
ನವದೆಹಲಿ (ಮಾ. 26): ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸೂಪರ್‌ಟೆಕ್ ರಿಯಲ್ ಎಸ್ಟೇಟ್ ಕಂಪನಿಯನ್ನು ದಿವಾಳಿ ಎಂದು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT) ಶುಕ್ರವಾರ ಘೋಷಣೆ ಮಾಡಿದೆ. ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ಎನ್‌ಸಿಎಲ್‌ಟಿ ಈ ಘೋಷಣೆ ಮಾಡಿದೆ.
ಹೀಗಾಗಿ ಮುಂದಿನ ಪ್ರಕ್ರಿಯೆ ಆರಂಭವಾಗುವವರೆಗೂ, ಸೂಪರ್‌ಟೆಕ್‌ನಿಂದ ಮನೆ ಖರೀದಿಗೆ ಹಣ ಪಾವತಿ ಮಾಡಿದ್ದ ಸುಮಾರು 25000 ಜನರು ಸಂಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಎನ್‌ಸಿಎಲ್‌ಟಿ ಆದೇಶವು ಸೂಪರ್‌ಟೆಕ್ ಗ್ರೂಪ್‌ನ ಇತರ ಕಂಪನಿಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅದು ತಿಳಿಸಿದೆ.
ಇದನ್ನೂ ಓದಿ: Supertech Twin Towers: ಮೇ 22ರೊಳಗೆ ನೊಯ್ಡಾದ ಸೂಪರ್‌ಟೆಕ್ ಅವಳಿ ಕಟ್ಟಡ ನೆಲಸಮ!
ಎನ್‌ಸಿಎಲ್‌ಟಿ ಆದೇಶವು ಎಲ್ಲಾ ಚಾಲ್ತಿಯಲ್ಲಿರುವ ಯೋಜನೆಗಳು ಅಥವಾ ಕಂಪನಿಯ ಕಾರ್ಯಾಚರಣೆಯಲ್ಲಿ ನಿರ್ಮಾಣದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು "ನಾವು ಹಂಚಿಕೆದಾರರಿಗೆ ಘಟಕಗಳ ವಿತರಣೆಯನ್ನು ನೀಡಲು ಬದ್ಧರಾಗಿದ್ದೇವೆ" ಎಂದು ಅದು ಹೇಳಿದೆ.ಫೆಬ್ರವರಿ 7 ರಂದು, ನೆಲಸಮವನ್ನು ಎರಡು ವಾರಗಳಲ್ಲಿ ಪ್ರಾರಂಭಿಸುವಂತೆ ಸುಪ್ರೀಂ ಕೋರ್ಟ್ ಅಧಿಕಾರಿಗಳಿಗೆ ಸೂಚಿಸಿತ್ತು.
ಈ ಘೋಷಣೆಯ ಹಿನ್ನೆಲೆಯಲ್ಲಿ ಸೂಪರ್‌ಟೆಕ್ ಕಂಪನಿ ಎನ್‌ಸಿಎಲ್‌ಟಿ ಆದೇಶದ ವಿರುದ್ಧ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿದೆ. ಅಲ್ಲದೇ ಘೋಷಣೆಯಿಂದಾಗಿ ಕಂಪನಿಯ ಚಾಲ್ತಿಯಲ್ಲಿರುವ ಯೋಜನೆಗಳು ಅಥವಾ ಕಂಪನಿಯ ಯಾವುದೇ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವುದಿಲ್ಲ. ಗ್ರಾಹಕರಿಗೆ ನಿಗದಿತ ಸಮಯದಲ್ಲಿ ಮನೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದೆ.
ನೋಯ್ಡಾದಲ್ಲಿರುವ ಕಂಪನಿಯ 2 ಅಕ್ರಮ ಟವರ್‌ಗಳನ್ನು ಕೆಡವಲು ಸುಪ್ರೀಂ ಕೋರ್ಟ್ ಆದೇಶಿಸಿದ ನಂತರ ಕಂಪನಿಯು ಅಪಾರ ಒತ್ತಡಕ್ಕೆ ಒಳಗಾಗಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದ ಸುಮಾರು 150 ಕೋಟಿ ಸಾಲ ಸೇರಿದಂತೆ ರಿಯಲ್ ಎಸ್ಟೇಟ್ ಸಂಸ್ಥೆಯ ಸಾಲವು ಸುಮಾರು 1,200 ಕೋಟಿ ರೂ. ಆಗಿದೆ.
ಇದನ್ನೂ ಓದಿ: Sri Lankan Economic Crisis: ಲಂಕಾಗೆ 40ಸಾವಿರ ಟನ್ ಡೀಸೆಲ್ ನೀಡಿ ನೆರವಾದ ಭಾರತ
ನೋಯ್ಡಾದ 40 ಮಹಡಿ ಬಿಲ್ಡಿಂಗ್: ಅಕ್ರಮ ಕಟ್ಟಡದ ಕಾರಣಕ್ಕಾಗಿ ಸುಪ್ರೀಂ ಕೋರ್ಟ್ ನಿಂದ ನೆಲಸಮದ (Supreme Court Order) ಆದೇಶ ಪಡೆದುಕೊಂಡಿರುವ ನೋಯ್ಡಾದ ಸೆಕ್ಟರ್ 93ಎಯಲ್ಲಿರುವ ಸೂಪರ್ ಟೆಕ್ ಅವಳಿ ಕಟ್ಟಡವನ್ನು (Supertech Emerald Court) ಮೇ 22 ರಂದು ಮಧ್ಯಾಹ್ನ 2.30ಕ್ಕೆ ಉರುಳಿಸಲಾಗುತ್ತದೆ. ಕಟ್ಟಲು ಹಲವು ವರ್ಷಗಳನ್ನು ತೆಗೆದುಕೊಂಡಿರುವ ಈ ಕಟ್ಟಡ ಕೇವಲ 9 ಸೆಕೆಂಡ್ ಗಳಲ್ಲೇ ಧರಗೆ ಉರುಳಲಿದೆ ಎಂದರೆ ಅಚ್ಚರಿಯಾಗದೆ ಇರದು!
ಆಗಸ್ಟ್ 31, 2021 ರಂದು ಅವಳಿ ಗೋಪುರಗಳನ್ನು ಉರುಳಿಸಲು ಸುಪ್ರೀಂ ಕೋರ್ಟ್ ಆದೇಶದ ನಂತರ ನಿಖರವಾಗಿ ಒಂಬತ್ತು ತಿಂಗಳ ಬಳಿಕ ಈ ಕಾರ್ಯಕ್ರಮ ನಡೆಯಲಿದೆ. ಸೂಪರ್‌ಟೆಕ್‌ನ ಅಪೆಕ್ಸ್ (100 ಮೀಟರ್) ಮತ್ತು ಸೆಯಾನೆ (97 ಮೀಟರ್) ಅವಳಿ ಗೋಪುರಗಳು ಕಟ್ಟಡದ ನಿಯಮಗಳನ್ನು ಉಲ್ಲಂಘಿಸಿವೆ. ಸುಪ್ರೀಂ ಕೋರ್ಟ್, ಯೋಜನೆಯ ಅನುಮೋದನೆಗಾಗಿ ಸ್ಥಳೀಯ ನೋಯ್ಡಾ ಪ್ರಾಧಿಕಾರವನ್ನು (Noida Authority) ತರಾಟೆಗೆ ತೆಗೆದುಕೊಂಡಿತು.
ಸೆಕ್ಟರ್ 93A ನಲ್ಲಿರುವ ಟವರ್‌ಗಳ ಸಮೀಪದಲ್ಲಿ ವಾಸಿಸುವ ಸುಮಾರು 1,500 ಕುಟುಂಬಗಳನ್ನು ಅವರ ಮನೆಗಳಿಂದ ಸ್ಥಳಾಂತರಿಸಲಾಗುತ್ತದೆ. ಮೇ 22 ರಂದು ಮಧ್ಯಾಹ್ನ 2:30 ಕ್ಕೆ ಸ್ಫೋಟ ಸಂಭವಿಸಿದಾಗ ಈ ಕುಟುಂಬಗಳನ್ನು ಸುಮಾರು ಐದು ಗಂಟೆಗಳ ಕಾಲ ಸುತ್ತಮುತ್ತಲ ಪ್ರದೇಶದಿಂದ ತೆರವು ಮಾಡಲಾಗುತ್ತದೆ. ಟವರ್‌ಗಳಿಗೆ ಹೋಗುವ ರಸ್ತೆಗಳು ಮತ್ತು ಸೈಟ್‌ಗೆ ಸಮೀಪವಿರುವ ನೋಯ್ಡಾ-ಗ್ರೇಟರ್ ನೋಯ್ಡಾ ಎಕ್ಸ್‌ಪ್ರೆಸ್‌ವೇ ಸಂಚಾರಕ್ಕಾಗಿ ಮುಚ್ಚಲಾಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.