋಟ್ಯಧಿಪತಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗೆ ರವಾನೆ ಆಗಿದೆ. 2035ನೇ ಇಸವಿ ಹೊತ್ತಿಗೆ ನಿವ್ವಳ ಶೂನ್ಯ- ಕಾರ್ಬನ್ ಕಂಪೆನಿ ಆಗುವತ್ತ ರಿಲಯನ್ಸ್ ಇಂಡಸ್ಟ್ರೀಸ್ ಹೆಜ್ಜೆ ಇಟ್ಟಿದೆ.
ಗುಜರಾತ್ ನಲ್ಲಿನ ಜಮ್ನಾನಗರ್ ನಲ್ಲಿ ವರ್ಷಕ್ಕೆ 68.2 ಮಿಲಿಯನ್ ಟನ್ ತೈಲ ಸಂಸ್ಕರಣೆ ಮಾಡುವಂಥ ವಿಶ್ವದ ಅತಿ ದೊಡ್ಡ ಸಂಸ್ಕರಣಾ ಸಮುಚ್ಚಯವನ್ನು ರಿಲಯನ್ಸ್ ಹೊಂದಿದೆ. ಅಲ್ಲಿಗೆ ಎರಡು ಮಿಲಿಯನ್ ಬ್ಯಾರೆಲ್ ಸರಕು ಯು.ಎಸ್.ನ ನೈರುತ್ಯಕ್ಕೆ ಇರುವ ಪರ್ಮಿಯನ್ ಪ್ರದೇಶದಿಂದ ರವಾನೆ ಆಗಿದೆ ಎಂದು ಸರಬರಾಜುದಾರರು ತಿಳಿಸಿದ್ದಾರೆ.
ಆಕ್ಸಿ ಲೋ ಕಾರ್ಬನ್ ವೆಂಚರ್ಸ್ (OLCV) ಎಂಬುದು ಯು.ಎಸ್. ತೈಲ ಪ್ರಮುಖ Occidentalನ ಒಂದು ಘಟಕ. ಅದು ಕಾರ್ಬನ್ ನ್ಯೂಟ್ರಲ್ ತೈಲವನ್ನು ರಿಲಯನ್ಸ್ ಗೆ ರವಾನಿಸಿದೆ ಎಂದು ಸಂಸ್ಥೆ ಹೇಳಿದೆ. ಅತಿ ದೊಡ್ಡ ಕಚ್ಚಾ ತೈಲ ಹೊತ್ತು ತರುವ (VLCC) ಸೀ ಪರ್ಲ್ ಕಾರ್ಬಮ್ ನ್ಯೂಟ್ರಲ್ ಆಯಿಲ್ ಅನ್ನು ಜನವರಿ 28ರಂದು ಜಮ್ನಾನಗರ್ ಗೆ ತಲುಪಿಸಿದೆ.
ವಾತಾವರಣ ವ್ಯತ್ಯಾಸವಾದ ಕಚ್ಚಾ ತೈಲಕ್ಕೆ ಹೊಸ ಮಾರುಕಟ್ಟೆ ಸೃಷ್ಟಿಸುವಲ್ಲಿ ಈ ವಹಿವಾಟು ಮೊದಲ ಹೆಜ್ಜೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಮುಕೇಶ್ ಅಂಬಾನಿ ಮಾತನಾಡಿ, 2035ರ ಹೊತ್ತಿಗೆ ರಿಲಯನ್ಸ್ ಇಂಡಸ್ಟ್ರೀಸ್ ನೆಟ್ ಕಾರ್ಬನ್ ಜೀರೋ ಕಂಪೆನಿ ಆಗುವ ಯೋಜನೆ ಇದೆ ಎಂದಿದ್ದರು.
2050ರ ಹೊತ್ತಿಗೆ ನೆಟ್ ಜೀರೋ GHG ಎಮಿಷನ್ ಉತ್ಪನ್ನಗಳನ್ನು ಉತ್ಪಾದಿಸುವ ಗುರಿಯನ್ನು ಇರಿಸಿಕೊಂಡಿರುವ ಯು.ಎಸ್. ಮೂಲದ ಮೊದಲ ಅಂತರರಾಷ್ಟ್ರೀಯ ಇಂಧನ ಕಂಪೆನಿ ಒಕ್ಸಿಡೆಂಟಲ್.
ರಿಲಯನ್ಸ್ ನಿಂದ ಮಾರ್ಕೆಲ್ಯುಸ್ ಶೇಲ್ ಆಸ್ತಿ ಮಾರಾಟ:
ರಿಲಯನ್ಸ್ ಮಾರ್ಕೆಲ್ಯುಸ್, LLC (RMLLC), ಇದು ರಿಲಯನ್ಸ್ ಇಂಡಸ್ಟ್ರೀಸ್ ಒಡೆತನದಲ್ಲಿನ ಅಂಗ ಸಂಸ್ಥೆ. ನೈರುತ್ಯ ಪೆನ್ಸಿಲ್ವೇನಿಯಾದ ಮಾರ್ಕೆಲ್ಯುಸ್ ಶೇಲ್ ನಲ್ಲಿ ಕೆಲವು ಆಸ್ತಿ ಮಾರಾಟ ಮಾಡುವುದಕ್ಕೆ ರಿಲಯನ್ಸ್ ಒಪ್ಪಂದಕ್ಕೆ ಸಹಿ ಹಾಕಿದೆ. ಆ ಆಸ್ತಿಗಳ ಮೇಲಿನ ಸಂಪೂರ್ಣ ಒಡೆತನವನ್ನು ರಿಲಯನ್ಸ್ ಮಾರಲು ಒಪ್ಪಂದಕ್ಕೆ ಸಹಿ ಹಾಕಿದೆ.
ಸದ್ಯಕ್ಕೆ ಈ ಆಸ್ತಿಗಳನ್ನು ಇಕ್ಯೂಟಿ ಕಾರ್ಪೊರೇಷನ್ ನ ವಿವಿಧ ಸಹವರ್ತಿಗಳು ನಡೆಸಿಕೊಂಡು ಹೋಗುತ್ತಿದ್ದು, ಇದನ್ನು ನಾರ್ಥನ್ ಆಯಿಲ್ ಅಂಡ್ ಗ್ಯಾಸ್ (NOG), ಇಂಕ್, ಡೀಲ್ ವೇರ್ ಕಾರ್ಪೊರೇಷನ್ ಗೆ 250 ಮಿಲಿಯನ್ ಡಾಲರ್ ನಗದು ಹಾಗೂ ವಾರಂಟ್ ಗೆ ಮಾರಲಾಗುತ್ತಿದೆ. ಅದರಿಂದ ಮುಂದಿನ ಏಳು ವರ್ಷಗಳಲ್ಲಿ ಷೇರಿಗೆ $ 14ರಂತೆ NOGಯ 3.25 ಮಿಲಿಯನ್ ಸಾಮಾನ್ಯ ಷೇರು ಖರೀದಿಗೆ ಅವಕಾಶ ನೀಡುತ್ತದೆ.
ಖರೀದಿ ಮತ್ತು ಮಾರಾಟ ಒಪ್ಪಂದಕ್ಕೆ (PSA) ಫೆಬ್ರವರಿ 3ನೇ ತಾರೀಕಿನಂದು RMLLC ಮತ್ತು NOG ಮಧ್ಯೆ ಸಹಿ ಆಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.