
ಮುಂಬೈ(ಡಿ.24): ಜನರಿಗೆ ಯಾವುದೇ ಖಾತರಿ ಇಲ್ಲದೇ ದೀಢೀರ್ ಸಾಲ ನೀಡುವ ಡಿಜಿಟಲ್ ಸಾಲದ ವೇದಿಕೆಗಳು ಹಾಗೂ ಮೊಬೈಲ್ ಆ್ಯಪ್‌ಗಳ ಆಮಿಷಕ್ಕೆ ಬಲಿ ಆಗದಂತೆ ರಿಸವ್‌ರ್ ಬ್ಯಾಂಕ್ ಬುಧವಾರ ಎಚ್ಚರಿಕೆ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವೇದಿಕೆಗಳ ಮೂಲಕ ಸಾಲ ನೀಡುವ ಅನಧಿಕೃತ ಸಂಸ್ಥೆಗಳು ಹೆಚ್ಚುತ್ತಿದ್ದು, ಜನಸಾಮಾನ್ಯರು ಹಾಗೂ ಸಣ್ಣ ವ್ಯಾಪಾರಿಗಳು ಈ ರೀತಿಯ ಆಮಿಷಗಳಿಗೆ ಬಲಿ ಆಗುತ್ತಿದ್ದಾರೆ. ಇಂತಹ ಸಂಸ್ಥೆಗಳು ಸಾಲಗಾರರಿಗೆ ಹೆಚ್ಚಿನ ಬಡ್ಡಿ ಹಾಗೂ ಗೌಪ್ಯ ಶುಲ್ಕಗಳನ್ನು ವಿಧಿಸುತ್ತಿವೆ. ಬಳಿಕ ಬಲವಂತ ಹಾಗೂ ಅಕ್ರಮ ವಿಧಾನದ ಮೂಲಕ ಸಾಲ ವಸೂಲಿ ಮಾಡುತ್ತಿವೆ ಎನ್ನಲಾಗಿದೆ.
ಬಳಿಕ ಸಾಲ ಒಪ್ಪಂದವನ್ನು ದುರ್ಬಳಕೆ ಮಾಡಿಕೊಂಡು ಸಾಲಗಾರರ ಮೊಬೈಲ್ ಮಾಹಿತಿಯನ್ನು ಕದಿಯಲಾಗುತ್ತಿದೆ. ಸಾರ್ವಜನಿಕರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಜೊತೆಗೆ ಅಪರಿಚಿತ ವ್ಯಕ್ತಿಗಳು ಅಥವಾ ಅನಧಿಕೃತ ಆ್ಯಪ್‌ಗಳ ಜೊತೆ ಕೆವೈಸಿ ದಾಖಲೆಗಳನ್ನು ಯಾವತ್ತೂ ಹಂಚಿಕೊಳ್ಳಬೇಡಿ ಎಂದು ಎಂದು ಆರ್‌ಬಿಐನ ಹೇಳಿಕೆಯಲ್ಲಿ ತಿಳಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.